More

    ಕಾರ್ಯಕರ್ತರ ಗೆಲುವಿಗೆ ಶ್ರಮಿಸುವುದು ನಮ್ಮ ಕರ್ತವ್ಯ

    ವಿಜಯವಾಣಿ ಸುದ್ದಿಜಾಲ ಶಿರಸಿ/ಕುಮಟಾ: ಪಂಚಾಯಿತಿ ಚುನಾವಣೆ ಮುಂಬರುವ ಎಲೆಕ್ಷನ್​ಗೆ ದಿಕ್ಸೂಚಿಯಾಗಿದ್ದು, ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಗುರುವಾರ ಶಿರಸಿಯ ಅಂಬೇಡ್ಕರ್ ಭವನ ಮತ್ತು ಕುಮಟಾ ಹೊಳೆಗದ್ದೆಯಲ್ಲಿ ಜಿಲ್ಲೆಯ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ನಾಯಕರ ಚುನಾವಣೆಗೆ ದುಡಿದ ಕಾರ್ಯಕರ್ತರು ಇಂದು ಕಣದಲ್ಲಿದ್ದಾರೆ. ಅವರ ಗೆಲುವಿಗೆ ಶ್ರಮಿಸುವುದು ನಾಯಕರಾದ ನಮ್ಮೆಲ್ಲರ ಕರ್ತವ್ಯ. ಇದನ್ನು ಎಲ್ಲರೂ ಸವಾಲಾಗಿ ಸ್ವೀಕರಿಸಿದ್ದೇವೆ. ಅಭ್ಯರ್ಥಿ ಆಯ್ಕೆಯಲ್ಲಿ ನಾಯಕರ ಹಸ್ತಕ್ಷೇಪವಲ್ಲ. ಸ್ಥಳೀಯ ಕಾರ್ಯಕರ್ತರ ಆಯ್ಕೆಯೇ ಅಂತಿಮ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಚುನಾಚಣೆ ಕಾರ್ಯಕರ್ತರ ಚುನಾವಣೆ. ಲೋಕಸಭೆ, ವಿಧಾನಸಭೆ ಚುನಾವಣೆ ನಾಯಕರ ಚುನಾವಣೆ ಯಾಗಿದೆ. ನಾಯಕರ ಚುನಾವಣೆಯಂತೆ ಕಾರ್ಯಕರ್ತರ ಚುನಾವಣೆಯನ್ನೂ ಶ್ರದ್ಧೆಯಿಂದ ಮಾಡುತ್ತಿದ್ದೇವೆ. ಉಳಿದ ರಾಜಕೀಯ ಪಕ್ಷದಲ್ಲಿ ನಾಯಕರು ಕಾರ್ಯಕರ್ತರ ಚುನಾವಣೆಗೆ ಪ್ರಚಾರ ಮಾಡುವುದಿಲ್ಲ. ಆದರೆ, ಬಿಜೆಪಿ ನಾಯಕರು ಗ್ರಾಮ ಸ್ವರಾಜ್ಯಕ್ಕಾಗಿ ತಮ್ಮನ್ನು ತಾವು ತಳಮಟ್ಟದ ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಪಕ್ಷನಿಷ್ಠೆ, ಅಭಿವೃದ್ಧಿ ಚಿಂತನೆ, ದೇಶಪ್ರೇಮ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.

    ಶಾಸಕಿ ರೂಪಾಲಿ ನಾಯ್ಕ, ಶಾಸಕ ಸುನಿಲ ನಾಯ್ಕ, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿದರು.

    ಈ ವೇಳೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಶಾಸಕರಾದ ಸುನೀಲ ಹೆಗಡೆ, ವಿ.ಎಸ್.ಪಾಟೀಲ, ವಿವೇಕಾನಂದ ವೈದ್ಯ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಸಂಘಟನಾ ಪ್ರಧಾನ ಕಾರ್ಯದರ್ಶಿ ಸಿದ್ಧರಾಜ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಸಂದೀಪ, ಪ್ರಮುಖರಾದ ಕೆ.ಜಿ.ನಾಯ್ಕ, ವಿನೋದ ಪ್ರಭು, ಪ್ರಸನ್ನ ಕೆರೇಕೈ, ಅಜಿತ ಹೆಗಡೆ, ರಾಜೇಶ ಶೆಟ್ಟಿ, ನರಸಿಂಹ ಹೆಗಡೆ, ನಾಗರಾಜ ನಾಯ್ಕ, ಗೋಪಾಲಕೃಷ್ಣ, ಗಂಗಾಧರ ಭಟ್ ಕಾರವಾರ, ಸಂತೋಷ ರೇಡ್ಕರ್ ಹಾಗೂ ಇತರರು ಇದ್ದರು.

    ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ದೇವಾಡಿಗ ಸ್ವಾಗತಿಸಿದರು. ಗೋವಿಂದ ನಾಯ್ಕ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts