More

    ಕುಂದಗೋಳದಲ್ಲಿ ಬೃಹತ್ ಶೋಭಾಯಾತ್ರೆ

    ಕುಂದಗೋಳ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ವಣಕ್ಕೆ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ ಬುಧವಾರ ಶೋಭಾಯಾತ್ರೆ ನಡೆಯಿತು. ಗಾಳಿ ಮಾರಮ್ಮ ದೇವಸ್ಥಾನದಿಂದ ಶ್ರೀರಾಮಚಂದ್ರನ ಭಾವಚಿತ್ರ ಹಾಗೂ ರಾಮ, ಲಕ್ಷ್ಮಣ, ಸೀತಾ ಮಾತೆ, ಹಾಗೂ ಹನುಮಂತನ ವೇಷಧಾರಿಗಳು ಗಮನ ಸೆಳೆದರು.

    ಶೋಭಾಯಾತ್ರೆಯು ಬಸ್ ನಿಲ್ದಾಣ, ಕಾಳಿದಾಸ ನಗರ, ಶಿವಾಜಿನಗರ ಕಿಲ್ಲೆ, ಮಾರುಕಟ್ಟೆ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮಾರೋಪಗೊಂಡಿತು. ಹಿರೇಮಠದ ನೇತೃತ್ವವನ್ನು ಶ್ರೀಶಿತಿಕಂಠೇಶ್ವರ ಸ್ವಾಮೀಜಿ, ಕಲ್ಯಾಣಪುರ ಬಸವಣ್ಣಜ್ಜನವರು ವಹಿಸಿಕೊಂಡಿದ್ದರು.

    ವಿಶ್ವ ಹಿಂದು ಪರಿಷತ್​ನ ಉತ್ತರ ಪ್ರಾಂತ ಪ್ರಮುಖ ಮಹಾಬಲೇಶ ಹೆಗಡೆ ಮಾತನಾಡಿ, ಹಲವಾರು ವರ್ಷಗಳ ದೀರ್ಘ ಹೋರಾಟದ ನಂತರ ರಾಮ ಜನ್ಮಭೂಮಿಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ವಣಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದೇವೆ ಎಂದರು.

    ಕಾರ್ಯಕ್ರಮ ನೇತೃತ್ವ ವಹಿಸಿದ್ದ ಕಲ್ಯಾಣಪುರದ ಬಸವಣ್ಣಜ್ಜನವರು ಮಾತನಾಡಿ, ನಮ್ಮ ಪವಿತ್ರ ಭೂಮಿಯಲ್ಲಿ ಮಂದಿರ, ಮಠ-ಮಾನ್ಯಗಳಿಗೆ ಪವಿತ್ರ ಸ್ಥಾನಮಾನ ನೀಡಲಾಗಿದೆ. ದೇವರ ನಂಬಿಕೆ ಮೇಲೆ ಜನರು ಬದುಕುತ್ತಿದ್ದಾರೆ ಇಂತಹ ಪುಣ್ಯ ಭೂಮಿಯಲ್ಲಿ ಜನಿಸಿರುವ ನಾವೇ ಶ್ರೇಷ್ಠರು ಎಂದರು.

    ಗುರು ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಪ.ಪಂ. ಅಧ್ಯಕ್ಷ ವಾಸು ಗಂಗಾಯಿ, ರಾಜಕುಮಾರ ಬಸವ, ಮಾಲತೇಶ ಶಾಗೋಟಿ, ರವಿಗೌಡ ಪಾಟೀಲ, ಭುವನೇಶ್ವರಿ ಕವಲಗೇರಿ, ಪ.ಪಂ. ಸದಸ್ಯರಾದ, ಶ್ಯಾಮಸುಂದರ ದೇಸಾಯಿ, ಮಂಜುನಾಥ ಹಿರೇಮಠ, ಸುನೀತಾ ಪಾಟೀಲ, ಹನುಮಂತಪ್ಪ ರಂತೂರ, ಗಣೇಶ ಕೊಕಾಟೆ, ಪ್ರವೀಣ ಬಡ್ನಿ, ನೀಲಮ್ಮ ಕುಂದಗೋಳ, ಬಸಮ್ಮ ವಡಕಣ್ಣವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts