More

    ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗೆ ಸ್ಪಂದಿಸಿ

    ಚಿಂಚೋಳಿ: ಎಲ್ಲೆಡೆ ನಿರಂತರ ಮಳೆಯಾಗುತ್ತಿದ್ದು, ಕೆಲವು ಕಡೆ ಪ್ರವಾಹ ಸೃಷ್ಟಿಯಾಗುತ್ತಿದೆ. ಹೀಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಶಂಕರ ರಾಠೋಡ್ ಸೂಚನೆ ನೀಡಿದರು.

    ಚಿಮ್ಮನಚೋಡ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಐನಾಪುರ ವಲಯದ ೫ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಮಂಗಳವಾರ ನಡೆಸಿ, ಪ್ರತಿ ಹಳ್ಳಿಗಳಲ್ಲಿ ಸ್ವಚ್ಛತೆಗೆ ಮಹತ್ವ ನೀಡಬೇಕು. ಯಾವುದೇ ಕಾರಣಕ್ಕೂ ದೂರುಗಳು ಬಾರದಂತೆ ಜಾಗೃತಿ ವಹಿಸಬೇಕು. ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಿ, ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಉತ್ತಮ ರಸ್ತೆ, ವಿದ್ಯುತ್, ಶೌಚಗೃಹ ಸೇರಿ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಿ. ಪ್ರತಿ ಗ್ರಾಮಗಳಲ್ಲಿ ಬ್ಲೀಚಿಂಗ್ ಫೌಡರ್ ಸಿಂಪಡಣೆ ಮಾಡಿ. ಕುಡಿವ ನೀರನ್ನು ಕುದಿಸಿ, ಆರಿಸಿ ಕುಡಿಯುವಂತೆ ಮನೆ- ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿ. ನದಿ ಪಾತ್ರದ ಗ್ರಾಮಗಳ ಮೇಲೆ ನಿಗಾವಹಿಸಿ, ಮಳೆ ಹಾನಿ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.


    ತಾಪಂ ವ್ಯವಸ್ಥಾಪಕ ಶಿವಶಂಕ್ರಯ್ಯ ಸ್ವಾಮಿ, ಪಿಡಿಒಗಳಾದ ವಾಹೇದ್ ಅಲಿ (ಸಾಲೇಬೀರನಳ್ಳಿ), ರಮೇಶ ತುಮಕುಂಟಿ (ಹಸರಗುಂಡಗಿ), ರೇವಣಸಿದ್ದಯ್ಯ ಸ್ವಾಮಿ (ಬಸಂತಪುರ), ಗೋವಿಂದರೆಡ್ಡಿ ಮುದನಾಳ (ಚಿಮ್ಮನಚೋಡ, ಐನಾಪುರ), ಕಾರ್ಯದರ್ಶಿ ಜಗನ್ನಾಥರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts