More

    ಕಾರ್ಗಿಲ್ ಯುದ್ಧದ ಕರ್ನಲ್‌ಗೆ ಗೌರವ, ದಾವಣಗೆರೆ ವೃತ್ತಕ್ಕೆ ಹೆಸರು

    ದಾವಣಗೆರೆ: ಕಾರ್ಗಿಲ್ ಯುದ್ಧದಲ್ಲಿ ಪಾಕ್ ಆಕ್ರಮಿತ ಟೋಲೋಲಿಂಗ್ ಪರ್ವತವನ್ನು 1999ರಲ್ಲಿ ವಶಪಡಿಸಿಕೊಳ್ಳುವಲ್ಲಿ, ರಜಪೂತಾನ ರೈಫಾಲ್ಸ್‌ನ ಕಮಾಂಡೆಂಟ್ ಆಗಿದ್ದ ಕರ್ನಲ್ ರವೀಂದ್ರನಾಥ್ ನೇತೃತ್ವದ ಸೇನೆ ಯಶಸ್ಸು ಗಳಿಸಿತ್ತು. ದಾವಣಗೆರೆಯ ಎಸ್. ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಉದ್ಯಾನ ಸಮೀಪದ ವೃತ್ತಕ್ಕೆ ಅವರ ಹೆಸರನ್ನು ಶನಿವಾರ ನಾಮಕರಣ ಮಾಡಲಾಯಿತು.

    ನಗರಪಾಲಿಕೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಲಾಫಲಕ ಅನಾವರಣಗೊಳಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ದೇಶದ ಗಡಿ ರಕ್ಷಣೆಯಲ್ಲಿ ವೀರಯೋಧರು ಸಲ್ಲಿಸಿದ ಸೇವೆ, ತ್ಯಾಗಗಳ ಕುರಿತು ಭಾರತೀಯರಾದ ನಾವು ಹೆಮ್ಮೆ ಪಡುವ ಜತೆಗೆ ಗೌರವಿಸಬೇಕು ಎಂದು ಹೇಳಿದರು.
    ಕರ್ನಲ್ ಎಂ.ಬಿ.ರವೀಂದ್ರನಾಥ್ ಅವರ ವಿಶಿಷ್ಟ ಸೇವೆಗಾಗಿ ಕೇಂದ್ರ ಸರ್ಕಾರ ವೀರಚಕ್ರ ಪ್ರಶಸ್ತಿ ನೀಡಿತ್ತು. ಅವರ ಹೆಸರು ಚಿರಸ್ಥಾಯಿಯಾಗಿಸಲು ವೃತ್ತಕ್ಕೆ ನಾಮಕರಣ ಮಾಡಿ ಗೌರವಿಸಲಾಗಿದೆ ಎಂದರು.
    ಶಾಸಕ ಎಸ್.ಎ.ರವೀಂದ್ರನಾಥ್, ಮಾಜಿ ಮೇಯರ್ ಎಸ್.ಟಿ.ವೀರೇಶ್, ಕರ್ನಲ್ ರವೀಂದ್ರನಾಥ್ ಅವರ ಸಂಬಂಧಿ ಸರೋಜಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ಕೆ.ಎಂ.ಸುರೇಶ್, ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮೇಯರ್ ಜಯಮ್ಮ ಗೋಪಿನಾಯ್ಕ, ಉಪಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಸದಸ್ಯರಾದ ಕೆ. ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್, ಎ.ನಾಗರಾಜ್, ಚಮನ್‌ಸಾಬ್, ಆಯುಕ್ತ ವಿಶ್ವನಾಥ ಮುದಜ್ಜಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts