More

    ಕೇಡರ ಬೇಸ್ ಮೇಲೆ ಪಕ್ಷ ಸಂಘಟಿಸಿ

    ಬಾಗಲಕೋಟೆ: ಮಾಸ್ ಬೆಸ್ ಮೇಲೆ ಇದ್ದ ಕಾಂಗ್ರೆಸ್ ಪಕ್ಷವು ಇದೀಗ ಅಕಾರಕ್ಕೆ ಬರಲು ಕೇಡರ್ ಬೇಸ ಮೇಲೆ ಸಂಘಟಿಸಬೇಕಿದೆ. ಮುಖ್ಯವೇದಿಕೆಗ್ಗಿಂತ ಹಿಂಬದಿಯಲ್ಲಿ ಕಾರ್ಯಕರ್ತರಿಗೆ ತರಬೇತಿ ಹಾಗೂ ಶಿಬಿರ ಏರ್ಪಡಿಸಿ ಪಕ್ಷವನ್ನು ಗಟ್ಟಿಯಾಗಿ ಸಜ್ಜುಗೊಳಸಿಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
    ನವನಗರದ ಕಲಾಭವನದಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಕಾಂಗ್ರೆಸ್ ಪಕ್ಷವು ಬಹತ್ವದ ತಳಹದಿಯ ಮೇಲೆ ನಿಂತಿದೆ. ಪಕ್ಷದ ಸಿದ್ಧಾಂತ, ತತ್ವ ಒಪ್ಪಿಕೊಂಡು ಬರುವವರಿಗೆ ಸ್ವಾಗತವಿದೆ. ದೇಶದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಜನರಿಗೆ ಮುಟ್ಟಿಸಬೇಕಿದೆ. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಳ ನಿರೀಕ್ಷೆ ಇತ್ತು. ಅವೆಲ್ಲ ಹುಸಿಯಾಗಿದೆ. ಅಂಬಾನಿ, ಅದಾನಿ ಮಾತ್ರ ನಂಬರ್ 1 ಶ್ರೀಮಂತರಾಗಿದ್ದಾರೆ ಎಂದು ಟೀಕಿಸಿದರು.
    ರೈತರು, ಹಿಂದುಳಿದವರು, ಕಾರ್ಮಿಕರ ಕಲ್ಯಾಣ ಮಾಡುತ್ತಿಲ್ಲ. ಜಿಡಿಪಿ ಪಾತಳಕ್ಕೆ ಕುಸಿದಿದೆ. ಮನಮೋಹನ ಸಿಂಗ್, ಪಿ.ವಿ.ನರಸಿಂಹರಾವ ನೀಡಿದ ಚೈತನ್ಯವೇ ಇಂದಿನ ಭಾರತದ ಶಕ್ತಿಯಾಗಿದೆ. ಮೋದಿಯಿಂದ ದೇಶದ ಅಭಿವೃದ್ಧಿಯಾಗಿಲ್ಲ. ಯೋಗ ಸಾವಿರಾರು ವರ್ಷಗಳಿಂದ ನಮ್ಮ ಋಷಿಮುನಿಗಳು ಮಾಡಿಕೊಂಡು ಬಂದಿದ್ದಾರೆ. ಆದರೇ ನಾವು ನಮ್ಮ ಚಾಪೆ ತೆಗೆದುಕೊಂಡು ಹೋಗಿ ನಮ್ಮ ಕೈ, ಕಾಲು ಅಳ್ಳಾಡಿಸಿ ಯೋಗ ಮಾಡಿ ಮೋದಿಗೆ ಪ್ರಚಾರ ನೀಡಿದ್ದೇವೆ ಎಂದು ವ್ಯಂಗ್ಯವಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿಮರ್ಾಣ ಮಾಡುತ್ತಾರೆ. ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ ಎಂದು ಅಂತರಾಷ್ಟ್ರೀಯ ತಜ್ಞರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಿದ್ದಾರೆ. ಹೀಗಾಗಿ ಚುನಾವಣೆ ಬಂದಾಗ ನಾವು(ಕಾಂಗ್ರೆಸ್) ಎಚ್ಚರದಿಂದ ಇರಬೇಕಿದೆ ಎಂದು ಹೇಳಿದರು.
    ಉನ್ನತ ಶಿಕ್ಷಣ ನೀತಿಯಿಂದ ವಂಚಿತ..
    ಹೊಸ ಶಿಕ್ಷಣ ನೀತಿಯಿಂದ ಎಸ್ಸಿ,ಎಸ್ಟಿ, ಹಿಂದುಳಿದ ವರ್ಗದವರು ಪದವಿ, ಉನ್ನತ ಶಿಕ್ಷಣದ ವರೆಗೂ ತಲುಪಲು ಸಾಧ್ಯವಿಲ್ಲ. ಕೌಶಲ್ಯದ ಹೆಸರಿನಲ್ಲಿ ಏಳನೇ ತರಗತಿಗೆ ಸರ್ಟಿಫಿಕೇಟ್ ನೀಡಿ ಇವರನ್ನು ಹೊರಗೆ ಹಾಕಲಾಗುತ್ತದೆ. ಇಂತಹ ಮಹತ್ವ ವಿಚಾರಗಳನ್ನು ಜನರಿಗೆ ತಿಳಿಸಲು ಪಕ್ಷದ ಕಾರ್ಯಕರ್ತರಿಗೆ ಶಿಬಿರಗಳು ಅವಶ್ಯವಿದೆ. ಜಾತ್ಯಾತೀತ, ಸಮಾಜವಾದಿ ಸಿದ್ಧಾಂತದ ಪಕ್ಷ ಹಾಗೂ ಸಂಘಟನೆಗಳು ಒಂದಾಗಬೇಕಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ವಿಘಟನೆಯಿಂದ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಮೊದಲು ನಮ್ಮ ವೈರಿಗಳು ಯಾರು ಎನ್ನುವುದು ಅರಿತುಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ನುಡಿಸಿದರು.
    ಕಾರ್ಯಕ್ರಮದಲ್ಲಿ ಮುಖಂಡ ಪರಶುರಾಮ ಮಹಾರಾಜನವರ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಮಾಜಿ ಸಚಿವರಾದ ಆರ್.ಬಿ.ತಿಮ್ಮಾಪುರ, ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಜಿ.ಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಡಾ.ಎಂ.ಎಸ್.ದಡ್ಡೇನವರ, ಡಾ.ದೇವರಾಜ ಪಾಟೀಲ, ಮುಖಂಡರಾದ ರಕ್ಷಿತಾ ಭರತಕುಮಾರ ಈಟಿ, ಆನಂದ ಜಿಗಜಿನ್ನಿ, ಹನುಮಂತ ರಾಕುಂಪಿ, ನಾಗರಾಜ ಹದ್ಲಿ, ಹಾಜಿಸಾಬ ದಂಡಿನ, ಹನುಮಂತ ಭಜಂತ್ರಿ, ಶಪೀಕ ದೊಡ್ಡಕಟ್ಟಿ, ಸುಶೀಲಕುಮಾರ ಬೆಳಗಲಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts