More

    ಕಾರ್ಗಲ್: ವನ್ಯಜೀವಿ ಸಪ್ತಾಹದ ಅಂಗವಾಗಿ ಬೈಕ್ ಜಾಥಾ

    ಕಾರ್ಗಲ್: ಪ್ರತಿಯೊಂದು ವನ್ಯಜೀವಿಯ ಉಳಿವು, ಮತ್ತೊಂದು ವನ್ಯಜೀವಿಯನ್ನು ಅವಲಂಬಿಸಿದೆ. ಹಾಗಾಗಿ ಜೀವವೈವಿಧ್ಯತೆಯ ಉಳಿವಿನಲ್ಲಿ ಒಂದೊಂದು ವನ್ಯಜೀವಿಗಳ ಉಳಿವು ಕೂಡ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದು ಶಿವಮೊಗ್ಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಸುರೇಶ್ ಹೇಳಿದರು.
    ಕಾರ್ಗಲ್ ಹಾಗೂ ಶಿವಮೊಗ್ಗ ವನ್ಯಜೀವಿ ವಿಭಾಗದಿಂದ 68ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಗುರುವಾರ ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಬೈಕ್ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಕಾಡು, ಗಿಡ ಹಾಗೂ ಮರಗಳೆಂಬ ಕಾರ್ಖಾನೆಗಳು ನಮಗೆ ಉಚಿತವಾಗಿ ಬದುಕಲು ಬೇಕಾದ ಮೂರು ಮೂಲ ಅಗತ್ಯಗಳಾದ ಗಾಳಿ, ನೀರು ಹಾಗೂ ಆಹಾರವನ್ನು ನೀಡುತ್ತಿವೆ. ಈ ಅಮೂಲ್ಯವಾದ ಗಿಡ, ಮರಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
    ನಮ್ಮಲ್ಲಿರುವ ಅಪಾರ ಅರಣ್ಯ ಸಂಪತ್ತನ್ನು ಕೇವಲ ಸರ್ಕಾರದಿಂದ ರಕ್ಷಿಸುವುದು ಅಸಾಧ್ಯ. ಇದಕ್ಕೆ ನಾಡಿನ ಜನತೆಯ ಸಹಕಾರ ಅತ್ಯಗತ್ಯ. ಮಾನವ ಕುಲದ ಅಭ್ಯದುಯಕ್ಕಾಗಿ ಅರಣ್ಯ ಸಂಪತ್ತನ್ನು ಉಳಿಸುವುದು ಮತ್ತು ಬೆಳೆಸಿ ಕಾಪಾಡುವುದು ಪ್ರಸ್ತುತ ಕಾಲಘಟ್ಟದಲ್ಲಿ ಅತೀ ಪ್ರಮುಖವಾದ ಜವಾಬ್ದಾರಿ ಎಂದು ತಿಳಿಸಿದರು.
    ವಲಯ ಅರಣ್ಯಾಧಿಕಾರಿ ಸಂಧ್ಯಾ ಮಾತನಾಡಿ, ಶರಾವತಿ ಸಿಂಗಳೀಕ ಅಭಯಾರಣ್ಯವು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಸುಮಾರು 930.16 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ ಎಂದರು. ಈ ಪರ್ವತ ಶ್ರೇಣಿಯಲ್ಲಿ ಶರಾವತಿ ನದಿಯಿಂದ ನಿರ್ಮಾಣವಾಗಿರುವ ಅನೇಕ ಕಣಿವೆಗಳಿದ್ದು, ಅತ್ಯಂತ ಬೃಹತ್ತಾದ ಮರಗಳನ್ನು ಹೊಂದಿದೆ. ಅಳಿವಿನಂಚಿನಲ್ಲಿರುವ ಸಿಂಗಳೀಕ, ವನ್ಯಜೀವಿಗಳಾದ ಹುಲಿ, ಚಿರತೆ, ಕರಡಿ, ಜಿಂಕೆ ಮುಂತಾದ ವನ್ಯಪ್ರಾಣಿಗಳ ಆವಾಸಸ್ಥಾನವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts