More

    ಕೆಪಿಟಿಸಿಎಲ್, ಎಸ್ಕಾಂ ಗುತ್ತಿಗೆ ನೌಕರರ ಹೋರಾಟ ಆ.10ರಂದು

    ಕೊಪ್ಪಳ: ಕೆಪಿಟಿಸಿಎಲ್ ಹಾಗೂ ಎಸ್ಕಾಂ ಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಲೀಲಾಸಾಗರ್ ಎಂ.ಎಸ್. ತಿಳಿಸಿದರು.

    ರಾಜ್ಯಾದ್ಯಂತ 15 ಸಾವಿರ ನೌಕರರು 15ರಿಂದ 20 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದೇವೆ. ಆದರೆ, ನಮಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಸ್ಟೇಷನ್ ಆಪರೇಟರ್, ಸಹಾಯಕರು, ಮೀಟರ್ ರೀಡರ್ ಮತ್ತು ಗ್ಯಾಂಗ್‌ಮನ್ ಸಿಂಬದಿಯನ್ನುಕಾಯಂ ಮಾಡಬೇಕೆಂದು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಬೇಡಿಕೆ ಈಡೇರುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

    ಜು.31ರಂದು ಅಂತಿಮ ಗಡುವು ಕೊಡಲಾಗಿದ್ದರೂ, ಸರ್ಕಾರ ಯಾವುದೇ ಸಕಾರಾತ್ಮಕ ಚಿಂತನೆ ನಡೆಸಿಲ್ಲ. ಹೀಗಾಗಿ ಆ. 10ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಉಗ್ರ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ಮಾಡುತ್ತವೆ ಎಂದರು.

    ರಾಜ್ಯಾದ್ಯಂತ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸೇವಾ ಭದ್ರತೆ ಇಲ್ಲ. ವೇತನ ಪರಿಷ್ಕರಣೆ ಆಗಿಲ್ಲ. ಟೆಂಡರ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಪೂರ್ತಿ ಸಂಬಳ ಕೈ ಸೇರುವುದಿಲ್ಲ. ಆದ್ದರಿಂದ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ವಿದ್ಯುತ್ ಅವಘಡದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಉದ್ದೇಶಪೂರ್ವಕವಾಗಿ ಕೆಲಸದಿಂದ ಕೈಬಿಟ್ಟ ನೌಕರರನ್ನು ಮತ್ತು ವಿದ್ಯುತ್ ಅವಘಡದಿಂದ ಶೇ.30-40 ಗಾಯಗೊಂಡ ನೌಕರರು ಕೆಲಸಕ್ಕೆ ಆಸಕ್ತಿ ತೋರಿದರೆ ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದರು.


    ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಠೋಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಬೋಚನಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಲ್ಲೇಶ ಸಿದ್ನೇಕೊಪ್ಪ, ಜಿನೇಂದ್ರಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts