More

    ಕಾಸ್ಮಸ್ ಕ್ರಿಕೆಟ್ ಕ್ಲಬ್ ಚಾಂಪಿಯನ್

    ಕಲಬುರಗಿ: ಸಂಗತ್ರಾಸವಾಡಿಯ ಖ್ವಾಜಾ ಬಂದಾನವಾಜ್ ಟರ್ಫ್​ ಮೈದಾನದಲ್ಲಿ ಗುಲ್ಬರ್ಗ ಕ್ರಿಕೆಟರ್ಸ್​ನಿಂದ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಟಿ-20 ಕ್ರಿಕೆಟ್ ಟೂರ್ನಿಗೆ ಗುರುವಾರ ತೆರೆಬಿದ್ದಿದ್ದು, ಕಾಸ್ಮಸ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಲಿಷ್ಠ ಟೀಮ್ ಕೆಬಿಎನ್ ಕ್ರಿಕೆಟ್ ಅಕಾಡೆಮಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

    ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಾಸ್ಮಸ್ ಕ್ರಿಕೆಟ್ ಕ್ಲಬ್ 20 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 143 ರನ್ಗಳಿಸಿತು. ನಂದೀಶ ಆರ್.ಎಚ್. (33 ರನ್, 33 ಬಾಲ್, 4 ಬೌಂಡರಿ), ಜಗದೀಶ ಸರಾಫ್ (25 ರನ್, 18 ಬಾಲ್, 3 ಬೌಂಡರಿ), ವಿಶ್ವನಾಥ (24 ರನ್, 23 ಬಾಲ್, 1 ಬೌಂಡರಿ, 1 ಸಿಕ್ಸ್) ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ನೆರವಾದರು. ಕೆಬಿಎನ್ ಪರ ಬೌಲಿಂಗ್ನಲ್ಲಿ ಇಬ್ರಾಹಿಂ 4 ವಿಕೆಟ್ ಪಡೆದು ಆಕ್ರಮಣಕಾರಿ ಬೌಲಿಂಗ್ ಮಾಡಿದರೆ, ಹರೀಶ್ ಜೆ.ಕೆ. (3 ವಿಕೆಟ್) ಸಾಥ್ ನೀಡಿದರು.

    144 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಕೆಬಿಎನ್ ಕ್ರಿಕೆಟ್ ಅಕಾಡೆಮಿ ಕಾಸ್ಮಸ್ ಕ್ರಿಕೆಟ್ ಕ್ಲಬ್ನ ಆಕ್ರಮಣಕಾರಿ ಬೌಲಿಂಗ್ಗೆ ತತ್ತರಗೊಂಡಿತು. 19.4 ಓವರ್ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 128 ರನ್ಗಳಿಸಿ 15 ರನ್ಗಳ ಅಂತರದಿಂದ ಸೋಲನುಭವಿಸಿ ರನ್ನರ್ ಅಪ್ ಸ್ಥಾನ ಅಲಂಕರಿಸಿತು. ಅಭಿಷೇಕ (32 ರನ್, 23 ಬಾಲ್, 3 ಬೌಂಡರಿ, 1 ಸಿಕ್ಸ್), ಹರೀಶ್ ಜೆ.ಕೆ. (29ರನ್, 30 ಬಾಲ್, 1 ಬೌಂಡರಿ, 1 ಸಿಕ್ಸ್) ಕೆಲಕಾಲ ತಂಡಕ್ಕೆ ನೆರವಾದರು. ಆದರೆ ಇನ್ನುಳಿದ ಬ್ಯಾಟ್ಸ್ಮನ್ಗಳ ಸಾಥ್ ಸಿಗದಿರುವುದರಿಂದ ಸೋಲನುಭವಿಸಬೇಕಾಯಿತು. ಕಾಸ್ಮಸ್ ಪರ ಬೌಲಿಂಗ್ನಲ್ಲಿ ಶರಣ ಪಾಟೀಲ್ 4 ಹಾಗೂ ಪ್ರಶಾಂತ ಹೊಸಮನಿ 3 ವಿಕೆಟ್ ಪಡೆದು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.

    ಶರಣ ಪಾಟೀಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕೆಬಿಎನ್ ಕ್ರಿಕೆಟ್ ಅಕಾಡೆಮಿಯ ಕಾಶೀಫ್ ಸರಣಿ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು. ಉದಯಕುಮಾರ ದಂಡೋತಿಕರ್, ವಲ್ಲಭ ಬಳವಡಗಿ ಅಂಪೈರ್ಗಳಾಗಿ ಹಾಗೂ ನಾಗೇಶ ಸುರಗಿಹಳ್ಳಿ ಸ್ಕೋರರ್ ಕಾರ್ಯ ನಿರ್ವಹಿಸಿದರು.

    ಕೆಬಿಎನ್ಗೆ ಹೊರೆಯಾದ 17 ರನ್: ಕೆಬಿಎನ್ ಕ್ರಿಕೆಟ್ ಅಕಾಡೆಮಿ ಪರ ಬೌಲರ್ಸ್ಗಳು ಭರ್ಜರಿ ಬೌಲಿಂಗ್ ಮಾಡಿ, ಕಾಸ್ಮಸ್ ತಂಡವನ್ನು ಕಡಿಮೆ ರನ್ಗಳಲ್ಲಿ ಆಲೌಟ್ ಮಾಡಿದರು. ಆದರೆ ಬೌಲಿಂಗ್ನಲ್ಲಿ ನೀಡಿದ ಇತರೆ ರನ್ಗಳು ಕೆಬಿಎನ್ ಗೆಲುವಿಗೆ ಹಿನ್ನಡೆಯಾವರು. 14 ವೈಡ್, 1 ನೋ ಬಾಲ್ ಸೇರಿ ಬರೋಬ್ಬರಿ 17 ರನ್ಗಳನ್ನು ಎದುರಾಳಿ ತಂಡಕ್ಕೆ ಕೊಡುಗೆಯಾಗಿ ನೀಡಿದರು. ಕೊನೆಗೆ ಕೆಬಿಎನ್ 15 ರನ್ಗಳ ಅಂತರದಲ್ಲಿಯೇ ಸೋಲನುಭವಿಸಿತು. ಇತರೆ ರನ್ಗಳನ್ನು ಕಂಟ್ರೋಲ್ ಮಾಡಿದ್ದರೆ ಸುಲಭವಾಗಿ ಚಾಂಪಿಯನ್ ಪಟ್ಟ ಅಲಂಕರಿಸುತ್ತಿತ್ತು. ಇನ್ನು ಕಾಸ್ಮಸ್ ಪರವೂ 12 ರನ್ಗಳು ಬಂದಿವೆ.

    ಟಾಪ್-5 ಬ್ಯಾಟ್ಸ್ಮನ್, ಬೌಲರ್ಸ್: ಬುದ್ಧ, ಬಸವ, ಅಂಬೇಡ್ಕರ್ ಟೂರ್ನಿಯಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಮಿಂಚಿದ್ದಾರೆ. ಬ್ಯಾಟಿಂಗ್ನಲ್ಲಿ ಕಾಸ್ಮಸ್ ಕ್ರಿಕೆಟ್ ಕ್ಲಬ್ ರಾಜು ಸಾವಕಾರ್ 109 ರನ್ಗಳಿಸಿ ಟಾಪ ಸ್ಕೋರರ್ ಆಗಿದ್ದಾರೆ. ಇನ್ನುಳಿದಂತೆ ಕೆಬಿಎನ್ ಕ್ರಿಕೆಟ್ ಅಕಾಡೆಮಿಯ ಕಾಶೀಫ್ (104 ರನ್), ಗುಲ್ಬರ್ಗ ಕ್ರಿಕೆಟ್ ಕ್ಲಬ್ನ ಶರಣು (88 ರನ್), ಕಾಸ್ಮಸ್ ತಂಡದ ಪ್ರದೀಪ್ ಹೊನ್ನೆ (85 ರನ್), ಗ್ಯಾಲಕ್ಸಿ ತಂಡದ ಕರಣ್ ರಾಠೋಡ್ (64 ರನ್) ನಂತರದ ಸ್ಥಾನದಲ್ಲಿದ್ದಾರೆ. ಬೌಲಿಂಗ್ನಲ್ಲಿ ಕೆಬಿಎನ್ ತಂಡದ ಇಬ್ರಾಹಿಂ 9 ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನುಳಿದಂತೆ ಕಾಸ್ಮಸ್ ಕ್ರಿಕೆಟ್ ಅಕಾಡೆಮಿ ಪ್ರಶಾಂತ ಹೊಸಮನಿ (7), ವಿಶ್ವನಾಥ (5), ಶರಣ ಪಾಟೀಲ್ (4), ಎನ್ವಿ ಜಿಮ್ಖಾನಾದ ಅಭಿಷೇಕ (4) ನಂತರದ ಸ್ಥಾನದಲ್ಲಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts