More

    ಕಿತ್ತೂರು ರಾಣಿ ಚನ್ನಮ್ಮಳ ಹೋರಾಟ ಮಹಿಳೆಯರಿಗೆ ಮಾದರಿ

    ಅಥಣಿ ಗ್ರಾಮೀಣ, ಬೆಳಗಾವಿ: ವೀರ ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದ ಇತಿಹಾಸ ತಿಳಿಸಲು ಚನ್ನಮ್ಮ ವಿಜಯೋತ್ಸವ ಆಚರಿಸಿ ಐತಿಹಾಸಿಕ ಘಟನಾವಳಿಗಳನ್ನು ಪ್ರಚುರ ಪಡಿಸಲಾಗುವುದು ಎಂದು ವಿಜಯಪುರದ ಶಂಕರಾನಂದ ಸ್ವಾಮೀಜಿ ಹೇಳಿದರು.

    ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ರಾಣಿ ಚನ್ನಮ್ಮ ಫೌಂಡೇಷನ್ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಡಿದ ಭಾರತದ ಸಾಮ್ರಾಜ್ಞೆಯರ ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹೆಸರು ವಾಸಿಯಾಗಿದ್ದಾರೆ. ತನ್ನಲ್ಲಿ ವೀರತನ, ಧೈರ್ಯ ಹಾಗೂ ಹೋರಾಟದ ಬದುಕನ್ನು ಮೈಗೂಡಿಸಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ರಾಜ್ಯಭಾರ ನಡೆಸಿದ ಕೆಚ್ಚೆದೆಯ ಮಹಿಳೆ ಕಿತ್ತೂರು ಚನ್ನಮ್ಮ ಎಂದು ಬಣ್ಣಿಸಿದರು.

    ಮುಖಂಡ ಶಿವಾನಂದ ಗುಡ್ಡಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚನ್ನಮ್ಮನ ಬದುಕು ಮತ್ತು ಸಾಧನೆ ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದೆ. ಕಿತ್ತೂರಿನ ಸ್ವಾಭಿಮಾನದ ಪ್ರತೀಕವಾಗಿ ಚನ್ನಮ್ಮ ಕಾಣುತ್ತಾಳೆ ಎಂದರು. ರಮೇಶ ಮಡಿವಾಳ, ಮುರುಗೆಪ್ಪ ಹೊನವಾಡ, ಬಾಬುಗೌಡ ಪಾಟೀಲ, ಅರುಣ ಹೊನವಾಡ, ಸಿದ್ರಾಮೇಶ ತಾಂವಶಿ, ಸಚಿನ್ ಶೇಗುಣಸಿ, ರವಿ ಹೊನವಾಡ, ಮಲ್ಲಿಕಾರ್ಜುನ ಹಿರೇಮಠ, ಮಹಾಂತೇಶ ಕಲಮಡಿ, ಸಂಗಮೇಶ ತಾಂವಶಿ, ಶಿವಾನಂದ ಪರಮನವರ, ಸಾಗರ ಸಾತಣ್ಣವರ, ಬಸವರಾಜ ಖೋತ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts