More

    ಕಾಸರಗೋಡಿನಿಂದ ಬಂದವರ ಮೇಲೆ ನಿಗಾ

    ಗುಳೇದಗುಡ್ಡ: ದುಡಿಯಲು ಬೇರೆಡೆ ವಲಸೆ ಹೋಗಿದ್ದ ಗುಳೇದಗುಡ್ಡ ಭಾಗದ ಲಾಯದಗುಂದಿ, ಕಟಗಿನಹಳ್ಳಿ, ಸಬ್ಬಲಹುಣಸಿ ನಾಗರಾಳ ಸೇರಿ ವಿವಿಧ ಹಳ್ಳಿಗಳ 20 ಜನರನ್ನು ಆಸಂಗಿ-ಕಟಗಿನಹಳ್ಳಿ ಗ್ರಾಮದ ಆಶಾದೀಪ ಸಮುದಾಯ ಕೇಂದ್ರದ ಶಾಲೆಯಲ್ಲಿ ಇರಿಸಿ, ಅವರ ಮೇಲೆ ನಿಗಾವಹಿಸಲಾಗಿದೆ.

    ಇಲ್ಲಿನ ಗ್ರಾಮಸ್ಥರು ರೋಗದ ಬಗ್ಗೆ ಕೂಲಂಕಷವಾಗಿ ಪರೀಕ್ಷಿಸಿಕೊಂಡು ಗ್ರಾಮಕ್ಕೆ ಬರಬೇಕು. ಆಗಲೇ ಗ್ರಾಮದೊಳಗೆ ನಾವು ನಿಮ್ಮನ್ನು ಸೇರಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ಆಸಂಗಿ-ಕಟಗಿನಹಳ್ಳಿ ಗ್ರಾಮದ 8, ಪಾದನಕಟ್ಟಿ ಗ್ರಾಮದ 2, ಸಬ್ಬಲಹುಣಸಿಯಲ್ಲಿ 4, ನಾಗರಾಳದಲ್ಲಿ 2, ಲಾಯದಗುಂದಿಯಲ್ಲಿ 2, ಜಾಲಿಹಾಳದ 2 ಹೀಗೆ ಸುಮಾರು 20 ಜನರನ್ನು ಬಾದಾಮಿಯಲ್ಲಿ ಹಾಗೂ ಗುಳೇದಗುಡ್ಡದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಗಿದೆ. ಬಳಿಕ ಅವರನ್ನು ಸಮೀಪದ ಕಟಗಿನಹಳ್ಳಿಯ ಆಶಾದೀಪ ಶಾಲೆಯಲ್ಲಿ ಇರಿಸಿ, ನಿಗಾವಹಿಸಲಾಗಿದೆ.

    ಆಸಂಗಿ-ಕಟಗಿನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಜಿ.ಎಂ. ಕುಲಕರ್ಣಿ ಹಾಗೂ ಪೊಲೀಸ್ ಸಿಬ್ಬಂದಿ ಇಲ್ಲಿ ಇರಿಸಿರುವ ಜನರ ಸಮಸ್ಯೆ ಆಲಿಸಿ ನಂತರ ಮಾತನಾಡಿ, ಕಾಸರಗೋಡಿನಿಂದ 20ಕ್ಕೂ ಜನರು ಬಂದಿದ್ದು, ಅವರೆಲ್ಲರ ಆರೋಗ್ಯವನ್ನು ತಪಾಸಣೆ ಮಾಡಿಸಲಾಗಿದೆ. ಅದಕ್ಕಾಗಿ ಅವರನ್ನು ಕಟಗಿನಹಳ್ಳಿ ಗ್ರಾಮದಲ್ಲಿನ ಈ ಆಶಾದೀಪ ಸಮುದಾಯ ಕೇಂದ್ರದ ಶಾಲೆಯಲ್ಲಿ ಇರಿಸಿ ಸುಮಾರು 15 ದಿನಗಳವರೆಗೆ ನಿಗಾ ವಹಿಸಲಾಗಿದೆ ಎಂದರು.

    ಜನರ ಗೋಳು
    ಇಲ್ಲಿ ನಮಗೆ ಸರಿಯಾದ ನೀರು, ಊಟ ಏನು ಸಿಗುತ್ತಿಲ್ಲ. ಕರೊನಾಗಿಂತಲೂ ಇಲ್ಲಿನ ಸಮಸ್ಯೆ ತೀವ್ರವಾಗಿದೆ. ಇಲ್ಲಿ ಸಾಕಷ್ಟು ಗಲೀಜು ಇದೆ. ಕುಡಿಯಲು ನೀರಿಲ್ಲ. ಸಾಕಷ್ಟು ಧೂಳು ಇದ್ದು ವಯಸ್ಸಾದವರು, ಮಕ್ಕಳು ಇದರಲ್ಲಿ ಹೇಗೆ ಇರಬೇಕು. ಕಾಸರಗೋಡಿನಿಂದ ಸಾಕಷ್ಟು ನೋವು ಉಂಡು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಸ್ವಲ್ಪವಾದರೂ ಮಾನವೀಯತೆಯಿಂದ ಸೌಲಭ್ಯ ನೀಡುತ್ತಿಲ್ಲ ಎಂದು ಜನರು ಗೋಳು ತೋಡಿಕೊಂಡರು.
    ಆಗ ತಹಸೀಲ್ದಾರ್ ಊಟ, ನೀರು ಸೇರಿ ಯಾವುದೇ ತೊಂದರೆಯಾಗಬಾರದೆಂದು ಅಗತ್ಯ ಸೌಲಭ್ಯ ನೀಡುತ್ತಿದ್ದೇವೆ. ಗ್ರಾಪಂ ಪಿಡಿಓ ಅವರಿಗೂ ಸಹ ಅಗತ್ಯ ಸೌಲಭ್ಯ ಒದಗಿಸಲು ಹೇಳಲಾಗಿದೆ ಎಂದು ಭರವಸೆ ನೀಡಿದರು.

    ಗ್ರಾಪಂ ಅಧ್ಯಕ್ಷ ಶರಣು ಸಜ್ಜನ, ಪ್ರಕಾಶ ಗೌಡರ, ಪಿಎಸ್‌ಐ ಡಾ.ಲಕ್ಷ್ಮೀಕಾಂತ ಬಾನಿಕೋಲ, ಕಂದಾಯ ನೀರಿಕ್ಷಕ ಎಂ.ಎಸ್.ಅಂಗಡಿ, ಪಿಡಿಒ ಪದ್ಮಾವತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts