More

    ಕಾರ್ವಿುಕರ ಹಣ ಸಾಲಕ್ಕೆ ವಜಾ ಮಾಡಿದರೆ ಕ್ರಮ

    ಶಿರಸಿ: ಕೋವಿಡ್- 19 ಹಿನ್ನೆಲೆಯಲ್ಲಿ ಕಾರ್ವಿುಕರ ಖಾತೆಗೆ ಹಾಕಿದ ಹಣವನ್ನು ಸಾಲಕ್ಕೆ ವಜಾ ಮಾಡಿದರೆ ಅಂತಹ ಬ್ಯಾಂಕ್ ಅಧಿಕಾರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ವಿುಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ನಗರದಲ್ಲಿ ಬೀಡುಬಿಟ್ಟ ಸರ್ಕಸ್ ಕಂಪನಿ ಕಾರ್ವಿುಕರಿಗೆ ಸೋಮವಾರ ಉಚಿತವಾಗಿ ಹಾಲು ವಿತರಿಸಿ ಅವರು ಮಾತನಾಡಿದರು.

    ಕೋವಿಡ್ 19 ಹಿನ್ನೆಲೆಯಲ್ಲಿ ಕಾರ್ವಿುಕರ ಖಾತೆಗೆ ಸರ್ಕಾರವೇ ಖುದ್ದಾಗಿ ಹಣ ಹಾಕಿದೆ. ಹಾಗಾಗಿ ಇಲಾಖೆಯಿಂದ ನೀಡಿದ ಹಣವನ್ನು ಸಾಲಕ್ಕೆ ವಜಾ ಮಾಡಲು ಯಾವುದೇ ಬ್ಯಾಂಕ್ ಮುಂದಾದರೆ ಅಂತಹ ಬ್ಯಾಂಕ್ ಪ್ರಮುಖರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಇಲಾಖೆ ಬದ್ಧವಾಗಿದೆ ಎಂದರು.

    60 ಸಾವಿರಕ್ಕಿಂತ ಹೆಚ್ಚು ಜನರಿಗೆ ಬೆಂಗಳೂರಿನಲ್ಲಿ ನಿತ್ಯ ಊಟ ನೀಡಲಾಗುತ್ತಿದೆ. ಕಟ್ಟಡ ಕಾರ್ವಿುಕರಿಗೆ ತಲಾ 2 ಸಾವಿರದಂತೆ 460 ಕೋಟಿ ರೂ. ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಅಸಂಘಟಿತ ಕಾರ್ವಿುಕರಿಗೆ ಸ್ಪಂದಿಸಲಾಗಿಲ್ಲದ ಕಾರಣ ಏ. 7ರಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಸೇರಿ ಕ್ರಮವಹಿಸಲಾಗುದು ಎಂದು ಹೇಳಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಎಂ.ಎಫ್. ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ಡಿಎಸ್ಪಿ ಜಿ.ಟಿ. ನಾಯಕ, ಪೌರಾಯುಕ್ತ ರಮೇಶ ನಾಯಕ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹಾಗೂ ಇತರರಿದ್ದರು.

    ಸಂಕಷ್ಟದ ವೇಳೆ ಸಹಕಾರ ಮುಖ್ಯ: ಮುಂಡಗೋಡ: ಕರೊನಾ ವೈರಸ್ ಲಾಕ್​ಡೌನ್ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 4000 ದಿನಸಿ ಕಿಟ್​ಗಳನ್ನು ಬಡವರಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಪಟ್ಟಣದಲ್ಲಿರುವ ಡಿ.ಎಸ್. ಮಹಾಲೆ ರೈಸ್ ಮಿಲ್​ನಲ್ಲಿ ತಾಲೂಕಿನ ಕಟ್ಟಿಗೆ ಮಿಲ್, ಗುತ್ತಿಗೆದಾರರು ಮತ್ತು ರೈಸ್ ಮಿಲ್​ನ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು. 500 ರೂ. ವೆಚ್ಚದಲ್ಲಿ ದಿನಸಿ ಸಾಮಗ್ರಿ ಪೂರೈಸಲಾಗುತ್ತದೆ. ನನ್ನ ಕಡೆಯಿಂದ 1500 ಕಿಟ್, ಅಕ್ಕಿ ಮಿಲ್ ಮಾಲೀಕರಿಂದ 500, ಕಟ್ಟಿಗೆ ಮಿಲ್ ಮಾಲೀಕರಿಂದ 600, ಗುತ್ತಿಗೆದಾರರ ಸಂಘದಿಂದ 1000, ಜಿ.ಪಂ. ಸದಸ್ಯರಾದ ರವಿಗೌಡ ಪಾಟೀಲ ಮತ್ತು ಎಲ್.ಟಿ.ಪಾಟೀಲ ಅವರಿಂದ 250 ಕಿಟ್ ಸೇರಿ 4000 ಕಿಟ್​ಗಳನ್ನು ಹಂಚಲಾಗುತ್ತದೆ. 281 ಜನರಿಗೆ ತಲಾ 1000ರೂ.ನಂತೆ ಸಹಾಯ ಧನ ನೀಡುತ್ತೇನೆ ಎಂದರು. ಈ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಸಿಪಿಐ ಶಿವಾನಂದ ಚಲವಾದಿ, ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts