More

    ಕೆಲಸ ಕೊಡಿಸುವುದಾಗಿ 50 ಸಾವಿರ ರೂ. ದೋಖಾ

    ಬೆಂಗಳೂರು:

    ಕೆಲಸ ಕೊಡಿಸುವುದಾಗಿ ೇಸ್‌ಬುಕ್‌ಗೆ ಬಂದ ಜಾಹಿರಾತನ್ನು ನಂಬಿದ ವ್ಯಕ್ತಿಯೊಬ್ಬರು 50 ಸಾವಿರ ರೂ. ಕಳಿಸಿ ವಂಚನೆಗೊಳಗಾಗಿದ್ದಾರೆ.
    ಶ್ರೀನಗರದ ನಿವಾಸಿ ರಾಘವೇಂದ್ರ ನಾಗೇಶ್ ಶೇಟ್ (35) ಹಣ ಕಳೆದುಕೊಂಡವರು.

    ಉದ್ಯೋಗ ಅರಸುತ್ತಿದ್ದ ರಾಘವೇಂದ್ರ ಅವರ ೇಸ್‌ಬುಕ್ ಖಾತೆಗೆ ಅ.10ರಂದು ಅಪರಿಚಿತರು ಡಿಜಿಟಲ್ ಸಿಎಸ್‌ಪಿ ಇಂಡಿಯಾ ಮೂಲಕ ಕೆಲಸ ಕೊಡಿಸುವುದಾಗಿ ಜಾಹಿರಾತು ಕಳಿಸಿದ್ದರು. ಇದನ್ನು ನಂಬಿದ ರಾಘವೇಂದ್ರ ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಅಪರಿಚಿತರು ಕೆಲಸ ಕೊಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ನಿಮ್ಮ ಬ್ಯಾಂಕ್ ಖಾತೆಗೆ 50 ಸಾವಿರ ರೂ.ನ್ನು ಜಮೆ ಮಾಡುವುದಾಗಿ ಹೇಳಿದ್ದರು. ಆದರೆ, ಮೊದಲು ಶುಲ್ಕದ ರೂದಪಲ್ಲಿ 50 ಸಾವಿರ ರೂ. ನ್ನು ನಮ್ಮ ಖಾತೆಗೆ ಹಾಕುವಂತೆ ಅಪರಿಚಿತರು ಸೂಚಿಸಿದ್ದರು. ಅದರಂತೆ ರಾಘವೇಂದ್ರ ಅಪರಿಚಿತರ ಖಾತೆಗೆ 50 ಸಾವಿರ ರೂ. ಜಮೆ ಮಾಡಿದ್ದರು. ಇದಾದ ಬಳಿಕ ಅಪರಿಚಿತರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಯಾವುದೇ ಕೆಲಸವನ್ನೂ ಕೊಡದೇ ಹಣವನ್ನೂ ಹಿಂತಿರುಗಿಸದೇ ಆರೋಪಿಗಳು ವಂಚಿಸಿರುವುದು ಬೆಳಕಿಗೆ ಬಂದಿದೆ. ದಕ್ಷಿಣ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts