More

    ಕೊಕಟನೂರ ರೇಣುಕಾ ಯಲ್ಲಮ್ಮ ಜಾತ್ರೆ ಜೋರು

    ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸುೇತ್ರ ಕೊಕಟನೂರ ರೇಣುಕಾ ಯಲ್ಲಮ್ಮದೇವಿ ಜಾತ್ರೆಯ ನಾಲ್ಕನೇ ದಿನವಾದ ಬುಧವಾರ ಪಲ್ಲಕ್ಕಿ ಉತ್ಸವ, ಅಗ್ನಿ ಪ್ರವೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಂಡಾರದ ಓಕುಳಿಯೊಂದಿಗೆ ಸಂಭ್ರಮದಿಂದ ಜರುಗಿತು.

    ಬೆಳಗ್ಗೆ ದೇವಿ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆ ಮೂಲಕ ಜೋಗುಳ ಬಾವಿ ಸತ್ಯವ್ವನ ದೇವಸ್ಥಾನಕ್ಕೆ ತೆರಳಿ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ದೇಸಾಯಿವಾಡೆಯಲ್ಲಿ ದೇವಿ ಮೂರ್ತಿ ಪೂಜೆ ಹಾಗೂ ಉಡಿ ತುಂಬಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳ, ಚೌಡಕಿ ಮತ್ತು ಶಹನಾಯಿ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಂತರ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತೆರಳಿ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.ಬಳಿಕ ಅಗ್ನಿಕುಂಡಕ್ಕೆ ತೆರಳಿ ಭಕ್ತಾಧಿಗಳು ಪಲ್ಲಕ್ಕಿ ಹಾಗೂ ದೇವಿಗೆ ಭಂಡಾರ ಸಮರ್ಪಿಸಿ ನಾಮಸ್ಮರಣೆ ಮಾಡಿದರು.

    ಮಂಗಳಮುಖಿಯರ ಕುಣಿತ: ಬೆಳಿಗ್ಗೆಯಿಂದಲೇ ನೂರಾರು ಮಂಗಳಮುಖಿಯರು ಸರ್ವಾಲಂಕಾರ ಭೂಷಿತರಾಗಿ ಜಾತ್ರೆಗೆ ಆಗಮಿಸಿ ಆಕರ್ಷಣೆಯ ಕೇಂದ್ರಬಿಂದುವಾದರು. ಅವರು ದೇವರ ಮುಂದಿನ ಕುಣಿತ ಎಲ್ಲರ ಮನಸೊರೆಗೊಂಡಿತು. ಕಲಾಸೇವೆಯಲ್ಲಿ ಪಾಲ್ಗೊಂಡ ದೇವಿಯ ಕೃಪೆಗೆ ಪಾತ್ರರಾದರು. ಹಾಡು, ಕುಣಿತ ಮತ್ತು ಸಂಗೀತ ಮೇಳ ಭಕ್ತರನ್ನು ಹಿಡಿದಿಟ್ಟವು.

    ಅರ್ಚಕ ಅರ್ಜುನ ಪೂಜಾರಿ, ವೇಮೂ ಗುರುಮೂರ್ತಯ್ಯ ಕಾಡದೇವರಮಠ, ಬಸೀರ್​ ಮುಲ್ಲಾ, ವಿಶಾಲ ದೇಸಾಯಿ, ಜಗದೀಶ ಪಾಟೀಲ, ಶಾಮರಾವ್​ ಪೂಜಾರಿ, ಸುರೇಶ ಪಾಟಣಕರ, ಶಂಕರ ಸವದಿ, ಸುಭಾಷ ಪಾಟಣಕರ, ಅನಿಲ ಮುಳಿಕ, ಪ್ರಭಾಕರ ಚವ್ಹಾಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts