More

    ಕೆಲಸದ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

    ಚಿಕ್ಕಮಗಳೂರು: ರಾಜ್ಯದಲ್ಲಿ ಶೇ.30ರಷ್ಟು ಮಹಿಳೆಯರು, ಶೇ.42 ಪುರುಷರು ಮಾತ್ರ ಕ್ರೀಡೆ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ ಎಂಬ ವರದಿಯಿದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಮಾತ್ರ ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆಯಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.

    ರಾಮನಹಳ್ಳಿ ಡಿಎಆರ್ ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.  ಭಾರತದಲ್ಲಿ ಶೇ.82 ರಷ್ಟು ಜನ ಒತ್ತಡದ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶೇ.72 ಮಂದಿ ಮಾನಸಿಕ ಒತ್ತಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಕೆಲಸಗಳು 20 ವರ್ಷದ ಹಿಂದೆ ಇದ್ದದ್ದಕ್ಕೂ ಇಂದಿನ ಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿದೆ. 20 ವರ್ಷದ ಹಿಂದೆ ಅಷ್ಟೊಂದು ಒತ್ತಡ ಇರಲಿಲ್ಲ. ಸದ್ಯ ಪೊಲೀಸ್ ಇಲಾಖೆ ಸೇರಿದಂತೆ ಹಲವಾರು ಇಲಾಖೆಯಲ್ಲೂ ಹಗಲೂ ರಾತ್ರಿ ಸೇವೆ ಮಾಡಬೇಕಿದೆ. ಇದರಿಂದ ಕುಟುಂಬದ ಜತೆ ಸಮಯ ಕಳೆಯಲು ಸಾಧ್ಯವಾಗದೆ ಒತ್ತಡದ ವಾತಾವರಣ ನಿರ್ವಣವಾಗಿದೆ. ಈ ರೀತಿ ಒತ್ತಡವಿದ್ದಾಗ ಕೆಲಸದಲ್ಲಿ ಉತ್ಸಾಹವಿಲ್ಲದೆ ನಿರಾಸಕ್ತಿಯುಂಟಾಗುತ್ತಿದೆ. ನಿರಾಸಕ್ತಿಯಿಂದ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಕೆಲ ಸಮಯ ವಿಶ್ರಾಂತಿ ಮಾಡುವುದು ಸೂಕ್ತ. ಅದಕ್ಕೆ ಇಂತಹ ಕ್ರೀಡಾಕೂಟಗಳು ಸಹಕಾರಿ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts