More

    ಕುಸಿದಿದೆ ಶೈಕ್ಷಣಿಕ ಗುಣಮಟ್ಟ

    ಹುಕ್ಕೇರಿ, ಬೆಳಗಾವಿ: ದಶಕಗಳ ಹಿಂದೆ ಮಕ್ಕಳನ್ನು ದಂಡಿಸುವಂತೆ ಪಾಲಕರು ಶಿಕ್ಷಕರಿಗೆ ತಿಳಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳನ್ನು ದಂಡಿಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಕಳವಳ ವ್ಯಕ್ತಪಡಿಸಿದರು.

    ತಾಲೂಕಿನ ಬೆಲ್ಲದ ಬಾಗೇವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿಶ್ವರಾಜ ಧರ್ಮಾರ್ಥ ಟ್ರಸ್ಟ್‌ನಿಂದ ಗುರುವಾರ ಆಧುನಿಕ ಶೈಕ್ಷಣಿಕ ಕಲಿಕಾ ಸಾಮಗ್ರಿ, ಡಿಜಿಟಲ್ ಉಪಕರಣ ವಿತರಿಸಿ ಅವರು ಮಾತನಾಡಿದರು.

    ಕಲಿಕೆಯಲ್ಲಿ ಹಿಂದುಳಿದ ಹಾಗೂ ತುಂಟತನ ಮಾಡುವ ಮಕ್ಕಳಿಗೆ ಶಿಕ್ಷಿಸಿ ಬುದ್ಧಿ ಹೇಳುವುದು ಸಹಜ. ಆದರೆ, ಇಂದಿನ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಕರು ದಂಡಿಸದಂತೆ ಆಗ್ರಹಿಸುತ್ತಾರೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಹೊಂದುತ್ತಾರೆ. ಕಾರಣ, ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡಬೇಕು ಎಂದು ತಿಳಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

    ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ಜಿಪಂ ಅಭಿಯಂತ ಎಸ್.ಡಿ.ಕಾಂಬಳೆ, ಹುಕ್ಕೇರಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಗೌರಿಶಂಕರ ಮಹಾಳಂಕ, ಮುಖ್ಯಶಿಕ್ಷಕರಾದ ಕೆ.ಸಿ.ಮುಚಖಂಡಿ, ಪಿ.ಜಿ.ರಾಯ್ಕರ, ಮಲ್ಲಣ್ಣ ಕಣಗಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts