More

    ಕೂಡಲೇ ರೈತರಿಗೆ ಪರಿಹಾರ ನೀಡಿ

    ಆಳಂದ (ಕಲಬುರಗಿ): ತಡಕಲ್, ಮುನ್ನಳ್ಳಿ, ಕಿಣ್ಣಿಸುಲ್ತಾನ್, ಸಾಲೇಗಾಂವ್, ಖಜೂರಿ, ಹಳ್ಳಿಸಲಗರ ಸೇರಿ ವಿವಿಧೆಡೆ ಬಸವನ ಹುಳುಗಳ ಕಾಟದಿಂದ ಸೋಯಾಬೀನ್, ಹೆಸರು, ಉದ್ದು ಬೆಳೆ ಸಂಪೂರ್ಣ ಹಾಳಾಗಿದೆ. ಕೂಡಲೇ ಸರ್ಕಾರ ಪರಿಹಾರ ನೀಡುವ ಮೂಲಕ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ್ ಒತ್ತಾಯಿಸಿದರು.

    ತಡಕಲ್ ಗ್ರಾಮದ ಹೊಲಗಳಿಗೆ ಮಂಗಳವಾರ ಭೇಟಿ ನೀಡಿ ಬಸವನ ಹುಳುಗಳ ಕಾಟದಿಂದ ಹಾಳದ ಬೆಳೆ ಪರಿಶೀಲಿಸಿದ ಅವರು, ಎಲ್ಲೆಡೆ ಬಸವನ ಹುಳುಗಳ ಕಾಟ ವಿಪರೀತವಾಗಿದೆ. ಕೃಷಿ ಅಧಿಕಾರಿಗಳು ಕೇವಲ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಸುಮ್ಮನಾಗುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ, ಹಾನಿ ಪರಿಶೀಲಿಸಬೇಕು. ಅಲ್ಲದೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

    ನರೋಣಾ, ಖಜೂರಿ ಹೋಬಳಿ ವ್ಯಾಪ್ತಿಯಲ್ಲಿ 2200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾಗುವ ಭೀತಿ ಇದ್ದು, ಕೂಡಲೇ ಹುಳುಗಳ ಕಾಟ ತಪ್ಪಿಸುವ ಕೆಲಸ ಆಗಬೇಕು. ಅಲ್ಲದೆ ಸಮಸ್ಯೆಯನ್ನು ಕೃಷಿ ಸಚಿವರ ಗಮನಕ್ಕೆ ತರುವ ಕೆಲಸ ಮಾಡಿ ಎಂದು ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಮೇತ್ರಿ ಅವರಿಗೆ ಮೊಬೈಲ್ ಮೂಲಕ ಸಲಹೆ ನೀಡಿದರು.

    ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ಗುರುಶರಣ ಪಾಟೀಲ್, ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷೆ ಬಂಡೆಮ್ಮ ಬಂಡೆಪ್ಪ, ಸದಸ್ಯ ವಿಶ್ವನಾಥ ಪವಾಡಶಟ್ಟಿ, ಪ್ರಮುಖರಾದ ಗಣೇಶ ಪಾಟೀಲ್, ಮಲ್ಲಿನಾಥ ಹತ್ತರಕಿ, ನಾಗಣ್ಣ ಗೌರೆ, ಕುಪ್ಪಣ್ಣ ನಾಮಣೆ, ಮಹೇಶ ಮದನಕರ್, ಸಿದ್ದು ವೇದಶೆಟ್ಟಿ, ಲಿಂಗರಾಜ ಜಾನೆ, ಶಾಣಪ್ಪ ಕಟಕೆ, ಬಸವರಾಜ ಮೊನ್ನೊಳಿ, ಶಾಂತಪ್ಪ ಬಾವಿ, ಅನೀಲ್ ಚವ್ಹಾಣ್, ಸಂತೋಷ ಎಕುಂಡೆ ಇತರರಿದ್ದರು.

    ಎಕರೆಗೆ 12 ಸಾವಿರ ರೂ.ಪರಿಹಾರ ಕೊಡಿ

    ಕಲಬುರಗಿ: ಶಂಖದ ಹುಳು ಕಾಟದಿಂದ ಹೆಸರು, ಉದ್ದು ಮತ್ತು ಸೋಯಾ ಬೆಳೆ ಹಾನಿಯಾಗಿದೆ. ರೈತರಿಗೆ ಕೂಡಲೇ ಪ್ರತಿ ಎಕರೆಗೆ 12 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ್ ಒತ್ತಾಯಿಸಿದರು.

    ಕೃಷಿ ಸಚಿವರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಆಳಂದ, ಚಿಂಚೋಳಿ ಮತ್ತು ಕಲಬುರಗಿ ತಾಲೂಕಿನಲ್ಲಿ ಬಸವನ ಹುಳು ಕಾಟ ವ್ಯಾಪಕವಾಗಿದೆ. ರೈತರು ಇಷ್ಟೆಲ್ಲ ಸಮಸ್ಯೆ ಅನುಭವಿಸುತ್ತಿದ್ದರೂ, ಕೃಷಿ ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. 8000 ಎಕರೆ ಜಮೀನಿನಲ್ಲಿನ ಸೋಯಾ, ಉದ್ದು, ಹೆಸರು ಹಾಳಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವರು ಕೃಷಿ ಅಧಿಕಾರಿಗಳ ಸಭೆ ನಡೆಸದೆ ನಿರ್ಲಕ್ಷ್ಯ ತೋರಿದ್ದಾರೆ. ಆಳಂದ ಶಾಸಕರು ಸೌಜನ್ಯಕ್ಕೂ ಪರಿಶೀಲನೆ ನಡೆಸಿಲ್ಲ. ಇಂತಹ ಕೆಟ್ಟ ಸಕರ್ಾರ ಎಂದೂ ನೋಡಿಲ್ಲ. ತೊಗರಿಗೆ ಮಾತ್ರ ಬೆಳೆ ವಿಮೆ ಅನುಕೂಲವಿದೆ. ಸೋಯಾ, ಉದ್ದು ಮತ್ತು ಹೆಸರಿಗೆ ಈ ಯೋಜನೆ ಅನ್ವಯವಾಗಲ್ಲ. ಹೀಗಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಎಂಬುದು ನಿಷ್ಕ್ರೀಯ ಮತ್ತು ಬೋಗಸ್ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts