More

    ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕಲ್ಪಿಸದ ಬೆಸ್ಕಾಂ

    ವಿಜಯವಾಣಿ ಸುದ್ದಿಜಾಲ ಕೋಲಾರ
    ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಎರಡು ವರ್ಷಗಳಿಂದ ಸತಾಯಿಸುತ್ತಿರುವ ಬೆಸ್ಕಾಂ ಧೋರಣೆ ಖಂಡಿಸಿ ರೈತಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕಾರ್ಯಕರ್ತರು ಬೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
    ಈ ವೇಳೆ ಮಾತನಾಡಿದ ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ, 2019-20ನೇ ಸಾಲಿನಲ್ಲಿ ಕೆಜಿಎಫ್ ಬೆಸ್ಕಾಂ ವಿಭಾಗದಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್, ಮೂಲ ಸೌಲಭ್ಯಕ್ಕೆ ಬಂಗಾರಪೇಟೆ, ಕೆಜಿಎಫ್, ಬೇತಮಂಗಲ, ಮಾಲೂರು, ಮುಳಬಾಗಿಲು ಉಪ ವಿಭಾಗಗಳ ವ್ಯಾಪ್ತಿಯಡಿ 800ಕ್ಕೂ ಹೆಚ್ಚಿನ ರೈತರು ಅರ್ಜಿ ಸಲ್ಲಿಸಿ ನೋಂದಣಿ ಮಾಡಿ ತಲಾ 26,000 ರೂ. ಪಾವತಿಸಿದ್ದರೂ ಎರಡು ವರ್ಷದಿಂದ ಯಾವುದೇ ಕಾಮಗಾರಿಗಳನ್ನು ನಡೆಸಿಲ್ಲ. ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ ಬಜೆಟ್ ಬಂದಿಲ್ಲವೆಂದು ಹಾರಿಕೆ ಉತ್ತರಗಳನ್ನು
    ನೀಡುತ್ತಿದ್ದಾರೆ. ಹಾಗಾದರೆ ರೈತರು ಪಾವತಿಸಿರುವ ಹಣ ಏನಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಮಾತನಾಡಿ, ಬಂಡವಾಳ ಶಾಹಿ ಗುತ್ತಿಗೆದಾರರಿಗೆ ಕವರ್ ಕಂಡೆಕ್ಟರ್, ಯುಜಿ ಮತ್ತು ಎಬಿ ಕೇಬಲ್ ಗುತ್ತಿಗೆ ಮಾಡಲು ಮಾತ್ರ ಬಜೆಟ್ ಸರಾಗವಾಗಿ ಬರುತ್ತದೆ. ರೈತರು ಕೊಳವೆಬಾವಿ ಕೊರೆಯಿಸಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಹಣ ಪಾವತಿಸಿದರೂ ಸೌಲಭ್ಯ ಕಲ್ಪಿಸಿಲ್ಲ. ಈ ಕೂಡಲೇ ಸಮಸ್ಯೆ ಬಗೆಹರಿಸಿ ರೈತರಿಗೆ ಸೌಲಭ್ಯ ಕಲ್ಪಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಚಂದ್ರಪ್ಪ, ಕೋಲಾರ ತಾಲೂಕು ಅಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್, ಮುಖಂಡರಾದ ಬೈರಪ್ಪ, ಸಿ.ನಾರಾಯಣಗೌಡ, ರಘುನಾಥ್, ಗೋಪಿನಾಥ್, ಎಚ್.ಕೆ.ದೇವರಾಜ್, ಮುನಿವೆಂಕಟಪ್ಪ ಉಪಸ್ಥಿತರಿದ್ದರು.

    ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕಲ್ಪಿಸದ ಬೆಸ್ಕಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts