More

    ಕೆಂಪೇಗೌಡರ ಹೆಸರಲ್ಲೇ ಇದೆ ಮಹಿಮೆ : ಎಂಎಲ್​ಸಿ ಇಂಚರ ಗೋವಿಂದರಾಜು ಅಭಿಮತ, ಅವರ ಹೆಸರಿಟ್ಟ ಸ್ಥಳಗಳು ಅಭಿವೃದ್ಧಿ

    ಕೋಲಾರ: ಕೆಂಪೇಗೌಡರು ಕಟ್ಟಿದ ಬೆಂಗಳೂರು ವಿಶ್ವವಿಖ್ಯಾತಿ ಪಡೆದಿರುವಂತೆಯೇ ಅವರ ಹೆಸರಿರುವ ಮೆಜೆಸ್ಟಿಕ್​ ನಿಲ್ದಾಣ, ರಸ್ತೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಅಭೂತಪೂರ್ವ ಬೆಳವಣಿಗೆ ಕಂಡಿದ್ದು, ಅವರ ಹೆಸರಿನಲ್ಲೇ ಶಕ್ತಿ ಇದೆ ಎನ್ನುವುದಕ್ಕೆ ಇಂತಹ ಸಹಸ್ರಾರು ನಿದರ್ಶನಗಳು ಸಿಗುತ್ತವೆ ಎಂದು ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.
    ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಒಕ್ಕಲಿಗರ ಸಂಘ ಮತ್ತು ಕನ್ನಡ ಸಂಸತಿ ಇಲಾಖೆ ಸೋಮವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿ, ಮೆಜೆಸ್ಟಿಕ್​ ಏಷ್ಯಾದಲ್ಲೇ ದೊಡ್ಡ ನಿಲ್ದಾಣ ಎಂಬ ಖ್ಯಾತಿ ಪಡೆದಿತ್ತು. ಅದೇ ರೀತಿ ಕೆಂಪೇಗೌಡ ರಸ್ತೆ ಈಗಲೂ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಉಳಿದುಕೊಂಡಿದೆ. ಇನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಡವಾಗಿ ಕರ್ನಾಟಕಕ್ಕೆ ಸಿಕ್ಕರೂ ಕಡಿಮೆ ಅವಧಿಯಲ್ಲೇ ವಿಸ್ತಾರಗೊಂಡು 2ನೇ ರ್ಟಮಿನಲ್​ ನಿಮಾರ್ಣವಾಗುತ್ತಿದ್ದು, ಅಕ್ಟೋಬರ್​ನಲ್ಲಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂಬುದು ಸಂತೋಷದ ಸಂಗತಿ ಎಂದರು.
    ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ಏಷ್ಯಾದಲ್ಲೇ ದೊಡ್ಡ ಟೊಮ್ಯಾಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರದ ಕೃಷಿ ಮಾರುಕಟ್ಟೆಗೆ ಕೆಂಪೇಗೌಡರ ಹೆಸರನ್ನಿಡಲು ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಒಕ್ಕಲಿಗರ ಸಂಘ ಜಿಲ್ಲೆಯಲ್ಲಿ ಹಳೆಯದಾಗಿದ್ದು, ದೊಡ್ಡ ಸಮುದಾಯವಾಗಿದ್ದರೂ, ಇಲ್ಲಿಯ ತನಕ ಸರ್ಕಾರ ಜಮೀನು ಮಂಜೂರು ಮಾಡದಿರುವುದು ಸರಿಯಲ್ಲ. ಕೂಡಲೇ 9 ಎಕರೆ ಜಮೀನು ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಶತಶೃಂಗ ಬೆಟ್ಟದ ಮೇಲೆ ಕಷ್ಟವಾದರೂ ದಾಖಲೆಯಂತೆ ಯೋಗಾಭ್ಯಾಸ ನಡೆಸಿದ್ದು, ಅಲ್ಲಿ 50 ಎಕರೆ ಸರ್ಕಾರಿ ಜಾಗ ಭೂಗಳ್ಳರ ಪಾಲಾಗದಿರಲೆಂದು. ಎಲ್ಲ ಸಮುದಾಯದವರನ್ನೂ ಪ್ರೀತಿ, ಮಮಕಾರದಿಂದ ಕೊಂಡೊಯ್ಯುವ ಶಕ್ತಿ ಒಕ್ಕಲಿಗ ಸಮುದಾಯಕ್ಕಿದೆ. ನನ್ನ ಗೆಲುವಿಗೂ ಈ ಸಮುದಾಯ ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದು, ಅದೇ ರೀತಿ ದಲಿತರು, ಹಿಂದುಳಿದವರೂ ಬೆಂಬಲಿಸಿದ್ದಾರೆ. ಎಲ್ಲರೂ ಅಣ್ಣತಮ್ಮಂದಿರಂತೆ ಸೌಹಾರ್ದದಿಂದ ಬದುಕಿ ಜಿಲ್ಲೆಯನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯೋಣ ಎಂದರು.
    ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಕೆಂಪೇಗೌಡರ ಕುಲದಲ್ಲಿ ಹುಟ್ಟಿರುವ ಕೆಂಗಲ್​ ಹನುಮಂತಯ್ಯ ವಿಧಾನಸೌಧ ಕಟ್ಟಿಸಿದರೆ, ಎಸ್​.ಎಂ.ಕೃಷ್ಣ ವಿಕಾಸಸೌಧ ಕಟ್ಟಿಸಿದರು. ಕುವೆಂಪು ನಾಡಗೀತೆ, ರೈತಗೀತೆ ರಚಿಸಿದರು. ನಮ್ಮ ಜಿಲ್ಲೆಯವರಾದ ಎಂ.ವಿ.ಕೃಷ್ಣಪ್ಪ ಅವರು ಮಿಶ್ರತಳಿ ರಾಸುಗಳನ್ನು ಅಭಿವೃದ್ಧಿಪಡಿಸಿ ರಾಜ್ಯದಲ್ಲಿ ರಕ್ರಾಂತಿಗೆ ಕಾರಣರಾದರು. ರಾಜ್ಯದಲ್ಲಿ ದೊಡ್ಡ ಸಮುದಾಯವಾದರೂ, ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
    ಎಸ್ಪಿ ಡಿ.ದೇವರಾಜ ಮಾತನಾಡಿ, ಕೆಂಪೇಗೌಡರ ರ್ಪೂವಿಕರು ಪಾಲಾರ್​ ನದಿ ದಾಟಿ ಮುಂದಕ್ಕೆ ಸಾಗಿದಾಗ, ಅವರು ಊರಲ್ಲೇ ಕಟ್ಟಿಹಾಕಿ ಬಂದಿದ್ದ ನಾಯಿಯನ್ನು ಶತ್ರುಗಳು ಬಿಡಿಸಿ ಕರೆತರುತ್ತಾರೆ. ನಾಯಿ ನದಿ ತನಕ ಬಂದು ಯಜಮಾನರು ತೆರಳಿದ ಕಡೆ ಹೋಗದೆ, ನದಿಗೆ ಹಾರಿ ಪ್ರಾಣ ಬಿಡುತ್ತದೆ. ಅದರ ನಿಯತ್ತು ತಿಳಿದು ಭೈರವೇಶ್ವರನ ಬಳಿ ನಾಯಿಯನ್ನು ಪೂಜಿಸುತ್ತಾ ಬಂದಿರುವುದನ್ನು ಕಾಣಬಹುದು ಎಂದರು.

    ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬಿಸಪ್ಪಗೌಡ, ಸಮಾಜ ಸೇವಕ ಸಿಎಂಆರ್​ ಶ್ರೀನಾಥ್​, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಮುಖಂಡ ಮಾಗೇರಿ ನಾರಾಯಣಸ್ವಾಮಿ ಇತರರು ಇದ್ದರು.

    ಇನ್ನು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಯಾರನ್ನೂ ಕೇಳುವುದು ಬೇಡ. ವೈಯಕ್ತಿಕವಾಗಿ 1 ಕೋಟಿ ರೂ. ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಎಂಎಲ್​ಸಿ ಇಂಚರ ಗೋವಿಂದರಾಜು 10 ಲಕ್ಷ ರೂ. ನೀಡುವುದಾಗಿ ತಿಳಿಸಿದರು.

    ವಾಣಿಜ್ಯ ಕಟ್ಟಡಕ್ಕೆ 25 ಲ ರೂ. ನೆರವು: ಕೋಲಾರದಲ್ಲಿ ಒಕ್ಕಲಿಗರ ಭವನ(ವಾಣಿಜ್ಯ ಕಟ್ಟಡ)ವನ್ನು 10 ಕೋಟಿ.ರೂ.ವೆಚ್ಚದಲ್ಲಿ ನಿಮಿರ್ಸಲು ಉದ್ದೇಶಿಸಿದ್ದು, ವೈಯಕ್ತಿಕವಾಗಿ 25 ಲಕ್ಷ ರೂ. ನೀಡುತ್ತೇನೆ ಎಂದು ಸಂಸದ ಎಸ್​.ಮುನಿಸ್ವಾಮಿ ಘೋಷಿಸಿದರು. ಶೀಘ್ರ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ, ಒಕ್ಕಲಿಗರ ಸಂಘಕ್ಕೆ ಮುಂದಿನ ಕೆಂಪೇಗೌಡ ಜಯಂತಿ ಒಳಗೆ 9 ಎಕರೆ ಜಮೀನು ಮಂಜೂರು ಮಾಡಿಸಿಕೊಡುತ್ತೇನೆ. ಕೃಷಿ ಮಾರುಕಟ್ಟೆ, ಒಳಾಂಗಣ ಕ್ರೀಡಾಂಗಣಕ್ಕೆ ಕೆಂಪೇಗೌಡರ ಹೆಸರನ್ನಿಡೋಣ. ಎಲ್ಲ ಪ್ರಸ್ತಾವನೆಗಳನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಿ ಎಂದು ಜಿಲ್ಲಾಧಿಕಾರಿ ವೆಂಕಟ್​ರಾಜಾಗೆ ತಿಳಿಸಿದರು.

     

    ವಿಶ್ವದ 20 ಅತ್ಯುತ್ತಮ ಜೀವನ ನಿರ್ವಹಣಾ ನಗರಗಳಲ್ಲಿ ಬೆಂಗಳೂರು ಒಂದಾಗಿರುವುದು ಹೆಮ್ಮೆಯ ಸಂಗತಿ. ಇಂತಹ ನಗರ ನಿಮಾರ್ಣಕ್ಕೆ ಕಾರಣರಾದ ಕೆಂಪೇಗೌಡರು ಸ್ಮರಣೀಯರು.
    ವೆಂಕಟ್​ರಾಜಾ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts