More

    ಕೆವಿಜಿ ಬ್ಯಾಂಕ್​ನಿಂದ ವಿಕಾಸ್ ಲಘು ಸುವರ್ಣ ಯೋಜನೆ

    ಕುಮಟಾ: ಕರೋನಾ ಸೋಂಕು ಸೃಷ್ಟಿಸಿರುವ ಸಂಕಟದ ಸ್ಥಿತಿಯಲ್ಲಿ ವ್ಯಾಪಾರಸ್ಥರ ಹಾಗೂ ಜನಸಾಮಾನ್ಯರ ಆರ್ಥಿಕ ಅಗತ್ಯಗಳನ್ನು ಗುರುತಿಸಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶೇ. 7.25 ರಷ್ಟು ಕಡಿಮೆ ಬಡ್ಡಿ ದರದಲ್ಲಿ ವಿಕಾಸ್ ಲಘು ಸುವರ್ಣ ಎಂಬ ಚಿನ್ನದ ಸಾಲ ಯೋಜನೆಯನ್ನು ಹೊರತಂದಿದೆ ಎಂದು ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಕೆ. ಎಸ್. ಭಟ್ ತಿಳಿಸಿದರು.

    ಸೋಮವಾರ ನೂತನ ಚಿನ್ನದ ಸಾಲ ಯೋಜನೆ ಘೊಷಣೆ ಮಾಡಿ ಅವರು ಮಾತನಾಡಿದರು. ಸದ್ಯಕ್ಕೆ ಇಷ್ಟೊಂದು ಕಡಿಮೆ ಚಿನ್ನದ ಸಾಲದ ಬಡ್ಡಿದರ ಬೇರೆ ಯಾವುದೇ ಬ್ಯಾಂಕಿನಲ್ಲಿಲ್ಲ. ಕರೊನಾ ಮಹಾಮಾರಿಯಿಂದಾಗಿ ದೇಶದ ಸಾಮಾಜಿಕ ಮತ್ತು ಆರ್ಥಿಕ ಕ್ರಮವು ಬದಲಾವಣೆಗೊಳಪಡುತ್ತಿದ್ದು ದಿನನಿತ್ಯದ ಖರ್ಚುಗಳನ್ನು ನಿರ್ವಹಿಸುವುದು, ವ್ಯವಹಾರದ ಮುಂದುವರಿಕೆ, ಆರೋಗ್ಯ ಮತ್ತು ಕುಟುಂಬ ನಿರ್ವಹಣೆ ಸವಾಲಾಗಿ ಪರಿಣಮಿಸುತ್ತಿದೆ. ಪ್ರಸ್ತುತ ಕಾಲದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನೋಪಾಯವನ್ನು ಬೆಂಬಲಿಸಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಟಿಬದ್ಧವಾಗಿದೆ ಎಂದರು.

    ಬ್ಯಾಂಕಿನ ಹಿರಿಯ ಪ್ರಬಂಧಕ ಉಲ್ಲಾಸ ಗುನಗಾ ಮಾತನಾಡಿ, ವಿಕಾಸ್ ಲಘು ಸುವರ್ಣ ಯೋಜನೆಯಡಿ ಬ್ಯಾಂಕು ಮಾರುಕಟ್ಟೆ ಮೌಲ್ಯದ ಶೇ. 80 ಅಥವಾ ಪ್ರತಿ ಗ್ರಾಂಗೆ ಗರಿಷ್ಟ 3200 ರೂ. ನಿಗದಿಪಡಿಸಿದೆ. 15 ಲಕ್ಷ ರೂ.ಗಳ ವರೆಗೆ ಗರಿಷ್ಠ ಸಾಲ ನೀಡಲಾಗುವುದು ಮತ್ತು ಗರಿಷ್ಟ 6 ತಿಂಗಳ ಅವಧಿಯಲ್ಲಿ ಸಾಲ ಮರುಪಾವತಿಸಬೇಕಾಗುತ್ತದೆ ಎಂದರು.

    ಈ ವೇಳೆ ಬ್ಯಾಂಕಿನ ಹಿರಿಯ ಮಹಾಪ್ರಬಂಧಕ ಎನ್. ವಿ. ಭಟ್, ಎಸ್. ಆರ್. ರಂಗೇನ್, ಶಿವಾನಂದ ಭಟ್, ರಾಘವೇಂದ್ರ ಉಪಾಧ್ಯ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts