More

    ಕುವೆಂಪು ವಿವಿ ಪದವಿ ವೇಳಾಪಟ್ಟಿಗೆ ಆಕ್ಷೇಪ

    ಬೀರೂರು: ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿರುವ ಪದವಿ ತರಗತಿಗಳ ನೂತನ ಶೈಕ್ಷಣಿಕ ವೇಳಾಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೀರೂರು ಘಟಕದಿಂದ ಶನಿವಾರ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿಗಳ ಹಿತಕಾಪಾಡುವ ನಿಟ್ಟಿನಲ್ಲಿ ಪರಿಷ್ಕೃತ ವೇಳಾಪಟ್ಟಿ ರಚಿಸುವಂತೆ ಒತ್ತಾಯಿಸಿದರು.

    ನೂತನ ವೇಳಾಪಟ್ಟಿ ಅನ್ವಯ 4 ಮತ್ತು 6ನೇ ನೆಮಿಸ್ಟರ್​ಗೆ ಆ.30 ಕೊನೆಯ ದಿನ ಎಂದು ಪ್ರಕಟಿಸಲಾಗಿದೆ. ಸೆ.7ರಿಂದ ಪರೀಕ್ಷೆ ನಿಗದಿ ಮಾಡಿದೆ. ಆದರೆ ಪಾಠ ಪ್ರವಚನಗಳು ಪೂರ್ಣವಾಗಿಲ್ಲ. ಇದರಿಂದ ಪರೀಕ್ಷೆ ಎದುರಿಸಲು ತೊಂದರೆ ಆಗಲಿದೆ ಎಂದು ವಿದ್ಯಾರ್ಥಿಗಳು ಅಹವಾಲು ಹೇಳಿಕೊಂಡರು.

    ಜಿಲ್ಲಾ ಸಂಚಾಲಕ ಶಶಾಂಕ್ ಮಾತನಾಡಿ, ಕುವೆಂಪು ವಿವಿಯ 4 ಹಾಗೂ 6ನೇ ಸೆಮಿಸ್ಟರ್​ನ ತರಗತಿಗಳು ಜೂನ್​ನಲ್ಲಿ ಆರಂಭವಾಗಿವೆ. ಪಾಠಗಳು ಪೂರ್ಣಗೊಂಡಿಲ್ಲ, ಅಗತ್ಯಕ್ಕಿಂತಲೂ ಕಡಿಮೆ ತರಗತಿಗಳು ನಡೆದಿರುವುದರಿಂದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಇದೇ ಸಮಸ್ಯೆ 2ನೇ ಸೆಮಿಸ್ಟರ್​ನ ವಿದ್ಯಾರ್ಥಿಗಳಿಗೂ ಉಂಟಾಗಲಿದೆ. ಕೂಡಲೇ ವೇಳಾಪಟ್ಟಿ ಹಿಂಪಡೆದು ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

    ಕಡೂರು ಮತ್ತು ಬೀರೂರು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನಾಡ ಕಚೇರಿ ಉಪತಹಸೀಲ್ದಾರ್ ಮೂಲಕ ಕುವೆಂಪು ವಿಶ್ವವಿದ್ಯಾಲಯ ಕುಲಪತಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts