More

    ಕೆಎಚ್.ಮುನಿಯಪ್ಪ ಅವರನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸಿ: ಮಾಜಿ ಸಚಿವ ವರ್ತೂರು ಪ್ರಕಾಶ್

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಾ ಬಂದಿರುವ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರನ್ನು ಉಚ್ಛಾಟಿಸಬೇಕೆಂದು ಮಾಜಿ ಸಚಿವ ವರ್ತೂರು ಆರ್. ಪ್ರಕಾಶ್ ಕಾಂಗ್ರೆಸ್ ಹೈ ಕಮಾಂಡ್‍ನ್ನು ಆಗ್ರಹಿಸಿದರು.
    ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘದ ಚುನಾವಣೆಗಳು ಪಕ್ಷಾತೀತವಾಗಿ ನಡೆದರೂ ನನ್ನ ಬೆಂಬಲಿಗರನ್ನು ಸೋಲಿಸಲು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದವರು ಒಂದಾಗಿ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹಕಾರ ಸಂಘದ ಚುನಾವಣೆಗಳಲ್ಲಿ ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ನಿರ್ದೇಶನ ನೀಡಿದ್ದರೂ ಕೆ.ಎಚ್.ಮುನಿಯಪ್ಪ ನಾಯಕರ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಆಪಾದಿಸಿದರು.
    7 ಭಾರಿ ಸಂಸದರಾಗಿದ್ದವರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 7 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಗಳ ವಿರುದ್ಧ ಪ್ರಚಾರ ನಡೆಸಿರುವುದು ಜಗಜ್ಜಾಹೀರ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್‍ನ ಶ್ರೀನಿವಾಸ್ ಬದಲು ಜೆಡಿಎಸ್‍ನ ಭಕ್ತವತ್ಸಲಂ, ಮಾಲೂರಿನಲ್ಲಿ ಕಾಂಗ್ರೆಸ್‍ನ ಚನ್ನಕೇಶವ ಕಡೆಯಿಂದ 40 ಕೋಟಿ ಖರ್ಚು ಮಾಡಿಸಿ ಬಿಜೆಪಿಯ ಎಸ್. ಎನ್.ಕೃಷ್ಣಯ್ಯ ಶೆಟ್ಟಿಗೆ ಬೆಂಬಲ ನೀಡಿದ್ದರೆ, ಶ್ರೀನಿವಾಸಪುರದಲ್ಲಿ ರಮೇಶ್‍ಕುಮಾರ್ ಬದಲು ವೆಂಕಟಶಿವಾರೆಡ್ಡಿ, ಶಿಡ್ಲಘಟ್ಟದಲ್ಲಿ ವಿ.ಮುನಿಯಪ್ಪ ವಿರುದ್ದ ರಾಜಣ್ಣ, ಚಿಂತಾಮಣಿಯಲ್ಲಿ ವಾಣಿಶ್ರೀ ಬದಲು ಜೆ.ಕೆ. ಕೃಷ್ಣಾರೆಡ್ಡಿ ಗೆ ಬೆಂಬಲ ನೀಡಿದರು. ವೆಂಕಟರವಣಸ್ವಾಮಿ , ಶ್ರೀನಿವಾಸನ ಆಣೆಯಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ನಾನು ಎಂದೂ ಕೆಲಸ ಮಾಡಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿ ಕೆ.ಎಚ್.ಮುನಿಯಪ್ಪಗೆ ಮತ ಹಾಕಿಸಿದೆ. ಆದರೆ ಕೆಎಚ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ದ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
    ಕೆಎಚ್ ಮುನಿಯಪ್ಪ ತಾವು ಮೊದಲು ಕಾಂಗ್ರೆಸ್ಸೋ ಅಥವಾ ಜೆಡಿಎಸ್ಸೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ ವರ್ತೂರು ಪ್ರಕಾಶ್, ಪಕ್ಷದ ಶಾಸಕರುಗಳನ್ನು ಸರಿಯಾಗಿ ಇಟ್ಟುಕೊಂಡಿದ್ದರೆ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್. ಸೋಲುತ್ತಿರಲಿಲ್ಲ . ಚಿಕ್ಕಬಳ್ಳಾಪುರದಲ್ಲಿ ನಡೆದ ವಿಒಧಾನಸಭೆ ಮರು ಚುನಾವಣೆಯಲ್ಲಿ ಡಾ. ಸುಧಾಕರ್ ಅವರನ್ನು ಬೆಂಬಲಿಸಿದ್ದ ಕೆಎಚ್ ವಿರುದ್ದ ಪರಾಜಿತ ಅಭ್ಯರ್ಥಿ ಪಕ್ಷದ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆಂದರು.
    ಕೆ.ಎಚ್.ಮುನಿಯಪ್ಪ ಅವರಂತಹ ನಾಯಕರು ರಾಜ್ಯದಲ್ಲಿ ಇನ್ನೂ ಅನೇಕರು ಇದ್ದಾರೆ, ಅವರನ್ನೆಲ್ಲ ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಬೇಕು. ಆಗ ನಾನು, ಚಿಂತಾಮಣಿಯ ಸುಧಾಕರ್ ಇನ್ನೂ ಅನೇಕರು ಕಾಂಗ್ರೆಸ್ ಗೆ ಸೇರುತ್ತಾರೆ , ಕಾಂಗ್ರೆಸ್ 150 ಸೀಟು ಪಡೆದು ಅಧಿಕಾರಕ್ಕೆ ಬರುತ್ತದೆ. ಇದನ್ನು ಶಾಸಕರಾದ ರಮೇಶ್ ಕುಮಾರ್, ನಂಜೇಗೌಡರು, ಎಸ್.ಎನ್ ನಾರಾಯಣಸ್ವಾಮಿ ಹೇಳಬೇಕು . ಆದರೆ ಅವರು ಯಾರು ಧ್ವನಿ ಎತ್ತುತ್ತಿಲ್ಲ.ಕೆಎಚ್ ಅವರನ್ನು ಪಕ್ಷದಲ್ಲೇ ಇಟ್ಟುಕೊಂಡರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ವನಾಶ ಆಗುವುದು ಖಚಿತ. ಮೊದಲು ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು, ಪಕ್ಷದ ಹಿತ ಚಿಂತಕರಾಗಿ ತಮ್ಮ ಒತ್ತಾಯವಾಗಿದೆ ಎಂದರು.
    ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಡಿಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್ ಕುಮಾರ್,ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್, ಊರುಬಾಗಿಲು ಶ್ರೀನಿವಾಸ್, ಎಲ್.ಎ.ಮಂಜುನಾಥ್ ಹಾಗೂ ಮುಸ್ಲಿಂ ಸಮುದಾಯದಲ್ಲಿ ಟಿಕೆಟ್ ಆಸೆ ಇಟ್ಟುಕೊಂಡವರು ಎಚ್ಚೆತ್ತುಕೊಳ್ಳಬೇಕು. ಕೆಎಚ್ ಮುನಿಯಪ್ಪ ಇವರಿಗೆಲ್ಲಾ ಚಾಕಲೇಟ್ ತಿನ್ನಿಸಿ ಬೆಂಗಳೂರಿನ ಎಂಎಲ್ಸಿ ಗೋವಿಂದ ರಾಜು ಅವರಿಗೆ ಟಿಕೆಟ್ ಕೊಡಿಸಲು ಈಗಾಗಲೇ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದಾರೆ ಎಂದು ನುಡಿದರು.
    ನಾನೇನು ಅಜೆರ್ಂಟಾಗಿ ಕಾಂಗ್ರೆಸ್ ಸೇರಬೇಕೆಂದು ಅರ್ಜಿ ಹಾಕ್ತಿಲ್ಲ. ಹುಟ್ಟುತ್ತಾ ಕಾಂಗ್ರೆಸ್ ನವರು ನಾವು. ಕೆಎಚ್ ತಾಲೂಕು ಬೋರ್ಡ್ ಚುನಾವಣೆಗೆ ಜನತಾದಳದಿಂದ ನಿಂತಿದ್ದವರು ಎಂದು ಟಾಂಗ್ ನೀಡಿದರು.
    ಕೆ.ಎಚ್.ಮುನಿಯಪ್ಪಗಿಂತ ಸಂಸದ ಮುನಿಸ್ವಾಮಿ ನೂರು ಪಾಲು ಮೇಲು. ಕೆಎಚ್ ರೀತಿ ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ. 24 ಗಂಟೆ ಆಬಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಮುನಿಸ್ವಾಮಿ ನನ್ನ ಶಿಷ್ಯ. ನನ್ನ ಪರವಾಗಿ ಹಿಂದೆ ವರ್ತೂರು ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಮಾಡಿದ್ದರು. ಸ್ನೇಹ, ವಿಶ್ವಾಸವೇ ಬೇರೆ, ರಾಜಕೀಯವೇ ಬೇರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಕೆಎಚ್ ಮುನಿಯಪ್ಪ ಅವರನ್ನೇ ಬೆಂಬಲಿಸಿದ್ದೆ ಎಂದು ಪುನರುಚ್ಚರಿಸಿದರು.
    ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‍ಪ್ರಸಾದ್, ಮುಖಂಡರಾದ ಬಂಕ್ ಮಂಜು, ತಂಬಿಹಳ್ಳಿಮುನಿಯಪ್ಪ, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ ಗೋಷ್ಠಿಯಲ್ಲಿ ಹಾಜರಿದ್ದರು.

    ಕೆಎಚ್.ಮುನಿಯಪ್ಪ ಅವರನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸಿ: ಮಾಜಿ ಸಚಿವ ವರ್ತೂರು ಪ್ರಕಾಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts