More

    ಕಿರಾಣಾ ಅಂಗಡಿಗೆ ಅಧಿಕಾರಿಗಳ ದಾಳಿ

    ಕಲಬುರಗಿ: ಜಿಲ್ಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದು, ಇದನ್ನೇ ದುರುಪಯೋಗ ಪಡಿಸಿಕೊಂಡು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದ ಕಿರಾಣಾ ಅಂಗಡಿಗಳ ಮೇಲೆ ಬುಧವಾರ ದಾಳಿ ನಡೆಸಿದ ಅಧಿಕಾರಿಗಳ ತಂಡ ಆರು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿ 18500 ರೂ. ದಂಡ ವಿಧಿಸಿದೆ.
    ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರ ನೇತೃತ್ವದ ತಂಡ ಜಿಲ್ಲೆಯಲ್ಲಿ ಒಟ್ಟು ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದು ಮಾರಾಟ ಮಾಡಿರುವುದು, ಪ್ಯಾಕಿಂಗ್ನಲ್ಲಿ ಸಮಸ್ಯೆ ಹೀಗೆ ಎಲ್ಲವನ್ನೂ ಗುರುತಿಸಿ ಖಡಕ್ ಸೂಚನೆ ನೀಡಿದೆ. ಜತೆಗೆ 6 ಪ್ರಕರಣ ದಾಖಲಿಸಿ, 18500 ರೂ. ದಂಡ ವಸೂಲಿ ಮಾಡಲಾಗಿದೆ.
    ಜಿಲ್ಲೆಯ ಅಫಜಲಪುರ, ಆಳಂದ, ಚಿತ್ತಾಪುರ ತಾಲೂಕುಗಳಲ್ಲೂ ದಾಳಿ ನಡೆದಿದೆ. ತೊಗರಿಬೇಳೆ, ಅಕ್ಕಿ, ಗೋದಿ, ಎಣ್ಣೆ ಸೇರಿ ವಿವಿಧ ಅಗತ್ಯ ವಸ್ತುಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ವಿಶೇಷವಾಗಿ ಇಂತಹ ಪ್ರಕರಣಗಳು ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ಬೆಳಕಿಗೆ ಬಂದಿದೆ.
    ಈ ತರಹದ ದಾಳಿ ಇನ್ನೂ ಮುಂದುವರಿಯಲಿದ್ದು, ಇಲಾಖೆ ಅಧಿಕಾರಿಗಳು ಅಂಗಡಿಗೆ ಹೋಗಿ ಸಾಮಾನು ಖರೀದಿಸಿ ಬಿಲ್ ಪಡೆಯುತ್ತಾರೆ. ಇದನ್ನು ಪರಿಶೀಲಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದು ಕಂಡುಬಂದರೆ ಮಾಹಿತಿ ನೀಡುತ್ತಾರೆ. ತಕ್ಷಣ ತಂಡ ದಾಳಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರ ತಿಳಿಸಿದರು.
    ದೀಪಕ ಸುಖೆ, ರಫೀಕ್, ಆಹಾರ ಇಲಾಖೆ, ತೂಕ ಮತ್ತು ಅಳತೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts