More

    ಕಿಮ್ಮನೆ ಹೇಳಿಕೆಯಿಂದ ಸಹಕಾರಿ ವಲಯಕ್ಕೆ ಧಕ್ಕೆ

    ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನಲ್ಲಿ ರೈತರಿಗೆ ಡಿಸಿಸಿ ಬ್ಯಾಂಕ್​ನಿಂದ ಹೊಸ ಸಾಲ ನೀಡಿಲ್ಲ ಎಂಬ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಹೇಳಿಕೆಗಳಿಂದ ಸಹಕಾರಿ ವಲಯಕ್ಕೆ ಧಕ್ಕೆ ಉಂಟಾಗಿದ್ದು, ಆರೋಪಗಳಿಗೆ ಸಾಕ್ಷ್ಯ ಒದಗಿಸಬೇಕು ಎಂದು ಶಿಮುಲ್ ಮಾಜಿ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ಆಗ್ರಹಪಡಿಸಿದರು.

    ಡಿಸಿಸಿ ಬ್ಯಾಂಕ್ ಹಾಗೂ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವ ಪರಿಣಾಮ ರೈತರಲ್ಲಿ ಗೊಂದಲ ಸೃಷ್ಟಿಯಾಗಿ ಬ್ಯಾಂಕ್​ನ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಶಿವಮೊಗ್ಗ ತಾಲೂಕಿನ ವಿವಿಧ ಸಹಕಾರಿ ಸಂಘಗಳ 25ಕ್ಕೂ ಹೆಚ್ಚು ಸದಸ್ಯರು ಸಭೆ ನಡೆಸಿ ಕಿಮ್ಮನೆ ರತ್ನಾಕರ್ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ. ಈಗ ಅನಿವಾರ್ಯವಾಗಿ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ.

    ಡಿಸಿಸಿ ಬ್ಯಾಂಕ್​ನ ಕೆಲ ವಿಷಯ ನ್ಯಾಯಾಲಯದಲ್ಲಿದೆ. ಅಲ್ಲಿಯೇ ತೀರ್ವನವಾಗಲಿ. ಅದನ್ನು ಬಿಟ್ಟು ತೀರ್ಥಹಳ್ಳಿಯ ಇಬ್ಬರು ಮುಖಂಡರು ಡಿಸಿಸಿ ಬ್ಯಾಂಕ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಬೇಡ. ಅವರ ಹೇಳಿಕೆಯಿಂದ ಬ್ಯಾಂಕ್​ನ ಗ್ರಾಹಕರು ಠೇವಣಿ ಹಿಂಪಡೆಯುತ್ತಿದ್ದಾರೆ. ಕರೊನಾ ಸಂದರ್ಭದಲ್ಲೂ ಆರ್ಥಿಕವಾಗಿ ಸದೃಢವಾಗಿರುವ ಬ್ಯಾಂಕ್​ಗೆ ಇದರಿಂದ ಹಾನಿ ಉಂಟಾಗುತ್ತಿದೆ ಎಂದು ಹೇಳಿದರು.

    ಹಿರಿಯ ಸಹಕಾರಿಗಳಾದ ಟಿ.ಜಿ.ಮಣಿಯಪ್ಪ, ಎಚ್.ಡಿ.ಶಿವಣ್ಣ, ಕುಮಾರ ಗೌಡ ಸೇರಿ ಶಿವಮೊಗ್ಗ ತಾಲೂಕಿನ 10ಕ್ಕೂ ಹೆಚ್ಚು ಸಹಕಾರಿ ಸಂಘಗಳ ಅಧ್ಯಕ್ಷರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts