More

    ಕೇಂದ್ರದ ವಿರುದ್ಧ ಪ್ರಗತಿಪರ ಸಂಘಟನೆಗಳ ಆಕ್ರೋಶ

    ಹುಣಸೂರು: ದೇಶದ ಕುಸ್ತಿಪಟುಗಳ ವಿರುದ್ಧ ಕೇಂದ್ರ ಸರ್ಕಾರ ದೌರ್ಜನ್ಯ ಮಾಡುತ್ತಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದವು.


    ನಗರದ ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡ ರೈತಸಂಘ, ಸಿಪಿಐ(ಎಂ), ದಲಿತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದವು.


    ಸಿಪಿಎಂ ಮುಖಂಡ ಬಸವರಾಜು ವಿ.ಕಲ್ಕುಣಿಕೆ ಮಾತನಾಡಿ, ಒಲಂಪಿಕ್ ಪದಕ ವಿಜೇತರು, ವಿಶ್ವ ಚಾಂಪಿಯನ್ ಕುಸ್ತಿ ಪಟುಗಳು ಸೇರಿದಂತೆ ದೇಶದ ಹೆಮ್ಮೆಯ ಕುಸ್ತಿ ಕ್ರೀಡಾಪಟುಗಳು. 2023 ಏ.24 ರಿಂದ ನವದೆಹಲಿಯ ಜಂತರ್ ಮಂಥರ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತಿದ್ದಾರೆ. ಕೇಂದ್ರ ಸರ್ಕಾರ ಅವರ ನ್ಯಾಯಯುತ ಬೇಡಿಕೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಪೊಲೀಸರಿಗೆ ದೂರು ನೀಡಿದ್ದರೂ ಸಹ ಎಫ್.ಐ.ಆರ್ ದಾಖಲಿಸಿಲ್ಲ. ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶದ ನಂತರವಷ್ಟೇ ಎಫ್.ಐ.ಆರ್. ದಾಖಲಾಯಿತು ಎಂದು ಕಿಡಿಕಾರಿದರು.


    ತಮ್ಮ ಮೇಲಿನ ಲೈಂಗಿಕ ಕಿರುಕುಳ ಹಾಗೂ ಹಿಂಸೆ ಸಂಬಂಧ ನಿಪ್ಷಕ್ಷಪಾತ ತನಿಖೆಯಾಗಬೇಕೆಂದು ಕುಸ್ತಿಪಟುಗಳು ಕೇಳುತ್ತಿದ್ದಾರೆ. ಅಲ್ಲದೆ ವಿಚಾರಣಾ ಸಮಿತಿಯ ವರದಿಯನ್ನು ಸಾರ್ವಜನಿಕರ ಅವಗಾಹನೆ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಈವರೆಗೂ ಇದರ ಕುರಿತು ಕೇಂದ್ರ ಸರ್ಕಾರ ಚಕಾರ ಎತ್ತಿಲ್ಲ. ಈ ನಡುವೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಕುಸ್ತಿಪಟುಗಳ ಮೇಲೆ ಪೋಲೀಸರ ಮೂಲಕ ಹಲ್ಲೆ ನಡೆಸಿರುವುದು ಖಂಡನೀಯ. ಕೇಂದ್ರ ಸರ್ಕಾರ ಕೂಡಲೇ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಬಿಜೆಪಿ ಸಂಸದನ ವಿರುದ್ಧ ಕಾನೂನುಕ್ರಮ ಜರುಗಿಸಿ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.


    ದಲಿತ ಹಿರಿಯ ಮುಖಂಡ ಹರಿಹರಾಆನಂದಸ್ವಾಮಿ, ರೈತ ಸಂಘದ ತಾಲೂಕು ಅದ್ಯಕ್ಷ ಚಿಕ್ಕಣ್ಣ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಕಾರ್ಯದರ್ಶಿ ಬೆಳ್ತೂರು ವೆಂಕಟೇಶ್, ದಸಂಸ ಮುಖಂಡ ರಾಮಕೃಷ್ಣ ಅತ್ತಿಕುಪ್ಪೆ, ಧನಂಜಯ ಕಿರಿಜಾಜಿ, ಹೂಸೂರು ಮಣಿ, ಬಸವರಾಜು ಹರಳಹಳ್ಳಿ ಗುರುಪುರ ಆಲಿ, ಖಾಲಿದ್, ಹಳೇಪುರ ರಾಮೇಗೌಡ, ಸತೀಶ್, ವಿಜಯ್, ಶಿವರಾಜು, ಪ್ರಕಾಶ್, ರಾಜು ಚಿಕ್ಕಹುಣಸೂರು, ಕಾಂತರಾಜು, ಗೌರಿಪುರ ವೆಂಕಟೇಶ್, ಚೆಲುವರಾಜು, ಯಶೋದಪುರ ಮಲ್ಲೇಶ್, ಮಹದೇವು ಮುಂತಾದವರು ಬಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts