More

    ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ರೈತರಿಗೆ ತರಬೇತಿ

    ಆನಂದಪುರ: ಸಮೀಪದ ಇರುವಕ್ಕಿಯಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ತಳಗೇರಿ ಗ್ರಾಮದಲ್ಲಿ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಂತಿಮ ವರ್ಷದ ಬಿಎಸ್ಸಿ (ಕೃಷಿ) ವಿದ್ಯಾರ್ಥಿಗಳು ಅಡಕೆ ಕೊಳೆ ರೋಗ ನಿರ್ವಹಣೆಗೆ ಅವಶ್ಯಕವಾದ ಬೋರ್ಡೋ ದ್ರಾವಣವನ್ನು ವೈಜ್ಞಾನಿಕವಾಗಿ ಹೇಗೆ ತಯಾರಿಸಬೇಕೆಂಬ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೀಡಿದರು. ವಿವಿ ವಿಶೇಷಾಧಿಕಾರಿ ಡಾ. ಕೆ ಸಿ.ಶಶಿಧರ್ ಮಾತನಾಡಿ, ಗ್ರಾಮೀಣ ಕಾರ್ಯಾನುಭವದ ಮೂಲಕ ವಿದ್ಯಾರ್ಥಿಗಳು ಹಳ್ಳಿಯಲ್ಲಿ 3 ತಿಂಗಳು ವಾಸ್ತವ್ಯ ಹೂಡಿ ರೈತರೊಂದಿಗೆ ಬೆರೆತು ಕೃಷಿ ಅನುಭವವನ್ನು ಪಡೆಯಲಿದ್ದು ರೈತರು ವಿದ್ಯಾರ್ಥಿಗಳಿಗೆ ಸಲಹೆ, ಸಹಕಾರ ನೀಡಬೇಕೆಂದು ಹೇಳಿದರು. ಶಿಬಿರದ ಸಹಾಯಕ ಸಂಯೋಜಕ ಡಾ. ಎಂ.ವೈ.ಉಲ್ಲಾಸ್ ವೈಜ್ಞಾನಿಕವಾಗಿ ಬೋರ್ಡೋ ದ್ರಾವಣ ತಯಾರಿಕೆಯ ಮಹತ್ವ ಹಾಗೂ ತಳಗೆರೆ ಗ್ರಾಮದಲ್ಲಿ ಇನ್ನು ಮೂರು ತಿಂಳಗಳು ವಿದ್ಯಾರ್ಥಿಗಳಿಂದ ನಡೆಯುವ ತರಬೇತಿಯ ವಿವರ ತಿಳಿಸಿದರು. ಗ್ರಾಮದ ಹಿರಿಯರಾದ ಗುಬ್ಬಿ ನಾಗಪ್ಪ, ಮೂಲೆಮನೆ ಹುಚ್ಚಪ್ಪ, ಯಲಗಳಲೆ ಸೋಮಶೇಖರ ಹಾಗೂ ಮಹಾಬಲೇಶ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts