More

    ಕಾರವಾರ ಜಿಪಂ, ತಾಪಂ ಮೀಸಲಾತಿ ಪ್ರಕಟ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ 40 ಜಿಪಂ ಹಾಗೂ 129 ತಾಪಂ ಕ್ಷೇತ್ರಗಳಿಗೆ ಕರಡು ಮೀಸಲಾತಿ ನಿಗದಿ ಮಾಡಿ ಚುನಾವಣಾ ಆಯೋಗ ಜುಲೈ 1 ರಂದು ಆದೇಶಿಸಿದೆ. ಕರ್ನಾಟಕ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿದ್ದು, ಜುಲೈ 8 ರ ಒಳಗೆ ಆಕ್ಷೇಪಣೆಗಳನ್ನು ಆಯೋಗಕ್ಕೆ ಸಲ್ಲಿಸಬಹುದಾಗಿದೆ. ಏಪ್ರೀಲ್​ನಲ್ಲಿ ಆಯೋಗವು ಮೀಸಲಾತಿ ನಿಯಮಾವಳಿ ಪ್ರಕಟಿಸಿತ್ತು. ನಂತರ ಕ್ಷೇತ್ರಗಳ ಗಡಿ ಗುರುತು ಮಾಡಿ ಆದೇಶಿಸಿತ್ತು.

    ಜಿಪಂ ಮೀಸಲಾತಿ: ಚಿತ್ತಾಕುಲಾ, ಮಲ್ಲಾಪುರ, ರಾಮನಗರ, ತೇರಗಾಂವ, ಬೆಳಕೆ, ಹಳದೀಪುರ, ಕಾಸರಕೋಡ, ಬದನಗೋಡ, ಹುತ್ತಗಾರ, ದೀವಗಿ ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. ಬೆಳಸೆ, ಅಣಲೆಬೈಲ್, ಕಿರವತ್ತಿ, ಪಾಳ, ಮೈನಳ್ಳಿ, ಮಾವಳ್ಳಿ ಕ್ಷೇತ್ರಗಳು ಹಿಂದುಳಿದ ‘ಅ’ವರ್ಗ ಮಹಿಳೆಗೆ ಮೀಸಲಾಗಿವೆ. ಅಮದಳ್ಳಿ ಎಸ್​ಸಿಗೆ, ಬೆಳವಟಗಿ, ಕಾನಗೋಡ ಕ್ಷೇತ್ರಗಳು ಎಸ್​ಸಿಗೆ, ಕಂಪ್ಲಿ ಕ್ಷೇತ್ರ ಎಸ್​ಟಿ ಮಹಿಳೆಗೆ ಮಹಿಳೆಗೆ ಮೀಸಲಾಗಿವೆ. ಗೋಕರ್ಣ, ಖರ್ವಾ ಕ್ಷೇತ್ರಗಳು ಹಿಂದುಳಿದ ‘ಬ’ ವರ್ಗಕ್ಕೆ, ಜೊಯಿಡಾ ಕ್ಷೇತ್ರ ಹಿಂದುಳಿದ ‘ಬ’ ವರ್ಗ ಮಹಿಳೆಗೆ ಮೀಸಲಾಗಿದೆ. ಕಾವಲವಾಡ, ಹೆಬಳೆ, ಬಚಗಾಂವ, ಬೆಳಂಬಾರ ಕ್ಷೇತ್ರಗಳು ಹಿಂದುಳಿದ ‘ಅ’ವರ್ಗಕ್ಕೆ ಮೀಸಲಾಗಿವೆ. ಉಳಿದ ಕ್ಷೇತ್ರಗಳು ಸಾಮಾನ್ಯಕ್ಕೆ ತೆರೆದುಕೊಂಡಿವೆ.

    ತಾಲೂಕು ಪಂಚಾಯಿತಿ

    ಕಾರವಾರ: ಮಲ್ಲಾಪುರ ಕ್ಷೇತ್ರ-ಎಸ್​ಟಿ(ಮಹಿಳೆ), ಕಡವಾಡ ಕ್ಷೇತ್ರ-ಎಸ್​ಸಿ ಮಹಿಳೆ, ಚಿತ್ತಾಕುಲಾ ಹಾಗೂ ಘಾಡಸಾಯಿ-ಬಿಸಿಎಂ ‘ಅ’ ಮಹಿಳೆ, ಅಮದಳ್ಳಿ ಹಾಗೂ ಚೆಂಡಿಯಾ-ಸಾಮಾನ್ಯ ಮಹಿಳೆ, ದೇವಳಮಕ್ಕಿ, ಮುಡಗೇರಿ, ಕಿನ್ನರ- ಸಾಮಾನ್ಯ, ಮಾಜಾಳಿ-ಬಿಸಿಎಂ‘ಬ’.

    ಜೊಯಿಡಾ: ಪ್ರಧಾನಿ ಕ್ಷೇತ್ರ-ಎಸ್​ಟಿ(ಮ), ರಾಮನಗರ-ಎಸ್​ಸಿ(ಮ),ಕುಂಬಾರವಾಡ-ಬಿಸಿಎಂ‘ಅ’(ಮ), ಅಖೇತಿ, ನಂದಿಗದ್ದೆ-ಸಾಮಾನ್ಯ(ಮ), ಜೊಯಿಡಾ-ಬಿಸಿಎಂ ‘ಬ’, ಕ್ಯಾಸಲ್​ರಾಕ್, ಅಸು, ಬಜಾರಕುಣಂಗ, ಗಣೇಶಗುಡಿ-ಸಾಮಾನ್ಯ.

    ಹಳಿಯಾಳ: ಭಾಗವತಿ ಕ್ಷೇತ್ರ-ಎಸ್​ಟಿ(ಮ),ಭುಜರ ಕುಂಚನಳ್ಳಿ-ಎಸ್​ಸಿ(ಮ),ಕಾವಲವಾಡ, ಮಂಗಳವಾಡ-ಬಿಸಿಎಂ‘ಅ’(ಮ),ಅರ್ಲವಾಡ, ತೇರಗಾಂವ-ಸಾಮಾನ್ಯ(ಮ), ಬೆಳವಟಗಿ-ಬಿಸಿಎಂ‘ಬ’, ಮುಂಡವಾಡ, ಗುಂಡೋಳ್ಳಿ, ಯಡೋಗಾ, ಸಾಂಬ್ರಾಣಿ-ಸಾಮಾನ್ಯ.

    ದಾಂಡೇಲಿ: ಬೊಮ್ಮನಹಳ್ಳಿ ಕ್ಷೇತ್ರ-ಎಸ್​ಟಿ(ಮ),ಅಂಬಿಕಾನಗರ2-ಎಸ್​ಸಿ(ಮ), ನವಗ್ರಾಮ, ಬಡಾಕಾನಶಿರಡಾ1-ಬಿಸಿಎಂ‘ಅ’(ಮ), ಆಲೂರು, ಅಂಬಿಕಾನಗರ3-ಸಾಮಾನ್ಯ(ಮ), ಕೇರವಾಡ-ಬಿಸಿಎಂ‘ಬ’, ವಿಟ್ನಾಳ, ಗಾಂವಠಾಣ, ಬಡಾಕಾನಶಿರಡಾ2, ಅಂಬಿಕಾನಗರ1-ಸಾಮಾನ್ಯ.

    ಭಟ್ಕಳ: ಬಿಳಲಖಂಡ ಕ್ಷೇತ್ರ-ಎಸ್​ಟಿ(ಮ), ಮುಂಡಳ್ಳಿ-ಎಸ್​ಸಿ(ಮ),ಮಾವಳ್ಳಿ-ಬಿಸಿಎಂ‘ಅ’(ಮ), ಬೇಂಗ್ರೆ, ಬೆಳಕೆ-ಸಾಮಾನ್ಯ (ಮ), ಶಿರಾಲಿ-ಬಿಸಿಎಂ‘ಅ’, ಕಾಯ್ಕಿಣಿ, ಹೆಬಳೆ, ಬೈಲೂರು-ಸಾಮಾನ್ಯ.

    ಹೊನ್ನಾವರ: ಹಳದೀಪುರ ಕ್ಷೇತ್ರ-ಎಸ್​ಟಿ(ಮ), ರ್ಕ-ಎಸ್​ಸಿ(ಮ),ನಗರ ಬಸ್ತಿಕೇರಿ, ಕಾಸರಕೋಡ-ಬಿಸಿಎಂ‘ಅ’(ಮ), ಚಂದಾವರ,ಬಳಕೂರು-ಸಾಮಾನ್ಯ(ಮ), ಸಾಲಕೋಡ-ಬಿಸಿಎಂ‘ಬ’, ಹಡಿನಬಾಳ, ಹೇರಂಗಡಿ,ಖರ್ವಾ, ಮಾಗೋಡ-ಸಾಮಾನ್ಯ.

    ಶಿರಸಿ: ಬದನಗೋಡ ಕ್ಷೇತ್ರ-ಎಸ್​ಟಿ(ಮ),ಬನವಾಸಿ-ಎಸ್​ಸಿ(ಮ), ಬಚಗಾಂವ,ಹುಲೇಕಲ್-ಬಿಸಿಎಂ‘ಅ’(ಮ), ಹುತ್ತಗಾರ-ಸಾಮಾನ್ಯ(ಮ), ತೆರಕನಳ್ಳಿ-ಬಿಸಿಎಂ‘ಬ’, ಮರಗುಂಡಿ, ಮತ್ತಿಗಾರ, ಶಿವಳ್ಳಿ, ಎಕ್ಕಂಬಿ-ಸಾಮಾನ್ಯ.

    ಮುಂಡಗೋಡ: ಕೋಡಂಬಿ ಕ್ಷೇತ್ರ-ಎಸ್​ಟಿ(ಮ),ಕಾತೂರ-ಎಸ್​ಸಿ(ಮ),ಸಾಲಗಾಂವ-ಬಿಸಿಎಂ‘ಅ’(ಮ),ಇಂದೂರ, ಮಳಗಿ-ಸಾಮಾನ್ಯ(ಮ), ಮೈನಳ್ಳಿ-ಬಿಸಿಎಂ‘ಅ’, ಚೌಡಳ್ಳಿ-ಎಸ್​ಸಿ, ನಂದಿಕಟ್ಟಾ, ಹುನಗುಂದ, ಬಾಚಣಕಿ -ಸಾಮಾನ್ಯ.

    ಯಲ್ಲಾಪುರ: ಕಿರವತ್ತಿ ಕ್ಷೇತ್ರ-ಎಸ್​ಟಿ(ಮ),ತಾರೆಹಳ್ಳಿ-ಎಸ್​ಸಿ(ಮ), ಚಂದಗುಳಿ, ಮಂಚಿಕೇರಿ-ಬಿಸಿಎಂ‘ಅ’(ಮ), ಕುಂದರಗಿ,ಹುಣಶೆಟ್ಟಿಕೊಪ್ಪ-ಸಾಮಾನ್ಯ(ಮ), ಆನಗೋಡ-ಬಿಸಿಎಂ‘ಅ’, ಕಳಚೆ, ಮಾವಿನಮನೆ, ಅರಬೈಲ್, ಕಣ್ಣಿಗೇರಿ-ಸಾಮಾನ್ಯ.

    ಸಿದ್ದಾಪುರ: ಹರಿಗಾರ ಕ್ಷೇತ್ರ-ಎಸ್​ಟಿ(ಮ), ಹಲಗೇರಿ-ಎಸ್​ಸಿ(ಮ), ಕಾನಗೋಡ-ಶಿರಳಗಿ-ಬಿಸಿಎಂ‘ಅ’(ಮ), ಮುಠ್ಠಳ್ಳಿ, ಬೇಡ್ಕಣಿ-ಸಾಮಾನ್ಯ(ಮ), ಅಣಲೆಬೈಲ್-ಬಿಸಿಎಂ‘ಬ’, ತಾರೆಹಳ್ಳಿ, ಕ್ಯಾದಗಿ, ಇಟಗಿ, ಮನ್ಮನೆ-ಸಾಮಾನ್ಯ.

    ಕುಮಟಾ: ಮಿರ್ಜಾನ ಕ್ಷೇತ್ರ-ಎಸ್​ಟಿ(ಮ), ಹೆಗಡೆ-ಎಸ್​ಸಿ(ಮ),ಗೋಕರ್ಣ,ಮೂರೂರು-ಬಿಸಿಎಂ‘ಅ’(ಮ),ಹೊಲನಗದ್ದೆ, ಕಲಬಾಗ-ಸಾಮಾನ್ಯ(ಮ), ದೀವಗಿ-ಬಿಸಿಎಂ‘ಬ’, ಹಿರೇಗುತ್ತಿ, ಕಾಗಾಲ,ಕೂಜಳ್ಳಿ, ನಾಡುಮಾಸ್ಕೇರಿ-ಸಾಮಾನ್ಯ.

    ಅಂಕೋಲಾ: ಹಿಲ್ಲೂರು ಕ್ಷೇತ್ರ-ಎಸ್​ಟಿ(ಮ),ಬೋಳೆ-ಎಸ್​ಸಿ(ಮ),ಬೇಲೆಕೇರಿ, ಅಗಸೂರು-ಬಿಸಿಎಂ‘ಅ’(ಮ), ಬಾವಿಕೇರಿ, ಬೆಳಸೆ-ಸಾಮಾನ್ಯ(ಮ), ಬೆಳಂಬಾರ-ಬಿಸಿಎಂ‘ಬ’, ಅವರ್ಸಾ, ಅಲಗೇರಿ, ಬೊಬ್ರುವಾಡ, ಉಳುವರೆ-ಸಾಮಾನ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts