More

    ಕಾಲೇಜಿನ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ದೊಡ್ಡದು

    ಹುಣಸೂರು: ಕಾಲೇಜಿನ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರವೂ ಬಹುಮುಖ್ಯವಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.


    ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಪಾಲಕರನ್ನು ನಾವು ವರ್ಷಕ್ಕೆ ಎರಡು ಬಾರಿ ಮಾತ್ರ ಕರೆಯುತ್ತೇವೆ. ಒಮ್ಮೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಕರೆದು ಅವರಿಂದ ಅಭಿಪ್ರಾಯ ಸಂಗ್ರಹಿಸುತ್ತೇವೆ. ಇಷ್ಟಕ್ಕೆ ನಿಮ್ಮ ಜವಾಬ್ದಾರಿ ಮುಗಿಯಿತು ಎಂದು ನೀವು ಸುಮ್ಮನಿರಬಾರದು. ಕಾಲೇಜಿನಲ್ಲಿರುವ ಲೋಪದೋಷಗಳು, ಒಳ್ಳೆಯ ವಿಚಾರಗಳು ಏನಿದ್ದರೂ ಸಂಬಂಧಪಟ್ಟ ಅಧ್ಯಾಪಕರು ಅಥವಾ ಪ್ರಾಂಶುಪಾಲರಲ್ಲಿ ತಿಳಿಸಬೇಕು. ನೇರವಾಗಿ ತಿಳಿಸಲು ಮುಜುಗರ ಎಂದಾದರೆ, ಕಂಪ್ಲೇಂಟ್ ಬಾಕ್ಸನ್ನು ಬಳಸಿಕೊಳ್ಳಿರಿ. ನಿಮ್ಮ ಹೆಸರನ್ನು ಬಹಿರಂಗಗೊಳಿಸುವುದಿಲ್ಲ. ಆದರೆ ನಿಮ್ಮಿಂದ ಸಕಾರಾತ್ಮಕ ಸ್ಪಂದನೆಯದ್ದರೆ ಮಾತ್ರ ಕಾಲೇಜಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.


    ಬಸ್ ವ್ಯವಸ್ಥೆ ಕಲ್ಪಿಸಲಾಗುವುದು: ಸಭೆಯಲ್ಲಿ ಬಹುತೇಕ ಗ್ರಾಮಾಂತರ ಭಾಗದಿಂದ ಬಂದ ಪಾಲಕರು ಸಾರಿಗೆ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಶಾಸಕ ಮಂಜುನಾಥ್, ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪಕ್ಷಾತೀತವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಕರೊನಾ ನಂತರದ ವರ್ಷಗಳಲ್ಲಿ ಬಸ್ ಸಂಚಾರ ದುಸ್ಥಿತಿ ತಲುಪಿದೆ. 2 ಸಾವಿರ ಬಸ್‌ಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದೆ. ಆದರೆ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೇನೆ ಎಂದರು.

    ಸಭೆಯಲ್ಲಿ ಸಿಡಿಸಿ ಸದಸ್ಯರಾದ ಸಿದ್ದೇಶ್, ನಾಗರಾಜು, ನಿಂಗರಾಜಪ್ಪ, ಪ್ರಾಂಶುಪಾಲ ಪುಟ್ಟಶೆಟ್ಟಿ, ಬಿ.ಎಂ.ನಾಗರಾಜು, ನಂಜುಂಡಸ್ವಾಮಿ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts