More

    ಕೇಂದ್ರ ಸರಕಾರದ ಸೌಲಭ್ಯ ಪಡೆದುಕೊಳ್ಳಿ


    ಯಾದಗಿರಿ: ಕೇಂದ್ರದಲ್ಲಿ ಸತತ ಒಂಭತ್ತು ವರ್ಷ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಒಂದೇ ಕಪ್ಪುಚುಕ್ಕೆ ಇಲ್ಲದೆ, ದೇಶದ ಶ್ರೀಸಾಮಾನ್ಯನ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ತಿಳಿಸಿದರು.

    ಸೋಮವಾರ ತಾಲೂಕಿನ ಹಳಿಗೇರಾ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಡಿಜಿಟಲ್ ವಾಹನಕ್ಕೆಚಾಲನೆ ನೀಡಿ ಮಾತನಾಡಿ. ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯಾತ್ರೆಗೆ ನ.15 ರಂದು ಜಾರ್ಖಂಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಕೇಂದ್ರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

    ದೇಶದ ಎಲ್ಲ ನಾಗರಿಕರಿಗೂ ಕಾರ್ಯಕ್ರಮ ಕೊಡಬೇಕು ಎಂಬುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಆಶಯ. ಕಾರ್ಯಕ್ರಮದ ಸ್ಥಳಗಳಲ್ಲಿ ಪಿಎಂ ಸ್ವನಿಧಿ ಶಿಬಿರ, ಆರೋಗ್ಯ ಶಿಬಿರ, ಆಯುಷ್ಮಾನ್ ಮಾಹಿತಿ, ಆಧಾರ್ ನವೀಕರಣ, ಪಿಎಂ ಉಜ್ವಲ ಸೌಲಭ್ಯ ಶಿಬಿರಗಳನ್ನು ಆಯೋಜಿಸಿ ಸ್ಥಳದಲ್ಲೇ ಸೇವೆಗಳನ್ನು ಒದಗಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಸೌಲಭ್ಯ ಪಡೆಯುವಂತೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts