More

    ಕಾಡು, ಹಳ್ಳಿ ಸುತ್ತಿದ ಅನುಭವದ ಹೂರಣ

    ಹುಬ್ಬಳ್ಳಿ: ಪರಿಸರ ಬರಹಗಾರ ಶಿವಾನಂದ ಕಳವೆ ರಚನೆಯ ‘ಮಧ್ಯಘಟ್ಟ’ ಕಾದಂಬರಿಯನ್ನು ಸಾಹಿತ್ಯ ಪ್ರಕಾಶನದಿಂದ ಇಲ್ಲಿನ ಕೊಪ್ಪಿಕರ ರಸ್ತೆಯ ಸಾಹಿತ್ಯ ಭಂಡಾರ ಪುಸ್ತಕಾಲಯದಲ್ಲಿ ಬುಧವಾರ ಆನ್​ಲೈನ್ ಮೂಲಕ ಬಿಡುಗಡೆ ಮಾಡಲಾಯಿತು.

    ಪರಿಸರ ಮತ್ತಿತರ ವಿಷಯಗಳ ಕುರಿತು 26 ಪುಸ್ತಕಗಳನ್ನು ರಚಿಸಿರುವ ಕಳವೆಯವರ ಮೊದಲ ಕಾದಂಬರಿ ಇದಾಗಿದೆ. ಎರಡೂವರೆ ದಶಕಗಳ ಕಾಲ ಕಾಡು, ಹಳ್ಳಿಗಳಲ್ಲಿ ಸುತ್ತಾಡಿದ ಅನುಭವದ ಆಧಾರದಲ್ಲಿ ಕಾದಂಬರಿ ಕಟ್ಟಿಕೊಟ್ಟಿದ್ದಾರೆ.

    ಉದ್ಘಾಟನೆ ಕಾರ್ಯಕ್ರಮದಲ್ಲಿ ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಕಾಡು, ಹಳ್ಳಿಗಳಲ್ಲಿ ವಾಸವಾಗಿರುವವರ ಕುರಿತ ಅಧ್ಯಯನವೇ ಕಾದಂಬರಿ ರೂಪವಾಗಿ ಹೊರಬಂದಿದೆ. ದಾರಿಯೇ ಇಲ್ಲದ ಹಳ್ಳಿಯಲ್ಲಿ ರಸ್ತೆ ನಿರ್ವಣವಾದಾಗ ಚಕ್ಕಡಿಯಿಂದ ಶುರುವಾಗಿ ವಾಹನ ಓಡಾಡಿದಾಗ ಆಗುವ ಬದಲಾವಣೆಗಳು ಮತ್ತು ಅವುಗಳ ಕುರಿತ ಚರ್ಚೆ, ಹೊಸ ಜನ ಬಂದಾಗ ಕೃಷಿಯಲ್ಲಿನ ಬದಲಾವಣೆಗಳು… ಹೀಗೆ ಕಾಡು ಸುತ್ತಿದ ವಿಶೇಷ ಅನುಭವಗಳನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದೇನೆ ಎಂದರು.

    ನಮ್ಮ ಹಿರಿಯರು ಹಳ್ಳಿಗಳನ್ನು ಕಟ್ಟಿದ ರೀತಿ ಅದ್ಭುತ. ಆರೋಗ್ಯ, ಆಹಾರಕ್ಕಾಗಿ ಹಳ್ಳಿ ಬೇಕಾಗಿದೆ. ಎಲ್ಲ ಒಳ್ಳೆಯ ಸಂಗತಿಗಳು ಹಳ್ಳಿಗಳಲ್ಲಿವೆ. ಆದರೆ, ಆ ಹಳ್ಳಿಗಳಿಗೆ ಇಂದು ನಾವು ಪ್ಲಾಸ್ಟಿಕ್ ಮತ್ತಿತರ ಕೆಟ್ಟ ಸಂಗತಿಗಳನ್ನು ಕೊಂಡೊಯ್ಯುತ್ತಿದ್ದೇವೆ. ಅದನ್ನು ಬಿಟ್ಟು ಹಳ್ಳಿ ತನ್ನಂತೆ ತಾನು ಇರಲು ಬಿಡಬೇಕು ಎಂಬುದು ಕಾದಂಬರಿಯ ಆಶಯವಾಗಿದೆ ಎಂದರು. ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ, ಸಾಹಿತಿ ಆರ್.ಡಿ. ಹೆಗಡೆ ಆಲ್ಮನೆ, ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts