More

    ಕೃಷಿಯಲ್ಲಿ ಕಾಳಜಿ ಇದ್ದರೆ ಜೀವನದಲ್ಲಿ ಸಿಹಿ

    ಮಾಂಜರಿ: ಜಮೀನುಗಳಲ್ಲಿ ಹೆಚ್ಚುವರಿ ಇಳುವರಿ ಪಡೆಯುವುದಕ್ಕಾಗಿ ರೈತರು ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಫಲವತ್ತತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

    ಸಮೀಪದ ಅಂಕಲಿ ಗ್ರಾಮದ ತಮ್ಮ ಜಮೀನಿನಲ್ಲಿ ಭಾನುವಾರ ಸಾವಯವ ಕೃಷಿ ಪದ್ಧತಿಯಡಿ ಬೆಳೆದ ಕಬ್ಬು ಬೆಳೆ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಬ್ಬಿನ ಬೆಳೆಯಲ್ಲಿ ಅವೈಜ್ಞಾನಿಕವಾಗಿ ನೀರು, ರಸಗೊಬ್ಬರ ಬಳಕೆಗೆ ವಿದಾಯ ಹೇಳದಿದ್ದರೆ ಉಳಿಗಾಲವಿಲ್ಲ.

    ಭೂಮಿ ಸವುಳು-ಜವುಳಾಗಿ ಬರಡಾಗುತ್ತದೆ. ಜಮೀನಿನಲ್ಲಿ ಬೆಳೆ ಬೆಳೆಯಲು ಕಾಳಜಿ ಬೇಕು. ಹೀಗಾಗಿ ಮಿತ ನೀರಿನ ಬಳಕೆ ಮಾಡಿ, ಸಾವಯವ ಗೊಬ್ಬರ ಬಳಕೆ ಮಾಡಬೇಕು. ಕೃಷಿಯಲ್ಲಿ ಸುಧಾರಿತ ಪದ್ಧತಿಗಳನ್ನು ಅಳವಡಿಸಿಕೊಂಡರೆ ನಿರೀಕ್ಷೆಗೂ ಮೀರಿ ಇಳುವರಿ ಪಡೆಯಬಹುದು ಎಂದರು.

    ನನ್ನ ಜಮೀನಿನಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಕೇವಲ ಜೈವಿಕ ಗೊಬ್ಬರ ಬಳಕೆ ಮಾಡಿ ಎರಡು ಎಕರೆ ಕಬ್ಬು ಬೆಳೆಯಲಾಗಿದೆ. ಇಂದಿನ ದಿನಮಾನಗಳಲ್ಲಿ ಸಗಣಿ ಗೊಬ್ಬರ ಕಡಿಮೆ ಇರುವ ಕಾರಣ ಲಭ್ಯ ಇರುವ ಸಗಣಿ ಗೊಬ್ಬರ ಹಾಗೂ ಜೈವಿಕ ಗೊಬ್ಬರವನ್ನು ಕಬ್ಬು ಲಾವಣಿ ಮಾಡುವುದಕ್ಕೂ ಮುನ್ನ ಬಳಕೆ ಮಾಡಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.

    ಚಿದಾನಂದ ಕೋರೆ, ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಅಭಿವೃದ್ಧಿ ಅಧಿಕಾರಿ ಎನ್.ಎಸ್.ಹಿರೇಮಠ, ರಾಹುಲ ಇಚಲಕರಂಜಿ, ಅಂಕಲಿ ಗ್ರಾಪಂ ಸದಸ್ಯ ತುಕಾರಾಮ
    ಪಾಟೀಲ, ಅಪ್ಪಾಸಾಹೇಬ ನಾಯಿಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts