More

    ಕಿಕ್ಕೇರಿಯಲ್ಲಿ ಕುಸಿದು ಬಿದ್ದ ಮನೆ ಗೋಡೆ

    ಕಿಕ್ಕೇರಿ: ಗುರುವಾರ ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಇಲ್ಲಿನ ಬಿಎಸ್‌ಎನ್‌ಎಲ್ ಕಚೇರಿ ಹಿಂಭಾಗದ ಮನೆಯ ಗೋಡೆ ಕುಸಿದು ಬಿದ್ದಿದ್ದು, ಶೀಟ್‌ಗಳು ಹಾರಿಹೋಗಿವೆ.

    ಜೋರು ಮಳೆಗೆ ಅಮಾನಿಕೆರೆ ಕೋಡಿ ಬಿದ್ದು ಅಧಿಕವಾಗಿ ನೀರು ಹರಿಯುತ್ತಿರುವುದರಿಂದ ನದಿ ದಂಡೆಯಲ್ಲಿರುವ ಮನೆಗಳು ಶೀತಾಂಶವಾಗಿವೆ. ನೀರು ಹರಿಯುವಿಕೆಯಿಂದ ಮಣ್ಣು ಕೊರೆದು ಮನೆಯ ಗೋಡೆಗಳು ಹಾಳಾಗಿವೆ. ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ ಹಾಳಾಗಿವೆ.

    ಸ್ಥಳೀಯರಾದ ಶಿವಮ್ಮ, ಭಾಗ್ಯಮ್ಮ, ಸಾವಿತ್ರಮ್ಮ ಎಂಬುವರ ಮನೆ ಸಂಪೂರ್ಣ ಶಿಥಿಲಗೊಂಡಿದ್ದು, ಮನೆಯ ಪೂರ್ವ ದಿಕ್ಕಿನ ಗೋಡೆ ಕೋಡಿ ನೀರಿಗೆ ಕುಸಿಯುವ ಹಂತ ತಲುಪಿದೆ. ಮಲಗಲು ಜಾಗವಿಲ್ಲದೆ ಸಾವಿತ್ರಮ್ಮ ಕುಟುಂಬ ಬಸ್ ನಿಲ್ದಾಣದ ಒಂದು ಕೊಠಡಿಯಲ್ಲಿ ಆಶ್ರಯ ಪಡೆಯುವಂತಾಗಿದೆ.

    ಗ್ರಾಮದ ಹೊರವಲಯದಲ್ಲಿ ಕೆರೆಯ ಕಾಲುವೆ ನೀರು ಹರಿದು ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿತ್ತು. ಈಗಷ್ಟೆ ರಸ್ತೆಗೆ ಡಾಂಬರು ಮಾಡಲಾಗಿದ್ದು, ಮಳೆಗೆ ಎಲ್ಲವೂ ಕಿತ್ತು ಬಂದಿದೆ. ಹೊಲಗದ್ದೆಗಳಲ್ಲಿ ನೀರು ನಿಂತು ರೈತರು ಜಮೀನಿನಿಂದ ನೀರು ಹೊರಹಾಕಲಾಗದೆ ಚಡಪಡಿಸುವಂತಾಗಿದೆ.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts