More

    ಕೃಷ್ಣಾ ನದಿ ದಂಡೆಯಲ್ಲಿ ಮೊಸಳೆಗಳ ಹಿಂಡು

    ರಾಯಚೂರು: ತಾಲೂಕಿನ ಆತ್ಕೂರು ಗ್ರಾಮದ ಹತ್ತಿರ ಹರಿಯುತ್ತಿರುವ ಕೃಷ್ಣಾ ನದಿ ದಂಡೆಯಲ್ಲಿ ಹತ್ತಾರು ಮೊಸಳೆಗಳ ಹಿಂಡು ಓಡಾಡುತ್ತಿದ್ದು, ಗ್ರಾಮಸ್ಥರು ಭಯ ಭೀತರಾಗುವಂತಾಗಿದೆ.
    ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಮೊಸಳೆಗಳು ನದಿ ದಂಡೆಗೆ ಬಂದು ಪೋದೆ ಮತ್ತು ಬಂಡೆಗಳ ಮೇಲೆ ಆಶ್ರಯ ಪಡೆಯುತ್ತಿದ್ದು, ಜಮೀನು ಕೆಲಸಕ್ಕೆ ತೆರಳಿದ್ದ ರೈತರು ಹತ್ತಾರು ಮೊಸಳೆಗಳನ್ನು ಕಂಡು ಭೀತಿಯಿಂದ ಓಡಿ ಬಂದಿದ್ದಾರೆ.
    ಐತಿಹಾಸಿಕ ಪ್ರಸಿದ್ಧ ದತ್ತ ಪೀಠವಿರುವ ಕುರ್ವಕಲಾ ನಡುಗಡ್ಡೆಗೆ ಜನರು ತೆಪ್ಪಗಳಲ್ಲಿ ತೆರಳುತ್ತಿದ್ದು, ದೊಡ್ಡ ಗಾತ್ರದ ಮೊಸಳೆಗಳನ್ನು ಕಂಡು ನಡುಗಡ್ಡೆಗೆ ತೆರಳಲು ಭೀತಿ ಎದುರಾಗಿದೆ. ಜತೆಗೆ ನದಿ ಪಕ್ಕದಲ್ಲಿರುವ ಜಮೀನುಗಳಿಗೆ ಕೆಲಸಕ್ಕೆ ತೆರಳುವ ರೈತರಲ್ಲಿಯೂ ಕೂಡಾ ಆತಂಕ ಎದುರಾಗುವಂತಾಗಿದೆ.
    ಕೆಲವು ದಿನಗಳ ಹಿಂದೆ ನದಿಯಲ್ಲಿ ನೀರಿಲ್ಲದ ಕಾರಣ ನದಿ ಪಕ್ಕದ ಗ್ರಾಮಗಳಿಗೆ ಮೊಸಳೆಗಳು ನುಗ್ಗುತ್ತಿದ್ದವು. ಈಗ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ನದಿ ಪಕ್ಕದ ಪೋದೆಗಳಲ್ಲಿ ಆಶ್ರಯ ಪಡೆದಿದ್ದು, ಜನರು ಜಾನುವಾರುಗಳನ್ನು ನದಿ ಹತ್ತಿರ ಹೋಗದಂತೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts