More

    ಕಿಗ್ಗಾ ದೇವಾಲಯಕ್ಕೆ ಚೆಲುವರಾಯಸ್ವಾಮಿ ಭೇಟಿ

    ಶೃಂಗೇರಿ: ಕೃಷಿ ಸಚಿವ ಚೆಲುವರಾಯಸ್ವಾಮಿ ಶನಿವಾರ ಕಿಗ್ಗಾದ ಮಳೆ ದೇವರು ಖ್ಯಾತಿಯ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸರ್ಕಾರದ ಪರವಾಗಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. 20ಕ್ಕೂ ಹೆಚ್ಚು ಋತ್ವಿಜರಿಂದ ಪರ್ಜನ್ಯ ಜಪ ಶತರುದ್ರಾಭಿಷೇಕ ಹಾಗೂ ಶತರುದ್ರಜಪ ನೆರವೇರಿತು.

    ಶಾರದಾಪೀಠಕ್ಕೆ ಭೇಟಿ ನೀಡಿ ಶ್ರೀ ಶಾರದಾಂಬೆ, ತೋರಣಗಣಪತಿಯ ದರ್ಶನ ಪಡೆದರು. ಗುರುನಿವಾಸದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನಲ್ಲಿ 4 ದಶಕಗಳಿಂದ ಅಡಕೆಗೆ ಹಳದಿ ಎಲೆರೋಗ ಕಾಡುತ್ತಿದ್ದು ಕೃಷಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಕುರಿತು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ರೋಗ ನಿಯಂತ್ರಣಕ್ಕೆ ವಿಜ್ಞಾನಿಗಳ ನೇಮಕಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಇದಕ್ಕೆ ಹಣಕಾಸಿನ ಸಮಸ್ಯೆ ಸರ್ಕಾರಕ್ಕೆ ಇಲ್ಲ ಎಂದರು.
    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ಇದೆ ಎಂದು ಹೇಳುತ್ತಾರೆ. ಇದ್ದರೆ ಅದನ್ನು ಏಕೆ ಇಟ್ಟುಕೊಂಡಿದ್ದಾರೆ ಎಂಬುದು ಅವರಿಗೆ ಬಿಟ್ಟ ವಿಷಯ. ಅವರನ್ನು ಹತ್ತಾರು ವರ್ಷಗಳಿಂದ ನೋಡಿದ್ದೇನೆ. ಎಲ್ಲರಿಗೂ ಬೆದರಿಸಿ ಹುಷಾರ್ ಎಂದು ಕೂಗುವುದು ಅವರ ಸಹಜ ಸ್ವಭಾವ. ಅದು ನಮಗೆ ಹೊಸದೇನು ಅಲ್ಲ ಎಂದರು.
    ಸೋಮವಾರ ರಾಜ್ಯಪಾಲರ ಭಾಷಣ ಇದೆ. ಆಗ ಅವರು ಪೆನ್‌ಡ್ರೈವ್ ಕುರಿತು ಹೇಳಬಹುದು. ಬಜೆಟ್ ಮಂಡನೆ ಆಗಿದ್ದು ಆ ಭಾಷಣದಲ್ಲಿ ಹೇಳಬಹುದಿತ್ತು. ಇಲ್ಲವಾದರೆ ಪ್ರತ್ಯೇಕವಾಗಿ ಕೂಡಾ ಕುಮಾರಸ್ವಾಮಿ ಅವರು ಹೇಳಬಹುದು. ಅದು ಅವರಿಗೆ ಬಿಟ್ಟ ವಿಚಾರ. ದೇವೇಗೌಡರ ಕುಟುಂಬಕ್ಕೆ ನಾನು ಯಾವುದೇ ರೀತಿ ಕೆಟ್ಟದನ್ನೂ ಮಾತನಾಡಿಲ್ಲ. ಜನಾರ್ದನರೆಡ್ಡಿ ಅವರ 150 ಕೋಟಿ ರೂ. ಹಗರಣ ನಡೆದಾಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಅವರಿಗೆ ನಮ್ಮನ್ನು ಸಹಿಸುವ ಶಕ್ತಿ ಇಲ್ಲ. ದೇವರು ಅವರಿಗೆ ಎಲ್ಲರನ್ನೂ ಸಹಿಸುವ ಶಕ್ತಿ ನೀಡಲಿ ಎಂದರು.
    ಶಾಸಕ ಟಿ.ಡಿ.ರಾಜೇಗೌಡ, ಕಾಂಗ್ರೆಸ್ ವಕ್ತಾರ ಉಮೇಶ್ ಪೊದುವಾಳ್, ಮುಖಂಡರಾದ ನಟರಾಜ್, ವೆಂಕಟೇಶ್, ಆನಂದರಾವ್, ವಿಜಯಕುಮಾರ್, ತ್ರಿಮೂರ್ತಿ, ಲತಾ ಸುಧಾಕರ್, ರಫೀಕ್ ಅಹಮದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts