More

    ಕೈ ಕೋಟೆ ಭೇದಿಸಲು ಮಾಸ್ಟರ್ ಪ್ಲ್ಯಾನ್​

    ಜಯತೀರ್ಥ ಪಾಟೀಲ ಕಲಬುರಗಿ
    ರಾಜ್ಯದ ಎರಡು ಉಪ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿ ಬೀಗುತ್ತಿರೋ ಕಮಲಪಡೆ ಇದೀಗ ಕಲ್ಯಾಣ ಕರ್ನಾಟಕದತ್ತ ಮುಖ ಮಾಡಿದೆ. ಕಲ್ಯಾಣ ಕರ್ನಾಟಕದ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾಗಿದ್ದು, ಇಲ್ಲೂ ನಮ್ಮದೇ ಹವಾ ಇರುವಂತೆ ಬಿಜೆಪಿ ಮಾಸ್ಟರ್ ಪಾ್ಲೃನ್ ರೂಪಿಸಿದೆ. ಅದಕ್ಕೆಂದೇ ಬಿ.ವೈ. ವಿಜಯೇಂದ್ರ ಶುಕ್ರವಾರ ಕಲಬುರಗಿ ಮತ್ತು ಬೀದರ್ ಪ್ರವಾಸ ಕೈಗೊಂಡಿದ್ದಾರೆ.
    ನೆಲೆಯೇ ಇಲ್ಲದ ಶಿರಾದಲ್ಲಿ ಕೇಸರಿ ಝಂಡಾ ಹಾರಿಸಿದ ಕೇಸರಿಪಡೆ, ಕೆ.ಆರ್. ಪೇಟೆಯಲ್ಲೂ ರಾರಾಜಿಸಿದೆ. ಹೀಗೆ ಎರಡು ಉಪ ಚುನಾವಣೆಗಳಲ್ಲಿ ಭರ್ಜರಿ ಕಪ್ ಗೆದ್ದ ಕಮಲ ಪಾಳೆಯ ಅತ್ಯಂತ ಉತ್ಸಾಹದಲ್ಲಿದೆ. ಕಲ್ಯಾಣ ನಾಡಿನ ಎರಡೂ ಕ್ಷೇತ್ರಗಳಲ್ಲಿ ಕೇಸರಿ ಝಂಡಾ ಹಾರಲೇಬೇಕೆಂದು ಶಪಥ ತೊಟ್ಟಿರುವ ಬೈ ಎಲೆಕ್ಷನ್ ಎಕ್ಸ್ಪಟರ್್ ವಿಜಯೇಂದ್ರ ಕಲ್ಯಾಣ ನಾಡಿನ ಹೆಬ್ಬಾಗಿಲಿನತ್ತ ಯಾತ್ರೆ ಹೊರಟಿದ್ದು, ಶಿರಾ ಮಾದರಿ ರಣತಂತ್ರ ಹೆಣೆಯಲು ಮುಂದಾಗಿದ್ದಾರೆ.
    ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣದಲ್ಲಿ ಇದೀಗ ಬೈ ಎಲೆಕ್ಷನ್ ತಂತ್ರಗಾರಿಕೆಗೆ ಮಹೂರ್ತ ಫಿಕ್ಸ್ ಆಗಿದೆ. ಅಭ್ಯಥರ್ಿ ಯಾರೇ ಆಗಲಿ, ಎದುರಾಳಿ ಎಂಥವರೇ ಆಗಿರಲಿ, ಪಾರ್ಟಿ ನಮ್ಮದೇ ಬರಬೇಕು. ಹೀಗಂತ ಖುದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ಕೇಸರಿಪಡೆ ಕಾರ್ಯಕರ್ತರಿಗೆ ಟಾಸ್ಕ್ ಕೊಟ್ಟಿದ್ದಾರೆ. ಟಾಸ್ಕ್ ಸಕ್ಸಸ್ಗೆ ವಿಜಯೇಂದ್ರ ಸಾರಥ್ಯ ಇರಲಿದೆ. ಹೀಗಾಗಿ ಬಸವಕಲ್ಯಾಣ ಮೇಲೆ ಕಣ್ಣಿಟ್ಟಿರೋ ಸಿಎಂ, ಈಗಾಗಲೇ ಕ್ಷೇತ್ರದ ಮತದಾರರಿಗೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವ ಮಾತನ್ನೂ ಕೊಟ್ಟಿದ್ದಾರೆ.
    ಒಂದೆಡೆ ಮಸ್ಕಿ, ಮತ್ತೊಂದೆಡೆ ಬಸವಕಲ್ಯಾಣ ಹೀಗೆ ಎರಡೂ ಕ್ಷೇತ್ರದ ಎಲೆಕ್ಷನ್ ಯಾವುದೇ ಸಮಯದಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ಆದರೆ ವೇದಿಕೆ ರೆಡಿ ಮಾಡುತ್ತಿರುವ ಕೇಸರಿ ಪಡೆ ಮಾತ್ರ ಈಗಿನಿಂದಲೇ ತಳಮಟ್ಟದ ಕಾರ್ಯ ಶುರು ಮಾಡಿಕೊಂಡಿದೆ.

    ಸ್ಥಳೀಯ ರಾಜಕೀಯಕ್ಕಿಂದು ವಿಜಯೇಂದ್ರ ಎಂಟ್ರಿ
    ಕಲಬುರಗಿಗೆ ಶುಕ್ರವಾರ ಬೆಳಗ್ಗೆ ಆಗಮಿಸಲಿರುವ ಬಿ.ವೈ.ವಿಜಯೇಂದ್ರ ಸ್ಥಳೀಯ ಶಾಸಕರು, ಪಕ್ಷದ ಮುಖಂಡರೊಂದಿಗೆ ಚಚರ್ಿಸಲಿದ್ದಾರೆ. ನಂತರ ನೇರವಾಗಿ ಬೀದರ್ ಜಿಲ್ಲೆ ಬಸವಕಲ್ಯಾಣಕ್ಕೆ ತೆರಳಲಿದ್ದು, ಕ್ಷೇತ್ರದ ಉಪ ಚುನಾವಣೆ ತಂತ್ರಗಾರಿಕೆ ಕುರಿತು ಸ್ಥಳೀಯ ಮುಖಂಡರು, ಪದಾಧಿಕಾರಿಗಳು, ಶಾಸಕರು, ಸಂಸದರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಕೆಲ ಮಠಗಳಿಗೂ ಭೇಟಿ ನೀಡಿ ಮಠಾಧೀಶರ ಆಶೀವರ್ಾದ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts