More

    ಕಾಲಕಾಲಕ್ಕೆ ಹೃದಯ ತಪಾಸಣೆ ಅಗತ್ಯ

    ಸಿದ್ದಾಪುರ: ಪ್ರತಿಯೊಬ್ಬರೂ ಕಾಲ ಕಾಲಕಾಲಕ್ಕೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಖ್ಯಾತ ಹೃದಯರೋಗ ತಜ್ಞ ಡಾ. ದಿವಾಕರ ಭಟ್ಟ ಶಂಕರಗದ್ದೆ ಹೇಳಿದರು.

    ಪಟ್ಟಣದ ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯದಲ್ಲಿ ಸಿ.ಆರ್. ಹೆಗಡೆ ಕವಲಕೊಪ್ಪ ಹೃದಯ ತಪಾಸಣೆ ಕೇಂದ್ರ, ಉನ್ನತೀಕೃತ ವೈದ್ಯಕೀಯ ಪ್ರಯೋಗಾಲಯ ಹಾಗೂ ಎಕ್ಸರೆ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು. ನಮ್ಮ ದೇಶದಲ್ಲಿ 35 ರಿಂದ 50 ವರ್ಷದೊಳಗಿನವರಲ್ಲಿ ಹೆಚ್ಚು ಹೃದಯಾಘಾತವಾಗುತ್ತಿದೆ. ಇಂದಿನ ಒತ್ತಡದ ಜೀವನ ಹಾಗೂ ಸೇವಿಸುವ ಆಹಾರದಿಂದ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತಿದೆ. ಹೃದಯ ಸಂಬಂಧಿ ರೋಗ ತಡೆಗಟ್ಟುವುದು ಸಾಧ್ಯವಿದೆ. ತಂಬಾಕು ಸೇವಿಸಬಾರದು. ವ್ಯಾಯಾಮ, ಯೋಗ ನಿರಂತರವಾಗಿರಬೇಕು. ಹಿತಮಿತ ಆಹಾರ ಸೇವಿಸಬೇಕು ಎಂದರು.

    ಡಯಾಬಿಟಿಸ್, ರಕ್ತದೊತ್ತಡ ರೋಗ ಲಕ್ಷಣ ಇದ್ದವರಿಗೆ ಹಾಗೂ ಕೆಲಸದ ಒತ್ತಡ ಹೆಚ್ಚಾದರೂ ಹೃದಯ ಕಾಯಿಲೆ ಬೇಗ ಕಾಣಿಸಿಕೊಳ್ಳುತ್ತದೆ. ರೋಗಮುಕ್ತವಾಗಿರಬೇಕಾದರೆ ಕಾಲ ಕಾಲಕ್ಕೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

    ಸಿದ್ದಾಪುರದ ಶ್ರೇಯಸ್ ಆಸ್ಪತ್ರೆ ವ್ಯೆದ್ಯಾಧಿಕಾರಿ ಕೆ. ಶ್ರೀಧರ ವೈದ್ಯ ಮಾತನಾಡಿ, ಸಿದ್ದಾಪುರದಂತಹ ಹಿಂದುಳಿದ ತಾಲೂಕಿನಲ್ಲಿ ಅತ್ಯುತ್ತಮ ವ್ಯವಸ್ಥೆ ಆಗಿದೆ. ಈ ವ್ಯವಸ್ಥೆಯಿಂದ ಎಲ್ಲರಿಗೂ ಅನುಕೂಲವಾಗಲಿದೆ. ಶಿಕ್ಷಣ ಹಾಗೂ ಆರೋಗ್ಯದ ಕುರಿತು ಹೆಚ್ಚು ಆಸಕ್ತಿ ಹೊಂದಿರುವ ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.

    ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮನಗಂಡು ಆಯುರ್ವೆದ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಕೇಂದ್ರ ಆರಂಭಿಸಲಾಗಿದೆ. ತಾಲೂಕಿನ 23 ಗ್ರಾಪಂನಲ್ಲಿ ಹೃದಯ ಸಂಜೀವಿನಿ ಅಭಿಯಾನ ಆರಂಭಿಸಿ ಜನರಿಗೆ ಮಾಹಿತಿ ನೀಡಲಾಗುವುದು ಎಂದರು.

    ತಹಸೀಲ್ದಾರ್ ಮಂಜುಳಾ ಭಜಂತ್ರಿ, ಪ್ರಾಚಾರ್ಯು ಡಾ. ರೂಪಾ ಭಟ್ಟ, ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ವಿನಾಯಕರಾವ್ ಜಿ. ಹೆಗಡೆ ಹಾಗೂ ಪದಾಧಿಕಾರಿಗಳು ಇದ್ದರು. ಪ್ರೊ. ರಾಘವೇಂದ್ರ ಎಲ್., ಡಾ. ಮಧುಕೇಶ್ವರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts