More

    ಕಾರ್ಮಿಕನ ಕಟ್ಟಡ ಕೆಲಸ ಸಾಮಗ್ರಿ ಹಿಂತಿರುಗಿಸಿ; ಪುರಸಭೆ ಮುಖ್ಯಾಧಿಕಾರಿಗೆ ಮನವಿ

    ಸೊರಬ: ಪುರಸಭೆ ವಶಕ್ಕೆ ಪಡೆದಿರುವ ಕಟ್ಟಡ ಕಾರ್ಮಿಕನ ಕೆಲಸದ ಸಾಮಗ್ರಿಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್‌ ಸೆಂಟ್ರಲ್ ಯೂನಿಯನ್ ತಾಲೂಕು ಸಮಿತಿಯಿಂದ ಗುರುವಾರ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
    ತಾಲೂಕು ಅಧ್ಯಕ್ಷ ಜಿ.ಪ್ರಶಾಂತ ಮೇಸ್ತ್ರಿ ಮಾತನಾಡಿ, ಪಟ್ಟಣದ ಹಿರೇಶಕುನ ಗ್ರಾಮದ ಸ.ನಂ. 113ರಲ್ಲಿ ಆಕಾಶ್ ಎಂಬುವವರ ಕಟ್ಟಡ ಕೆಲಸವನ್ನು ಸಂಘದ ಸದಸ್ಯರಾದ ಅಂಬೇಡ್ಕರ್ ಬಡಾವಣೆಯ ನಿವಾಸಿ ಎಸ್. ರವಿ ಅವರು ಕೈಗೆತ್ತಿಕೊಂಡಿದ್ದರು. ಆದರೆ ನಿವೇಶನ ವಿಷಯಕ್ಕೆ ಸಂಬಂಧಿಸಿದಂತೆ ತಂಟೆ ತಕರಾರು ಇರುವ ಕುರಿತು ಪುರಸಭೆಯಿಂದ ನೋಟಿಸ್ ನೀಡಿದ ವೇಳೆ ರವಿ ಮೇಸ್ತ್ರಿ ಅವರು ಅಪಘಾತದಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಪುರಸಭೆಯಿಂದ ವಶಕ್ಕೆ ಪಡೆದಿರುವ ಕಟ್ಟಡ ಸಾಮಗ್ರಿಗಳನ್ನು ಹಿಂತಿರುಗಿಸಬೇಕು ಎಂದು ಮನವಿ ಮಾಡಿದರು.
    ಸಂಘಟನೆಯಿಂದ ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಒಂದು ವಾರದಲ್ಲಿ ಕಟ್ಟಡ ಸಾಮಗ್ರಿ ಹಿಂತಿರುಗಿಸುವ ಭರವಸೆ ನೀಡಲಾಗಿತ್ತು. ಆದರೆ ಮನವಿ ಸಲ್ಲಿಸಿ 6 ತಿಂಗಳಾದರೂ ಯಾವುದೇ ಸಾಮಗ್ರಿ ನೀಡಿಲ್ಲ. ಕಟ್ಟಡ ಸಾಮಗ್ರಿಗಳೇ ಕಾರ್ಮಿಕರಿಗೆ ಜೀವನಕ್ಕೆ ಆಧಾರವಾಗಿದೆ. ರವಿ ಮೇಸ್ತ್ರಿ ಅವರು ಈಗಾಗಲೇ ಅಪಘಾತದಿಂದ ಸಾಕಷ್ಟು ಅರ್ಥಿಕ ನಷ್ಟ ಅನುಭವಿಸಿದ್ದಾರೆ ಎಂದರು.
    ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಮಾತನಾಡಿ, ಇಲ್ಲಿನ ಪುರಸಭೆಗೆ ತಾವು ಮುಖ್ಯಾಧಿಕಾರಿಯಾಗಿ ಆಗಮಿಸುವ ಮೊದಲೇ ಕಟ್ಟಡ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಹಿಂದಿನ ಮುಖ್ಯಾಧಿಕಾರಿಗಳನ್ನು ವಿಚಾರಿಸಲಾಗುವುದು ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳ ಗಮನ ತಂದು ಶೀಘ್ರದಲ್ಲಿ ಕಟ್ಟಡ ಸಾಮಗ್ರಿಗಳನ್ನು ಹಿಂತಿರುಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts