More

    ಕಿಟ್ ಪಡೆಯಲು ಕಾರ್ವಿುಕರ ನೂಕುನುಗ್ಗಲು

    ಹಿರೇಕೆರೂರ: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದ ಸರ್ವಜ್ಞ ಕಲಾಭವನದಲ್ಲಿ ಕಾರ್ವಿುಕ ಇಲಾಖೆಯಿಂದ ವಿತರಿಸಲಾಗುತ್ತಿರುವ ದಿನಸಿ ಕಿಟ್ ಪಡೆಯಲು ಬುಧವಾರ ಕಾರ್ವಿುಕರು ಏಕಾಏಕಿ ಮುಗಿಬಿದ್ದಿದ್ದರಿಂದ ಕೆಲಕಾಲ ನೂಕು ನೂಗ್ಗಲು ಉಂಟಾಯಿತು.

    ಕಳೆದ ಸೋಮವಾರದಿಂದ ಕಿಟ್ ವಿತರಣೆ ಆರಂಭಿಸಲಾಗಿತ್ತಾದರೂ, ಅವು ಖಾಲಿಯಾಗಿದ್ದರಿಂದ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಮಂಗಳವಾರ ಲಾರಿ ಮೂಲಕ ತಾಲೂಕಿಗೆ ದಿನಸಿ ಕಿಟ್​ಗಳು ಬಂದಿರುವುದನ್ನು ತಿಳಿದ ಕಾರ್ವಿುಕರು ಬುಧವಾರ ಬೆಳಗ್ಗೆ 5 ಗಂಟೆಯಿಂದಲೇ ಕಲಾಭವನದ ಎದುರು ಸರದಿಯಲ್ಲಿ ನಿಲ್ಲತೊಡಗಿದರು. ಕೆಲವರು ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೇ ನಿಂತಿದ್ದರು. ಇದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ವಣವಾಯಿತು. ನಂತರ ಸರದಿ ವಿಷಯವಾಗಿ ಗಲಾಟೆ, ಮಾತಿನ ಚಕಮಕಿ ಆರಂಭಗೊಂಡವು. ಇದರಿಂದ ತಬ್ಬಿಬ್ಬಾದ ತಾಲೂಕು ಆಡಳಿತ ಪೊಲೀಸ್ ಬಂದೋಬಸ್ತ್ ಮಧ್ಯೆ 1 ಸಾವಿರ ದಿನಸಿ ಕಿಟ್​ಗಳನ್ನು ವಿತರಿಸಿದರು.

    ಗುರುವಾರ ಮಧ್ಯಾಹ್ನ 1 ಗಂಟೆಯವರೆಗೆ 4 ಸಾವಿರ ದಿನಸಿ ಕಿಟ್ ವಿತರಿಸಲಾಗುವುದು. ಕಾರ್ವಿುಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts