More

    ಕೈಗಾರಿಕಾ ಪ್ರದೇಶಗಳಲ್ಲಿ ಪೊಲೀಸ್ ಚೌಕಿ

    ಕೋಲಾರ: ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಅಪರಾಧ ತಡೆಗೆ 5 ಕಡೆ ಪೊಲೀಸ್ ಚೌಕಿ ಸ್ಥಾಪಿಸಲಾಗುವುದು ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಹೇಳಿದರು. ನಗರದ ಹೊರವಲಯದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಫೋನ್‌ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸುದ್ದಿಗಾರರೊಂದಿಗೆ ವಾತನಾಡಿದರು.

    ಕೈಗಾರಿಕಾ ಪ್ರದೇಶಗಳಲ್ಲಿ ಈಗಾಗಲೆ ಒಂದು ಗಸ್ತು ವಾಹನ ತಿರುಗುವ ವ್ಯವಸ್ಥೆ ವಾಡಲಾಗಿದೆ. ಆದರೆ ಕೈಗಾರಿಕಾ ಪ್ರದೇಶ ವ್ಯಾಪ್ತಿ ಹೆಚ್ಚಾಗುತ್ತಿರುವುದರಿಂದ ಅಪರಾಧಗಳೂ ಹೆಚ್ಚಾಗುವ ಆತಂಕವಿದ್ದು, ಅಗತ್ಯ ಭದ್ರತೆ ಒದಗಿಸಬೇಕಿದೆ. ಕೈಗಾರಿಕೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾದ್ಯಂತ 2500 ಸಿಸಿ ಕ್ಯಾಮರಾಗಳಿದ್ದು, ಸಾರ್ವಜನಿಕರ ಹಿತದಷ್ಟಿಯಿಂದ ಇನ್ನೂ 51 ಕಡೆ ವ್ಯವಸ್ಥೆ ವಾಡಲಾಗುತ್ತದೆ ಎಂದರು.

    ನಗರ ಮತ್ತು ಜಿಲ್ಲೆ ಸೇರಿ ಕೆಲವು ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಮುಂದಿನ ಜನವರಿಯಿಂದ ರಸ್ತೆ ಸುರಕ್ಷತಾ ಕ್ರಮ ಜಾರಿ ವಾಡಲಾಗುತ್ತದೆ. ನಗರದಲ್ಲಿ ಖಾಲಿಯಾಗಿದ್ದ ಸಂಚಾರ ಉಪ ನಿರೀಕ್ಷಕರ ಹುದ್ದೆ ಭರ್ತಿಯಾಗಿದೆ. ಜನರ ಸಮಸ್ಯೆ ಪರಿಹಾರಕ್ಕೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಜನಸಂಪರ್ಕ ಸಭೆ ವಾಡಲಾಗುವುದು ಎಂದರು.

    ತಿಂಗಳಿಗೊಮ್ಮೆ ಕಾರ್ಯಕ್ರಮ: ಪ್ರತಿ ತಿಂಗಳ ಕೊನೇ ಸೋಮವಾರ ಫೋನ್‌ಇನ್ ಕಾರ್ಯಕ್ರಮ ವಾಡಲಾಗುತ್ತದೆ. ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಪೊಲೀಸ್ ಠಾಣೆಗೆ ಬರುವ ಜನ ನೊಂದಿರುತ್ತಾರೆ. ಅವರ ನೋವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ. ಇದನ್ನು ಎಲ್ಲ ಸಿಬ್ಬಂದಿಗೆ ಮನವರಿಕೆ ವಾಡಿಕೊಡಲಾಗುವುದು ಎಂದರು.

    ಸಾರ್ವಜನಿಕರ ದೂರು ಏನು: ಕೋಲಾರ-ಚಿಂತಾಮಣಿ ವಾರ್ಗದ ಅರಹಳ್ಳಿ ಗೇಟ್ ಬಳಿ ಅವೈಜ್ಞಾನಿಕ ರಸ್ತೆ ವಿಭಜಕ ನಿರ್ವಾಣ, ಮುಳಬಾಗಿಲು ತಾಲೂಕು ವಡ್ಡಹಳ್ಳಿ ಟೊಮ್ಯಾಟೊ ವಾರುಕಟ್ಟೆ ಎದುರು ವಾಹನ ದಟ್ಟಣೆ ಕಡಿಮೆ ವಾಡುವುದು, ಕೋಲಾರದ ಮೆಕ್ಕೆ ವತ್ತದಲ್ಲಿ ಮಂಗಳಮುಖಿಯರ ಕಾಟ ತಪ್ಪಿಸುವುದು, ಎಸ್ಸೆನ್ನಾರ್ ಆಸ್ಪತ್ರೆ ಮುಂಭಾಗ ಹೋರಾಟ ತಡೆಯುವುದು, ಗಲ್‌ಪೇಟೆ ವಾರ್ಡ್‌ನಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವುದು, ಕೆಜಿಎಫ್‌ನಲ್ಲಿ ನಕಲಿ ಎಟಿಎಂ ಕಾರ್ಡ್ ಬಳಕೆ ವಾಡಿರುವುದು, ಶ್ರೀನಿವಾಸಪುರ ತಾಲೂಕು ಮುದಿಮಡುಗು ಗ್ರಾಮದಲ್ಲಿ ಆಟೋ ನಿಲ್ದಾಣ ಸಮಸ್ಯೆಗೆ ಪರಿಹಾರ ಮತ್ತು ಜೂಜಾಟ ನಿಯಂತ್ರಿಸುವುದು, ವಾಲೂರು ತಾಲೂಕು ಗೂಳಿಪುರದಲ್ಲಿ ಗಾಂಜಾ ವಾರಾಟ ನಿಯಂತ್ರಿಸುವುದದಕ್ಕೆ ಸಂಬಂಧಿಸಿದಂತೆ ಒಟ್ಟು 15ಕ್ಕೂ ಹೆಚ್ಚು ದೂರು ಬಂದವು. ಇದು ಪ್ರಥಮ ಫೋನ್‌ಇನ್ ಕಾರ್ಯಕ್ರಮವಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಸಂಬಂಧಿಸಿದ ಇಲಾಖೆಗಳಿಗೆ ದೂರು ವರ್ಗಾಯಿಸಿ ಬಗೆಹರಿಸಲಾಗುವುದು ಎಂದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts