More

    ಕಾಮಗಾರಿ ಕಳಪೆಯಾದರೆ ಶಿಸ್ತುಕ್ರಮ


    ಯಾದಗಿರಿ: ಜಲ ಜೀವನ್ ಮಿಷನ್ ಯೋಜನೆಯೆಡಿ ಪ್ರತಿ ಮನೆ ಮನೆಗೆ ನಳಗಳ ಸಂಪರ್ಕ, ಸ್ಟೋರೇಜ್ ಟ್ಯಾಂಕನಿಂದ ಗ್ರಾಮದಲ್ಲಿ ವಿತರಣೆಯ ಪ್ರಗತಿಯಲ್ಲಿರುವ ಪೈಪ್ಲೈನ್ ಕಾಮಗಾರಿಗಳು ಗುಣಮಟ್ಟದ್ದಾಗಿರಲಿ. ಒಂದು ವೇಳೆ ಕಳಪೆ ಕಂಡು ಬಂದರೆ ಸಂಬಂಸಿದ ಅಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಪಂ ಸಿಇಒ ಗರೀಮಾ ಪನ್ವಾರ ಎಚ್ಚರಿಕೆ ನೀಡಿದರು.


    ಶಹಾಪುರ ತಾಲೂಕಿನ ಗೋಗಿ ಗ್ರಾಮಕ್ಕೆ ಭೇಟಿ ನೀಡಿ, ನೀರಿನ ಟ್ಯಾಂಕ್ ಸರಬರಾಜು ಮಾಡುವ ಪೈಪ್ಲೈನ್ ಕಾಮಗಾರಿ ಪರಿಶೀಲನೆ ನಡೆಸಿ, ಪ್ರತಿ ಮನೆಯ ಮುಂದೆ ಅಳವಡಿಸುತ್ತಿರುವ ನಳದ ಸಂಪರ್ಕ, ಮೀಟರ್, ಪೈಪ್ಗಳು ಉತ್ತಮ ಗುಣಮಟ್ಟದಾಗಿರಲಿ. ಹಾಗೂ ಕುಡಿಯುವ ನೀರಿನ ಮೂಲಗಳ ಸುತ್ತ- ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

    ನಂತರ ಸೇವಾ ನಾಯ್ಕ್ ತಾಂಡಕ್ಕೆ ಭೇಟಿ ನೀಡಿ ಮನೆ ಮನೆಗೆ ನಳ ಸಂಪರ್ಕದ ಕಾಮಗಾರಿಗಳನ್ನು ಪರಿಶೀಲಿಸಿ, ಮನೆಯವರಿಗೆ ಪ್ರತಿ ದಿನ ನೀರು ಬರುತ್ತಿರುವ ಕುರಿತು ವಿಚಾರಿಸಿದರು. ನೀರಿನ ಮೀಟರ್ ಕಾರ್ಯತ್ಮಕವಾಗಿದೆಯೇ ಎಂದು ಖುದ್ದಾಗಿ ಪರಿಶೀಲಿಸಿದ ಅವರು, ನೀರನ್ನು ಮಿತವಾಗಿ ಬಳಸಬೇಕು. ಅಲ್ಲದೆ, ಮರುಬಳಕೆ ಮಾಡಿಕೊಳ್ಳಲು ಇಂಗು ಗುಂಡಿಯ ಮೂಲಕ ಇಂಗಸಿ, ರಸ್ತೆಯ ಮೇಲೆ ಹರಿದು ಹೊಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

    ತಾಪಂ ಇಒ ಸೋಮಶೇಖರ ಬಿರೆದಾರ, ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ರಾಹುಲ್, ಸಹಾಯಕ ನಿದರ್ೇಶಕ ಭಿಮಣ್ಣಗೌಡ, ಶಿವಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts