More

    ‘ಕೈ’ ತೆಕ್ಕೆಗೆ ಯಕ್ಸಂಬಾ ಪಪಂ

    ಚಿಕ್ಕೋಡಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲೆಯ ಗಮನ ಸೆಳೆದಿದ್ದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿದ್ದು, ಬಿಜೆಪಿಗೆ ಸೋಲಾಗಿದೆ.

    ಡಿ.27ರಂದು ಚುನಾವಣೆ ನಡೆದಿತ್ತು. ಗುರುವಾರ ಪಟ್ಟಣದ ಮಿನಿವಿಧಾನ ಸೌಧದಲ್ಲಿ ಮತ ಎಣಿಕೆ ಕಾರ್ಯ ಜರುಗಿತು. ಒಟ್ಟು 17 ಸ್ಥಾನಗಳಲ್ಲಿ 16 ಸ್ಥಾನಗಳು ಕೈ ಅಭ್ಯರ್ಥಿಗಳ ಪಾಲಾದರೆ, ಒಂದು ಸ್ಥಾನಕ್ಕೆ ಮಾತ್ರ ಕಮಲ ಪಾಳಯ ತೃಪ್ತಿಹೊಂದುವಂತಾಗಿದೆ.

    ಕಾಂಗ್ರೆಸ್‌ನ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ ಅವರ ಸ್ವಗ್ರಾಮವಾದ ಯಕ್ಸಂಬಾದಲ್ಲಿ ಪಪಂ ಚುನಾವಣೆ ಭಾರಿ ನಿರೀಕ್ಷೆಗಳಿಗೆ ಸಾಕ್ಷಿಯಾಗಿತ್ತು. 16 ಸ್ಥಾನಗಳನ್ನು ಗೆಲ್ಲುವ ಮೂಲಕ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಯಕ್ಸಂಬಾದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆಯನ್ನು ಮತ್ತೆ ಗಟ್ಟಿ ಮಾಡಿದ್ದಾರೆ. ಆದರೆ, ಸ್ವಗ್ರಾಮದಲ್ಲಿ ಜೊಲ್ಲೆ ದಂಪತಿಗೆ ಸೋಲಾಗಿದೆ. ಬಿಜೆಪಿ ಅಭ್ಯರ್ಥಿ ಕೇವಲ ನಾಲ್ಕು ಮತಗಳ ಅಂತರದಿಂದ ವಿಜಯ ಪಡೆದಿರುವುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.

    ವಿಜೇತರ ವಿವರ: ವಾರ್ಡ್-1 ವಿಠ್ಠಲ ಸಹದೇವ ನಾಯಿಕ(ಕಾಂಗ್ರೆಸ್), ವಾರ್ಡ್-2 ಸೈಹೀದಾ ಮನ್ಸೂರ್ ಮುಲ್ಲಾ (ಕಾಂಗ್ರೆಸ್), ವಾರ್ಡ್- 3.ಪ್ರೇಮಾ ಮಹಾದೇವ ಮಾಳಗೆ (ಕಾಂಗ್ರೆಸ್), ವಾರ್ಡ್-4 ರಾಜಶ್ರೀ ಸಾತಪ್ಪ ಮಗದುಮ್ಮ (ಕಾಂಗ್ರೆಸ್), ವಾರ್ಡ್-5 ರವೀಂದ್ರ ಶಿವಾಜಿ ಮಾನೆ(ಕಾಂಗ್ರೆಸ್), ವಾರ್ಡ್-6 ಜಮ್ಮನ್ಷಾ ಸರ್ದಾರ ಮಕಾನದಾರ (ಕಾಂಗ್ರೆಸ್), ವಾರ್ಡ್-7 ಚಿದಾನಂದ ಯಲ್ಲಪ್ಪ ಬೆಳ್ಳಿ(ಕಾಂಗ್ರೆಸ್), ವಾರ್ಡ್- 8ಸುಜಾತಾ ವಿನೋದ ಚಿತಳೆ (ಕಾಂಗ್ರೆಸ್), ವಾರ್ಡ್-9 ಉಮೇಶ ಮಹಾದೇವ ಸಾತ್ವಾರ(ಕಾಂಗ್ರೆಸ್), ವಾರ್ಡ್-11 ಅಂಕುಶ ರಾಮಚಂದ್ರ ಖೋತ(ಕಾಂಗ್ರೆಸ್), ವಾರ್ಡ್-12 ಸಂಗೀತಾ ಶಿವಾಜಿ ಪವಾರ (ಕಾಂಗ್ರೆಸ್), ವಾರ್ಡ್-13 ಶಾನಕ್ಕ ಅಣ್ಣಾಸಾಬ ರಾಂಗೋಳೆ (ಕಾಂಗ್ರೆಸ್), ವಾರ್ಡ್-14 ಕಿರಣ ಸತ್ಯಪ್ಪ ಮಾಳಿ(ಕಾಂಗ್ರೆಸ್), ವಾರ್ಡ್-15 ಸುನೀಲ ವಿಶ್ವನಾಥ ಸಪ್ತಸಾಗರ (ಕಾಂಗ್ರೆಸ್), ವಾರ್ಡ್-16 ಶಿವಗೌಡಾ ಬಾಬುಗೌಡಾ ಬಾವಚೆ(ಕಾಂಗ್ರೆಸ್), ವಾರ್ಡ್-17ರವೀಂದ್ರ ಲಕ್ಷ್ಮಣ ಖೋತ (ಕಾಂಗ್ರೆಸ್) ಜಯಗಳಿಸಿದ್ದಾರೆ.

    ಉಳಿದಂತೆ, ವಾರ್ಡ್-10 ರಲ್ಲಿ ಬಿಜೆಪಿಯ ಕಲಾವತಿ ಧನಪಾಲ ಮಾಳಿ ಕೇವಲ 4 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಹಿರೇಕೂಡಿ, ಕೇರೂರ ಉಪಚುನಾವಣೆ ವಿವರ: ಹಿರೇಕೂಡಿ ಗ್ರಾಪಂನ ವಾರ್ಡ್-7 ರಲ್ಲಿ ಒಂದು ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಒಟ್ಟು ಮೂವರು ಸ್ಪರ್ಧಿಸಿದ್ದರು. ಈ ಪೈಕಿ 361 ಮತ ಪಡೆದು ಅನಿತಾ ವಿಕ್ರಮ ಬನಗೆ ಗೆಲುವು ಸಾಧಿಸಿದ್ದಾರೆ. ಕೇರೂರ ಗ್ರಾಪಂ ವ್ಯಾಪ್ತಿಯ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಮೂವರು ಸ್ಪರ್ಧಿಸಿದ್ದರು. ಈ ಪೈಕಿ ಇಟ್ಟಪ್ಪ ಸಿದ್ದರಾಮ ಬಿಳಗೆ 467 ಮತ ಪಡೆದು ವಿಜಯಶಾಲಿಯಾಗಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಗುಲಾಲ್ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts