More

    ನಿಗದಿತ ಕೊನೆಯ ಎರಡು ದಿನವೇ ರಜೆ!

    ಕುಮಟಾ: ಕಾರ್ವಿುಕರ ಮಕ್ಕಳಿಗೆ ಕಾರ್ವಿುಕ ಇಲಾಖೆಯಿಂದ ನೀಡುವ ಲ್ಯಾಪ್​ಟಾಪ್​ಗಾಗಿ ಅರ್ಜಿ ಸಲ್ಲಿಸುವಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಿದೆ. ಸಾಲು ಸಾಲು ಸರ್ಕಾರಿ ರಜೆಗಳು ಹಾಗೂ ಕೊನೇ ದಿನಾಂಕದ ಬಗ್ಗೆ ಮಾಹಿತಿ ಕೊರತೆಯಿಂದ ಹಲವು ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ.

    ನೋಂದಾಯಿತ ಕಾರ್ವಿುಕರ ಮಕ್ಕಳು ಸರ್ಕಾರ ನೀಡುವ ಉಚಿತ ಲ್ಯಾಪ್​ಟಾಪ್ ಪಡೆಯಲು ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವೆಂದು ಕೆಲವು ದಿನಗಳ ಹಿಂದೆ ಕಾರ್ವಿುಕ ಇಲಾಖೆಯ ಪ್ರಕಟಣೆ ತಿಳಿಸಿತ್ತು. ಆದರೆ, ಈ ನಡುವೆ ಸಾಕಷ್ಟು ಸರ್ಕಾರಿ ರಜೆಗಳು, ಹಬ್ಬ ಹರಿದಿನಗಳು ಎದುರಾಗಿದ್ದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವುದು ಸಾಧ್ಯವಾಗಿಲ್ಲ. ಅ. 30 ಮತ್ತು 31 ಸರ್ಕಾರಿ ರಜೆ ಇರುವುದರಿಂದ ಗುರುವಾರ ಪಟ್ಟಣದ ಉಪ್ಪಾರಕೇರಿಯಲ್ಲಿರುವ ಕಾರ್ವಿುಕ ಇಲಾಖೆ ಕಚೇರಿಗೆ ಆಗಮಿಸಿದ್ದ ಸಾಕಷ್ಟು ವಿದ್ಯಾರ್ಥಿಗಳು ಲಗುಬಗೆಯಿಂದ ಅರ್ಜಿ ಸಲ್ಲಿಸುವ ಪ್ರಯತ್ನ ಮಾಡಿದರು.

    ಈ ಕುರಿತು ವಿದ್ಯಾರ್ಥಿಗಳ ಪಾಲಕರು ಸುದ್ದಿಗಾರ ರೊಂದಿಗೆ ಮಾತನಾಡಿ, ‘ಸಾಲುಸಾಲು ಸರ್ಕಾರಿ ರಜೆ ಬಂದಿವೆ. ಮಕ್ಕಳೊಂದಿಗೆ ಬೇರೆ ಊರಿಗೆ ಹೋಗಿ ಇದ್ದಾರೆ. ಇಂತಹ ಕಾರಣಗಳಿಗಾಗಿ ಕಾರ್ವಿುಕ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವುದು ಬಹಳಷ್ಟು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಲ್ಲ. ಪ್ರಕಟಣೆಯಂತೆ ಅ. 31 ಕೊನೆಯ ದಿನಾಂಕವಾಗಿದ್ದರೂ ಕೊನೆಯ ಎರಡು ದಿನ ಸರ್ಕಾರಿ ರಜೆ ಇರುವುದರಿಂದ ಸಮಸ್ಯೆಯಾಗಿದೆ. ನಾವು ಹೇಗೋ ವಿಷಯ ತಿಳಿದು ಇಂದೇ ಬಂದಿದ್ದೇವೆ. ಆದರೆ, ಹೆಚ್ಚಿನವರಿಗೆ ಮಾಹಿತಿಯಿಲ್ಲ ಕಾರ್ವಿುಕ ಕುಟುಂಬಗಳ ವಿದ್ಯಾರ್ಥಿಗಳ ಹಿತಕ್ಕಾಗಿ ಅರ್ಜಿ ಸಲ್ಲಿಕೆಗೆ ಕನಿಷ್ಠ ಇನ್ನೊಂದು ವಾರ ಅವಕಾಶ ಮಾಡಿಕೊಡಬೇಕು’ ಎಂದು ವಿನಂತಿಸಿದ್ದಾರೆ.

    ಕಾರ್ವಿುಕ ಕುಟುಂಬಕ್ಕೆ ಸೇರಿದ 9ರಿಂದ 12ನೇ ತರಗತಿವರೆಗಿನ ಸ್ಕಾಲರ್​ಶಿಪ್​ಗೆ ವಿದ್ಯಾರ್ಥಿಗಳ ಹೆಸರು, ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ನಮಗೆ ಆದೇಶವಿತ್ತು. ಅದರಂತೆ ಮಾಡಿದ್ದೇವೆ. ಕೊನೆಯ ದಿನಾಂಕದ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವ ಬಗ್ಗೆ ಪಾಲಕರು ತಿಳಿಸಿದ್ದಾರೆ. ಅದರ ಅರಿವಿದೆ. ಇನ್ನೂ ಒಂದು ವಾರ ಹೆಚ್ಚಿನ ಅವಕಾಶ ನೀಡಲು ಮೇಲಧಿಕಾರಿಗಳಿಗೆ ಕೋರಿದ್ದೇವೆ. ಇಲಾಖೆ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತೇವೆ.

    | ನವೀನಕುಮಾರ, ಕಾರ್ವಿುಕ ನಿರೀಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts