More

    ಕಾಯಂ ಶಿಕ್ಷಕರ ನೇಮಕಾತಿಗೆ ಒತ್ತಾಯ: ವಿದ್ಯಾರ್ಥಿಗಳೊಂದಿಗೆ ಬೀದಿಗಿಳಿದ ಗ್ರಾಮಸ್ಥರು

    ಕಾರ್ಗಲ್: ಇಲ್ಲಿಗೆ ಸಮೀಪದ ಕಾಳಮಂಜಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟಿಸಿದರು.
    ಸ್ವಾತಂತ್ರೃ ದಿನಾಚರಣೆ ದಿನವಾದ ಸೋಮವಾರ ಧ್ವಜಾರೋಹಣ ನೆರವೇರಿಸಿದ ನಂತರ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಗ್ರಹಿಸಿ ಶಾಲೆ ಎದುರು ಧರಣಿ ನಡೆಸಿದರು.
    ಕಾಳಮಂಜಿ ಗ್ರಾಮದ 1 ರಿಂದ 5ನೇ ತರಗತಿ ಶಾಲೆಯಲ್ಲಿ ಬುಡಕಟ್ಟು ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾಲೆಗಿದ್ದ ಒಬ್ಬರು ಶಿಕ್ಷಕರನ್ನು ಮೂರು ತಿಂಗಳ ಹಿಂದೆ ಬೇರೆಡೆಗೆ ವರ್ಗಾವಣೆ ಮಾಡಲಾಯಿತು. ಇದೀಗ ಅರಳಗೋಡಿನಿಂದ ಅತಿಥಿ ಶಿಕ್ಷಕರೊಬ್ಬರು ಬರುತ್ತಿದ್ದು, ಶಾಲೆಯ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತಿದೆ ಎಂದು ಗ್ರಾಮಸ್ಥರು ಕಿಡಿ ಕಾರಿದರು.
    ವಿಷಯ ತಿಳಿದು ಸ್ಥಳಕ್ಕಾಗಮಿಸಿ ಕಾರ್ಗಲ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ತಿರುಮಲೇಶ್, ಶಿಕ್ಷಣಾಧಿಕಾರಿಗಳ ಜತೆ ಚರ್ಚಿಸಿ ಶಿಕ್ಷಕರ ಕೊರತೆ ನೀಗಿಸುವ ಭರವಸೆ ನೀಡಿದರು. ಕೊನೆಗೆ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಇದರೊಂದಿಗೆ ಪಿಎಸ್‌ಐ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.
    ಸ್ಥಳಕ್ಕೆ ಸಿಆರ್‌ಪಿ ಭಾನುಪ್ರಕಾಶ್ ಆಗಮಿಸಿದ್ದರು. ಗ್ರಾಮಸ್ಥರಾದ ಗಿರೀಶ್ ಜನ್ನೆ, ಶರತ್ ಕಾಳಮಂಜಿ, ಭೀಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts