More

    ಕಾರ್ವಿುಕರಿಗಾಗಿ ಆಪ್ ರಚನೆ ಅಗತ್ಯ

    ಹಾವೇರಿ: ತಂತ್ರಜ್ಞಾನ ಆಧಾರಿತ ಕೌಶಲಭರಿತ ಕಟ್ಟಡ ನಿರ್ಮಾಣ ಕಾರ್ವಿುಕರಿಗೆ ಇಂದು ಬೇಡಿಕೆಯಿದೆ. ಕಟ್ಟಡ ನಿರ್ವಿುಸುವವರು ಕಾರ್ವಿುಕರ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಕೌಶಲ ತರಬೇತಿ ಹೊಂದಿದ ಕಾರ್ವಿುಕರ ವಿವರ ಒಳಗೊಂಡ ಆಪ್ ಅಥವಾ ಸಾಫ್ಟವೇರ್​ವೊಂದನ್ನು ರಚಿಸುವ ಅಗತ್ಯವಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್ ಹೇಳಿದರು.

    ಸರ್ ಎಂ. ವಿಶ್ವೇಶ್ವರಯ್ಯ ಅವರ 150ನೇ ಜನ್ಮ ದಿನದ ಅಂಗವಾಗಿ ಜಿಲ್ಲಾ ನಿರ್ವಿುತಿ ಕೇಂದ್ರದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಇಂಜಿನಿಯರ್ ದಿನಾಚರಣೆಗೆ ಚಾಲನೆ ನೀಡಿ ನಿರ್ವಿುತಿ ಕೇಂದ್ರದ ವತಿಯಿಂದ ಕಟ್ಟಡ ಕಾರ್ವಿುಕರ ತರಬೇತಿ ಪೂರ್ಣಗೊಳಿಸಿದವರಿಗೆ ಟೂಲ್ಕಿಟ್ ವಿತರಿಸಿ ಅವರು ಮಾತನಾಡಿದರು. ಕೌಶಲ ಹೊಂದಿದ ಕಾರ್ವಿುಕರ ಸೇವೆಯನ್ನು 10ಕಿಮೀ ವ್ಯಾಪ್ತಿಯಲ್ಲಿ ಸುಲಭವಾಗಿ ಪಡೆಯಲು ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ತರಬೇತಿ ಹೊಂದಿದ ಕಟ್ಟಡ ಕಾರ್ವಿುಕರು, ಪೇಂಟರ್, ಇಲೆಕ್ಟ್ರಿಷಿಯನ್, ಪ್ಲಂಬರ್​ಗಳ ವಿವರ ಒಳಗೊಂಡ ಆಪ್ ರಚನೆ ಅಗತ್ಯವಿದೆ. ಪ್ರತಿಯೊಬ್ಬರ ಸಂಪರ್ಕ ಸಂಖ್ಯೆ, ವಿಳಾಸ ಹಾಗೂ ವೃತ್ತಿ ಪರಿಣಿತಿ ಮಾಹಿತಿ ಇದರಲ್ಲಿ ಒಳಗೊಂಡಿರಬೇಕು. ಇದರಿಂದ ಹತ್ತಿರದಲ್ಲೇ ನಿಮಗೆ ಕೆಲಸ ಸಿಗಲಿದೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಕೆಲಸದ ಬೇಡಿಕೆ ಸ್ವೀಕರಿಸಬಹುದು ಎಂದರು.

    ನರೇಗಾದಲ್ಲಿ ಗ್ರಾಮೀಣ ಭಾಗದಲ್ಲಿ ಕಟ್ಟಡ, ಕಾಂಕ್ರೀಟ್ ಕೆಲಸ ಮಾಡುವ ಕಾರ್ವಿುಕರು ಹೆಸರು ನೋಂದಾಯಿಸಿಕೊಳ್ಳಬೇಕು. ಸರಿಯಾದ ತರಬೇತಿ ಪಡೆದುಕೊಳ್ಳಬೇಕು. ಕನಿಷ್ಠ 100ದಿನ ಕೆಲಸ ಮಾಡಿದರೆ ಸರ್ಕಾರದ ವೈದ್ಯಕೀಯ, ಹಣಕಾಸಿನ ನೆರವು ದೊರೆಯಲಿದೆ. ದೇಶದಾದ್ಯಂತ ಕಟ್ಟಡ ನಿರ್ಮಾಣ ಮಾಡುವ ಸಂಸ್ಥೆಗಳು ಶೇ. 1ರಷ್ಟು ಅನುದಾನವನ್ನು ಕಟ್ಟಡ ಕಾರ್ವಿುಕರ ಕಲ್ಯಾಣಕ್ಕಾಗಿ ಪಾವತಿಸುತ್ತವೆ. ಈ ಅನುದಾನ 7 ಸಾವಿರ ಕೋಟಿ ರೂ. ಗೂ ಅಧಿಕವಾಗಿದೆ ಎಂದರು.

    ನಿರ್ವಿುತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ ಮಾತನಾಡಿ, ನಿರ್ವಿುತಿ ಕೇಂದ್ರದಿಂದ 600 ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ತರಬೇತಿ ನೀಡಲಾಗಿದೆ. ಕಾರ್ವಿುಕರಿಗೆ ಸರ್ಕಾರದಿಂದ ಸಿಗುವ ಪರಿಹಾರ ವಿತರಿಸಲಾಗಿದೆ. ಉಚಿತ ತರಬೇತಿ ಜತೆಗೆ ಗುಣಮಟ್ಟದ ಕಿಟ್​ಗಳನ್ನು ನೀಡಲಾಗುತ್ತಿದೆ ಎಂದರು.

    ಎಡಿಸಿ ಎಂ. ಯೋಗೇಶ್ವರ, ಜಿಪಂ ಸಿಇಒ ರಮೇಶ ದೇಸಾಯಿ, ಎಸಿ ಡಾ. ದಿಲೀಪ ಶಶಿ, ಬೆಳಗಾವಿ ಪ್ರೊಬೆಷನರಿ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಇತರರಿದ್ದರು. ಇದೇ ಸಂದರ್ಭದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ನಿರ್ವಿುತಿ ಕೇಂದ್ರದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts