More

    ಕುಮಟಾದಲ್ಲಿ ರೈಲು ಹತ್ತಿಳಿಯಲು ಪ್ರಯಾಣಿಕರ ಪರದಾಟ

    ಕುಮಟಾ : ಇಲ್ಲಿನ ಕೊಂಕಣ ರೈಲು ನಿಲ್ದಾಣದ ಎರಡನೇ ಪ್ಲಾಟ್​ಫಾಮ್ರ್ ಸೂಕ್ತ ರೀತಿಯಲ್ಲಿ ನಿರ್ವಣಗೊಂಡಿಲ್ಲ. ಹೀಗಾಗಿ, ಇಲ್ಲಿ ಪ್ರಯಾಣಿಕರು ರೈಲುಗಳನ್ನು ಹತ್ತಿಳಿಯಲು ಹಾಗೂ ಲಗೇಜ್ ಸಾಗಿಸಲು ಪರದಾಡುವಂತಾಗಿದೆ.

    ಕುಮಟಾ ನಿಲ್ದಾಣದಲ್ಲಿ ದಿನಕ್ಕೆ 25ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ನಿಲ್ದಾಣದಲ್ಲಿ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ರೈಲು ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ನಿಜವಾದ ಸಮಸ್ಯೆಯ ಅನಾವರಣವಾಗುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ರೈಲು ಆಗಮಿಸುವ ಕೆಲವೇ ನಿಮಿಷಗಳ ಮೊದಲು ಪ್ರಯಾಣಿಕರಿಗೆ ಪ್ಲಾಟ್​ಫಾಮ್ರ್ 2ಕ್ಕೆ ಹೋಗುವಂತೆ ಸೂಚಿಸಲಾಗುತ್ತದೆ. ಲಗೇಜ್​ಗಳೊಂದಿಗೆ ಹಳಿಗಳ ಮೇಲಿನ ಸೇತುವೆ ಮೇಲಿಂದ ದಾಟಿ ರೈಲು ಹತ್ತುವ ಜಾಗ ತಲುಪುವ ಹೊತ್ತಿಗೆ ಕನಿಷ್ಠ 10-15 ನಿಮಿಷ ಬೇಕಾಗುತ್ತದೆ.

    ಕುಮಟಾದಲ್ಲಿ ಪ್ಲಾಟ್​ಫಾಮ್ರ್ 2 ಅನ್ನು ಸಮರ್ಪಕವಾಗಿ ನಿರ್ಮಾಣ ಮಾಡಿಲ್ಲ. ಈ ಪ್ಲಾಟ್​ಫಾಮ್ರ್ ಎತ್ತರ ಕಡಿಮೆ ಇದೆ. ಹೀಗಾಗಿ, ರೈಲಿನೊಳಗೆ ಪ್ರವೇಶಿಸಲು ಹೆಚ್ಚು ಎತ್ತರ ಏರಬೇಕಾಗುತ್ತದೆ. ಅಂಗವಿಕಲರು, ವೃದ್ಧರು, ಕಾಯಿಲೆ ಪೀಡಿತರಿದ್ದರೆ ರೈಲು ಹತ್ತುವುದು ಅಥವಾ ಇಳಿಯುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಕಷ್ಟವಿದೆ. ಕೆಲವೊಮ್ಮೆ ಅಪಾಯಕಾರಿಯೂ ಆಗಿರುತ್ತದೆ. ಮಳೆಗಾಲದಲ್ಲಿ ಹಾಗೂ ರಾತ್ರಿ ವೇಳೆ ತೀರಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ದೂರುತ್ತಾರೆ.

    ಸರಿಯಾಗಿ ಎತ್ತರಿಸಿದ ಪ್ಲಾಟ್​ಫಾಮ್ರ್ ನಿರ್ವಣವಾಗುವವರೆಗೂ ಸಮಸ್ಯೆ ಇರಲಿದೆ ಎಂದು ಸ್ವತಃ ರೈಲು ನಿಲ್ದಾಣದ ಸಿಬ್ಬಂದಿ ಒಪ್ಪಿಕೊಳ್ಳುತ್ತಾರೆ. ‘ಕುಮಟಾ ರೈಲು ನಿಲ್ದಾಣದ ಪ್ಲಾಟ್​ಫಾಮ್ರ್ 2ರ ಅಭಿವೃದ್ಧಿ ಆಗಲೇಬೇಕು. ಈ ಬಗ್ಗೆ ನಿಗಮದ ಗಮನಕ್ಕೆ ತಂದು ಸೂಕ್ತ ಮಂಜೂರಾತಿಗೆ ಶೀಘ್ರವೇ ಕಾರ್ಯಪ್ರವೃತ್ತನಾಗುತ್ತೇನೆ’ ಎನ್ನುತ್ತಾರೆ ಕೊಂಕಣ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ರಾಜೀವ ಗಾಂವಕರ ಹಿರೇಗುತ್ತಿ.

    ಕುಮಟಾ ನಿಲ್ದಾಣದಲ್ಲಿ ಪ್ಲಾಟ್​ಫಾರಂ 2ರಲ್ಲಿ ಹತ್ತಿಳಿಯುವ ಪ್ರಯಾಸದ ಅನುಭವ ಹಲವು ಬಾರಿ ಆಗಿದೆ. ನಿಲ್ದಾಣದ ಅಧಿಕಾರಿಗಳಿಗೂ ಈ ವಿಷಯ ಗೊತ್ತಿದೆ. ಚಿಕ್ಕ ಚಿಕ್ಕ ನಿಲ್ದಾಣಗಳಲ್ಲೂ ಸರಿಯಾದ ಪ್ಲಾಟ್​ಫಾಮ್ರ್ ಇರುವಾಗ ಪ್ರತಿನಿತ್ಯ ಐನೂರಕ್ಕೂ ಹೆಚ್ಚು ಪ್ರಯಾಣಿಕರು ಓಡಾಡುವ ಕುಮಟಾದಲ್ಲಿ ಯಾಕಿಲ್ಲ. | ಗಣಪತಿ ನಾಯ್ಕ ಹಿರಿಯ ನಾಗರಿಕ ಕುಮಟಾ

    ಕುಮಟಾ ಎರಡನೇ ಪ್ಲಾಟ್ ಫಾಮ್ರ್ ನಲ್ಲಿ ಎಷ್ಟು ರೈಲುಗಳು ನಿಲ್ಲುತ್ತವೆ. ಫ್ಲಾಟ್ ಫಾಮ್ರ್ ಎತ್ತರಿಸುವುದರಿಂದ ಎಷ್ಟು ಜನರಿಗೆ ಅನುಕೂಲವಾಗುತ್ತದೆ ಎಂಬುದರ ಅಂಕಿ-ಸಂಖ್ಯೆಯನ್ನು ವಾರದಲ್ಲಿ ತರಿಸಿ ಪರಿಶೀಲಿಸಿ ಪ್ರಸ್ತಾವನೆ ಸಿದ್ಧಪಡಿಸಲಾಗುವುದು. | ಬಿ.ಬಿ. ನಿಕ್ಕಮ್ ಆರ್​ಆರ್​ಎಂ, ಕಾರವಾರ

    ಶಂಕರ ಶರ್ಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts