More

    ಕೃಷಿ ಕೂಲಿಕಾರರಿಗೂ ಕಾರ್ವಿುಕರ ಸೌಲಭ್ಯ

    ಯಲ್ಲಾಪುರ: ಅಸಂಘಟಿತ ವಲಯದ ಕೃಷಿ, ತೋಟಗಾರಿಕಾ ಕೂಲಿಕಾರರು, ಸಂಕಷ್ಟದಲ್ಲಿದ್ದು, ಅವರನ್ನು ಕಾರ್ವಿುಕ ವಲಯಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾನೂನಿನಲ್ಲಿ ತಿದ್ದುಪಡಿ ತಂದು ಅವರಿಗೂ ಕಾರ್ವಿುಕರಿಗೆ ಸಿಗುವ ಸೌಲಭ್ಯ ಒದಗಿಸಿಕೊವ ಪ್ರಯತ್ನ ಮಾಡಲಾಗುವುದು ಎಂದು ಕಾರ್ವಿುಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಪಟ್ಟಣದ ಟಿ.ಎಂ.ಎಸ್. ಸಭಾಭವನದಲ್ಲಿ ಜಿಪಂ, ಕೃಷಿ ಇಲಾಖೆ, ಕೃಷಿಕ ಸಮಾಜ, ರೈತ ಸಂಘದ ಆಶ್ರಯದಲ್ಲಿ ಆತ್ಮಾ ಯೋಜನೆಯಡಿ ಹಮ್ಮಿಕೊಂಡ ಕಿಸಾನ್ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿ ಕ್ಷೇತ್ರ ಸೊರಗುತ್ತಿರುವ ಸಂದರ್ಭದಲ್ಲಿ ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಮತ್ತೆ ಯುವಕರನ್ನು ಇತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

    ತಾಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ರೂಪಾ ಬೂರ್ಮನೆ, ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಕೃಷಿಕ ಸಮಾಜದ ಅಧ್ಯಕ್ಷ ಗಣಪತಿ ಮುದ್ದೆಪಾಲ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ರೈತ ಸಂಘದ ಅಧ್ಯಕ್ಷ ಎನ್.ಎಂ. ಹೆಗಡೆ ಪಣತಗೇರಿ, ಪ್ರಗತಿಪರ ಕೃಷಿಕ ಆರ್.ಜಿ.ಹೆಗಡೆ ಬೆದೆಹಕ್ಲ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಇತರರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ನೀರ್ನಳ್ಳಿ ಸೀತಾರಾಮ ಹೆಗಡೆ, ವಿ.ಎಂ. ಹೆಗಡೆ ಶಿರಸಿ, ನಿಂಗಯ್ಯ ಹಿರೇಮಠ ಉಪನ್ಯಾಸ ನೀಡಿದರು. ಆತ್ಮಾಯೋಜನೆಯ ಎಂ.ಜಿ. ಭಟ್ಟ, ಕೃಷಿ ಅಧಿಕಾರಿ ಟಿ.ಎಸ್. ಚಿಕ್ಕಮಠ ನಿರ್ವಹಿಸಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts