More

    ಕಾಲುವೆಗೆ ನಿರಂತರವಾಗಿ ನೀರು ಚಾಲೂ

    ಯಾದಗಿರಿ: ನಾರಾಯಣಪುರ ಜಲಾಶಯದಿಂದ ನೀರು ಹರಿಸಲು ಈ ಹಿಂದಿದ್ದ ವಾರಾಬಂದಿ ಪದ್ಧತಿ ರದ್ದುಪಡಿಸಿ, ಕಾಲುವೆಗೆ ನಿರಂತರ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

    ಶನಿವಾರ `ವಿಜಯವಾಣಿ’ಯೊಡನೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮುಗಾರು ಮಳೆ ಕೈಕೊಟ್ಟ ಪರಿಣಾಮ ನೀರಿನ ಕೊರತೆ ಎದುರಾಗಿದೆ. ಜಲಾಶಯದಿಂದ ಕಾಲುವೆಗೆ ವಾರಾಬಂದಿ ಪದ್ಧತಿ ಮೂಲಕ ನೀರು ಹರಿಸಿದರೆ, ರೈತರ ಬೆಳೆಗಳು ಒಳಗುತ್ತಿವೆ. ಅಲ್ಲದೆ, ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ಜೆಬಿಸಿ, ಎಸ್ಬಿಸಿ, ಎಂಬಿಸಿ ಮತ್ತು ಮಲ್ಲಾ ಏತನೀರಾವರಿ ಯೋಜನೆ ಕಾಲುವೆಗೆ ವಾರಾಬಂದಿ ಕೈ ಬಿಡುವಂತೆ ಮುಖ್ಯಮಂತ್ರಿಗಳ ಬಳಿ ತಾವೂ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ಸಿಂಗ್ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

    ಮನವಿಗೆ ಮುಖ್ಯಮಂತ್ರಿಗಳು ತಕ್ಷಣ ಸ್ಪಂದಿಸಿ, ಸಂಬಂಧಿಸಿದ ಅಧಿಕಾರಿ ಮತ್ತು ಸಚಿವರಿಗೆ ಸೂಚಿಸಿ ಅ.28ರಿಂದ ನ.04ರ ವರೆಗಿದ್ದ ವಾರಾಬಂದಿ ಪದ್ದತಿ ಕೈ ಬಿಡಲು ಆದೇಶ ನೀಡಿದ್ದಾರೆ. ಹೀಗಾಗಿ ಮುಂದಿನ 28 ದಿನಗಳವರೆಗೆ ಕಾಲುವೆಯಿಂದ ನಿರಂತರ ನೀರು ಹರಿಸಲಾಗುವುದು. ರೈತಾಪಿ ವರ್ಗ ಯಾವುದೇ ಕಾರಣಕ್ಕೂ ಆತಂಕ ಪಡುವಂತಿಲ್ಲ. ಅಲ್ಲದೆ, ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ರೈತರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts