More

    ಕೇರಳ ದಂಪತಿ ಮಡಿಲಿಗೆ ಹೆಣ್ಣು ಮಗು

    ಯಾದಗಿರಿ : ಅಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಲ್ಲೋ ಒಂದು ಕಡೆ ಸಂತಸದ ಛಾಯೆ ಆವರಿಸಿತ್ತು. ಎಲ್ಲರ ಮೊಗದಲ್ಲಿ ಮಂದಹಾಸ, ಅನಾಥವಾಗಿದ್ದ ಪುಟ್ಟ ಕಂದಮ್ಮನ ಬಾಳು ಬೆಳಕಾಗುತ್ತಿದೆ ಎಂಬ ಆನಂದಭಾಷ್ಪ…

    ಹೌದು, ಈ P್ಷÀಣಕ್ಕೆ ಸಾಕ್ಷಿಯಾಗಿದ್ದು ಜಿಲ್ಲಾಧಿಕಾರಿ ಕಚೇರಿ. ಜಿಲ್ಲಾ ಮಕ್ಕಳ ರP್ಷÀಣಾ ಘಟಕದ ವ್ಯಾಪ್ತಿಯ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿನ ಒಂದು ವರ್ಷ ಹೆಣ್ಣು ಮಗುವನ್ನು ಕೇರಳ ಮೂಲದ ದಂಪತಿಗೆ ಹಸ್ತಾಂತರ ಪ್ರಕ್ರಿಯೆ ಮಂಗಳವಾರ ನಡೆಯಿತು.

    ದಂಪತಿಗೆ ಖುದ್ದು ಡಿಸಿ ಸ್ನೇಹಲ್ ಆರ್. ಮಗು ಹಸ್ತಾಂತರಿಸಿ, ಜಿಲ್ಲೆಯಿಂದ ಇದೇ ಪ್ರಥಮ ಬಾರಿಗೆ ಮಗುವನ್ನು ಕೇರಳ ರಾಜ್ಯಕ್ಕೆ ದತ್ತು ನೀಡಲಾಗಿದೆ. ಕೇರಳದ ಶಾಜೀಲ್ ಕುಮಾರ, ಶೈನಿ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಅವರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿದ್ದರು.

    ಶಾಜೀಲ್ ವೃತ್ತಿಯಿಂದ ಶಿP್ಷÀಕ. ಜಿಲ್ಲೆಯ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿನ ಶಿವಾನಿ (ಹೆಸರು ಬದಲಿಸಲಾಗಿದೆ) ಎಂಬ ಒಂದು ವರ್ಷದ ಮಗು ಇಷ್ಟವಾದ ಕಾರಣ ಕಾನೂನಾತ್ಮಕವಾಗಿ ದತ್ತು ಪ್ರಕ್ರಿಯೆ ನಡೆಸಿ ಒಪ್ಪಿಸಲಾಯಿತು ಎಂದು ಡಿಸಿ ತಿಳಿಸಿದರು.

    ಜಿಲ್ಲಾ ಮಕ್ಕಳ ರP್ಷÀಣಾಧಿಕಾರಿ ಪ್ರೇಮಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲ್‌ಸಾಬ್, ಮಕ್ಕಳ ರP್ಷÀಣಾಧಿಕಾರಿ ದಶರಥ ನಾಯಕ, ವಿಶೇಷ ದತ್ತು ಸಂಸ್ಥೆ ಅಧೀP್ಷÀಕಿ ನಾಗಮ್ಮ ಹಿರೇಮಠ, ಭಾಗ್ಯಶ್ರೀ, ಕಾನೂನು ಮತ್ತು ಪರಿವೀP್ಷÀಣಾಧಿಕಾರಿ ರಾಜೇಂದ್ರ ಕುಮಾರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts