More

    ಕಿಮ್ಸ್​ಗೆ ಡಯಾಲಿಸಿಸ್ ಯಂತ್ರ ಕೊಡುಗೆ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಡವರ ಆಸ್ಪತ್ರೆಯಾಗಿರುವ ಇಲ್ಲಿಯ ಕಿಮ್ಸ್​ಗೆ ಸ್ಥಳೀಯ ಲಯನ್ಸ್ ಕ್ಲಬ್ ಮತ್ತು ಭಾರತೀಯ ಜೀವ ವಿಮಾ (ಎಲ್​ಐಸಿ) ನಿಗಮದ ಧಾರವಾಡ ವಿಭಾಗದ ವತಿಯಿಂದ 2 ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ಮಂಗಳವಾರ ನೀಡಲಾಯಿತು.

    ಕಿಮ್್ಸ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಏರ್ಪಾಟಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್​ಐಸಿ ಹಿರಿಯ ವಿಭಾಗೀಯ ಮಹಾಪ್ರಬಂಧಕ ಎಂ. ಮನೋಹರನ್, ಕರೊನಾ ಸಂದರ್ಭದಲ್ಲಿ ಕಿಮ್ಸ ವೈದ್ಯರು ಅತ್ಯಂತ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಕರೊನಾ ಪೀಡಿತರು ಸೇರಿದಂತೆ ಡಯಾಲಿಸಿಸ್ ಅಗತ್ಯವಿರುವ ಬಡ ರೋಗಿಗಳಿಗೆ ಅನುಕೂಲವಾಗಲಿ ಎಂದು 2 ಯಂತ್ರಗಳನ್ನು ಕೊಡಮಾಡಲಾಗುತ್ತಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕಿಮ್ಸ್​ನ ಕಾರ್ಯವೈಖರಿಯನ್ನು ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಕೂಡ ಶ್ಲಾಘಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

    ಲಯನ್ಸ್ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚಿನಾಡ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಿಮ್್ಸ ಮೂತ್ರಪಿಂಡ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ವೆಂಕಟೇಶ ಮೊಗೇರ, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ರಾಜಶೇಖರ ದ್ಯಾಬೇರಿ, ಡಾ. ಎಸ್.ವೈ. ಮುಲ್ಕಿಪಾಟೀಲ, ಹಿರಿಯ ಎಲ್​ಐಸಿ ಅಭಿವೃದ್ಧಿ ಅಧಿಕಾರಿ ಗೋವಿಂದ ಜೋಶಿ, ಇತರರು ಇದ್ದರು. ಡಾ. ಕೃಷ್ಣಪ್ರಸಾದ ನಿರ್ವಹಿಸಿದರು. ಲ. ಮೆಣಸಿನಕಾಯಿ ವಂದಿಸಿದರು.

    ಕರೊನಾ ಪರಿಣಾಮ ಬೀರುತ್ತದೆ

    ಶೇ.10ರಿಂದ 15ರಷ್ಟು ಕೋವಿಡ್ ಸೋಂಕಿತರು ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗುವ ಸಂದರ್ಭವಿರುತ್ತದೆ. ಮೂತ್ರಪಿಂಡ ಸಮಸ್ಯೆ ಇರುವ ಕೋವಿಡ್ ಪೀಡಿತ ರೋಗಿಗಳು ಸುತ್ತಮುತ್ತಲ ಜಿಲ್ಲೆಯಿಂದಲೂ ಕಿಮ್ಸ್​ಗೆ ಬರುತ್ತಾರೆ. ಇಲ್ಲಿ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. 100ಕ್ಕೂ ಹೆಚ್ಚು ರೋಗಿಗಳು ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಂದ ತೆರಳಿದ್ದಾರೆ ಎಂದು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದುವರೆಗೆ 137 ಕೋವಿಡ್ ರೋಗಿಗಳಿಗೆ 400 ಬಾರಿ ಡಯಾಲಿಸಿಸ್ ಮಾಡಿದ್ದು, ಇದೊಂದು ದಾಖಲೆಯಾಗಿದೆ. ರಾಜ್ಯ ಸರ್ಕಾರದಿಂದ 45, ಕೇಂದ್ರದಿಂದ 35 ವೆಂಟಿಲೇಟರ್ ಒದಗಿಸಲಾಗಿದೆ. 12 ಡಯಾಲಿಸಿಸ್ ಯಂತ್ರಗಳು ಇದ್ದು ಯಾವುದೇ ಉಪಕರಣಗಳ ಕೊರತೆ ಇಲ್ಲ ಎಂದು ಹೇಳಿದರು. ಮೂತ್ರಪಿಂಡ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ವೆಂಕಟೇಶ ಮೊಗೇರ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts