More

    ಕೊಂಡ್ಲಿ ಬಿಸಿಎಂ ಹಾಸ್ಟೆಲ್​ನಲ್ಲಿ ಚಿಕಿತ್ಸೆ

    ಸಿದ್ದಾಪುರ: ರಾಜ್ಯದ ವಿವಿಧ ಕಡೆಗಳಿಂದ ಜನರು ಊರಿಗೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಕರೊನಾ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ. ಮುಂಜಾಗ್ರತೆಯಾಗಿ ತಾಲೂಕಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಟ್ಟಣದ ಕೊಂಡ್ಲಿ ಬಿಸಿಎಂ ಹಾಸ್ಟೆಲ್ ಅನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಮಾಡಲಾಗಿದೆ ಎಂದು ಪಪಂ ಆಡಳಿತಾಧಿಕಾರಿ, ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಹೇಳಿದರು.

    ಪಪಂ ಸಭಾಂಗಣದಲ್ಲಿ ಕರೊನಾ ನಿಯಂತ್ರಣದ ಕುರಿತು ಗುರುವಾರ ಜರುಗಿದ ಪಪಂ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೋವಿಡ್-19 ಲಕ್ಷಣ ಇಲ್ಲದೇ ಪಾಸಿಟಿವ್ ಬಂದವರಿಗೆ ಕೊಂಡ್ಲಿ ಬಿಸಿಎಂ ಹಾಸ್ಟೆಲ್​ನಲ್ಲಿ ಚಿಕಿತ್ಸೆ ನೀಡಲಾಗುವುದು. ಲಕ್ಷಗಳಿದ್ದರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ರೋಗ ಲಕ್ಷಣ ಹೆಚ್ಚಾಗಿದ್ದರೆ ಅಂಥವರಿಗೆ ಕಾರವಾರದ ಕೋವಿಡ್-19 ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗವುದು ಎಂದರು.

    ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾತನಾಡಿ, ಮಾಸ್ಕ್ ಧರಿಸದೇ ಓಡಾಡುವವರಿಗೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದೇ ಇರುವವರಿಗೆ ಈಗಾಗಲೇ ದಂಡ ಹಾಕಲಾಗಿದೆ. ಮುಂದಿನ ದಿನದಲ್ಲಿಯೂ ದಂಡ ಹಾಕಲಾಗುವುದು ಎಂದು ಹೇಳಿದರು.

    ಸಭೆಯಲ್ಲಿ ಮಾರುತಿ ಟಿ. ನಾಯ್ಕ, ಗುರುರಾಜ ಶಾನಭಾಗ, ರವಿ ನಾಯ್ಕ, ನಂದನ ಬೋರ್ಕರ್, ವಿನಯ ಹೊನ್ನೆಗುಂಡಿ, ಸುಧೀರ್ ಕೊಂಡ್ಲಿ, ವಿಜೇಂದ್ರ ಗೌಡರ್, ಚಂದ್ರಕಲಾ ನಾಯ್ಕ, ಮಂಜುಳಾ ನಾಯ್ಕ, ಯಶೋಧಾ ಮಡಿವಾಳ, ರಾಧಿಕಾ ಕಾನಗೋಡ, ಮುಬಿನಾ ಗುರ್ಕಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts