More

    ಕೈಗಾರಿಕೆ ಸ್ನೇಹಿ ವಾತಾವರಣ ಸೃಷ್ಟಿಸಲಿ

    ಹಳಿಯಾಳ: ರಾಜ್ಯದಲ್ಲಿ ಕೈಗಾರಿಕೆ ಸ್ನೇಹಿ, ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಸೃಷ್ಟಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಒತ್ತಾಯಿಸಿದರು.

    ಪಟ್ಟಣದಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೈಗಾರಿಕಾ ಸಚಿವನಾಗಿ ಕಾರ್ಯ ನಿರ್ವಹಿಸಿದ ಅನುಭವದಲ್ಲಿ ಸರ್ಕಾರಕ್ಕೆ ಸಲಹೆಗಳನ್ನು ಈ ನೀಡುತ್ತಿದ್ದೇನೆ. ಬಂಡವಾಳ ಹೂಡಿಕೆಗೆ ಯೋಗ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯ ಕರ್ನಾಟಕ. ಇಂದು ಇಲ್ಲಿಗೆ ಬಂದು ಬಂಡವಾಳ ಹೂಡಲು ಉದ್ದಿಮೆದಾರರು ಹಿಂದೇಟು ಹಾಕುತ್ತಿದ್ದಾರೆ. ಬೃಹತ್ ಕೈಗಾರಿಕೆಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಬಹುರಾಷ್ಟ್ರೀಯ ಆಪಲ್ ಕಂಪನಿಯು ತಮಿಳುನಾಡಿನಲ್ಲಿ 7000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ, ಉದ್ಯಮವನ್ನು ಆರಂಭಿಸುತ್ತಿದೆ. ವೊಲಾ ಕಂಪನಿಯು 2400 ಕೋಟಿ ರೂ. ಬಂಡವಾಳ ಹೂಡಿ ಎಲೆಕ್ಟ್ರಿಕಲ್ ಸ್ಕೂಟರ್ ತಯಾರಿಸುವ ಉದ್ಯಮ ಆರಂಭಿಸಲಿದೆ. ಈ ಬೃಹತ್ ಉದ್ದಿಮೆಗಳು ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಿಗೆ ಹೋಗಲು ಕಾರಣವೇನು? ಎಂದು ಪ್ರಶ್ನಿಸಿದರು.

    ಹಾಗಾಗಿ, ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬಿಡದಿಯಲ್ಲಿ ಟೊಯೊಟಾ ಮೋಟಾರ್ ಕಂಪನಿಯಲ್ಲಿ ನಡೆದಿರುವ ಕಾರ್ವಿುಕರ ಹೋರಾಟ, ವಿಸ್ಟ್ರಾನ್ ಘಟಕ ಡ್ಯಾಮೇಜ್ ಮಾಡಿದ ಪ್ರಕರಣಗಳ ಕುರಿತು ಗಮನಹರಿಸಬೇಕು ಎಂದು ಹೇಳಿದರು.

    ಗಡ್ಕರಿಗೆ ಪತ್ರ: ಖಾನಾಪೂರ-ತಾಳಗುಪ್ಪ-ಭಟ್ಕಳ, ರಾಮನಗರ-ಸದಾಶಿವಗಡ ಮತ್ತು ಕಾರವಾರ-ಕೈಗಾ-ಇಳಕಲ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ದೇಶಪಾಂಡೆ ತಿಳಿಸಿದರು. ಈ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಈಗಾಗಲೇ ವಿಸ್ತ್ರತ ಯೋಜನಾ ವರದಿಯನ್ನು ನೀಡಲಾಗಿದ್ದು, ಆದಷ್ಟೂ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ನನ್ನ ಕನಸಿನ ಕೂಸು
    ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆ ಇದು ನನ್ನ ಕನಸಿನ ಕೂಸು ಎಂದು ದೇಶಪಾಂಡೆ ಹೇಳಿದರು. ನಾನು ಯಾವತ್ತೂ ಕಾರ್ಖಾನೆಯ ಆಡಳಿತದಲ್ಲಿ ಕೈಹಾಕಲಿಲ್ಲ. ಕಾರ್ಖಾನೆಯ ಆಡಳಿತ ವರ್ಗ ಉತ್ತಮವಾಗಿದೆ. ಆದರೆ, ಕಾರ್ಖಾನೆಯ ಒಬ್ಬ ಪ್ರಮುಖ ವ್ಯಕ್ತಿ ರಾಜಕೀಯ ಆಧಾರಿತವಾಗಿ ಕೈಗೊಳ್ಳುವ ನಿರ್ಧಾರಗಳು, ರೈತರನ್ನು ರಾಜಕೀಯವಾಗಿ ನೋಡುವ ನೀತಿಯಿಂದಾಗಿ ಕಾರ್ಖಾನೆಗೆ ಕೆಟ್ಟ ಹೆಸರು ಬರುತ್ತಿದೆ. ಕಾರ್ಖಾನೆ ಅಧಿಕಾರಿಗಳ ಸಭೆ ಕರೆದು ಕಬ್ಬು ಕಟಾವು ಹಾಗೂ ಸಾಗಾಟದ ವಿದ್ಯಮಾನಗಳ ರ್ಚಚಿಸಿದ್ದೇನೆ. ಲಗಾಣಿ ತಾಂಡಾಗಳನ್ನು ಮಹಾರಾಷ್ಟ್ರದಿಂದ ತರುವ ಬದಲು ತಾಲೂಕಿನ ಜನರಿಗೆ ಅವಕಾಶ ಮಾಡಿಕೊಡಲಿ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts